ಇ–ಸ್ಕೂಟರ್‌ಗೆ ₹10 ಸಾವಿರ ಸಬ್ಸಿಡಿ
‘ಪಿಎಂ ಇ–ಡ್ರೈವ್’ ಯೋಜನೆಯಡಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಿಗೆ ಅವುಗಳ ಬ್ಯಾಟರಿ ಸಾಮರ್ಥ್ಯ ಆಧಾರದ ಮೇಲೆ ಸಬ್ಸಿಡಿ ದೊರೆಯಲಿದೆ. ಪ್ರತಿ ಕೆಡಬ್ಲ್ಯುಎಚ್‌ಗೆ ₹5 ಸಾವಿರ ನಿಗದಿಪಡಿಸಲಾಗಿದೆ. ಮೊದಲ ವರ್ಷದಲ್ಲಿ ಗರಿಷ್ಠ ಸಬ್ಸಿಡಿ ₹10 ಸಾವಿರ ದಾಟುವಂತಿಲ್ಲ. ಎರಡನೇ ವರ್ಷದಲ್ಲಿ ಪ್ರತಿ ಕೆಡಬ್ಲ್ಯುಎಚ್‌ಗೆ ₹2500 ಪಾವತಿಸಲಾಗುತ್ತದೆ. ಈ ಮೊತ್ತವು ₹5 ಸಾವಿರ ದಾಟುವಂತಿಲ್ಲ. ಇ–ಆಟೊರಿಕ್ಷಾ ಸೇರಿ ತ್ರಿಚಕ್ರವಾಹನಗಳಿಗೆ ಮೊದಲ ವರ್ಷ ₹25 ಸಾವಿರ ಹಾಗೂ ಎರಡನೇ ವರ್ಷದಲ್ಲಿ ₹12500 ಸಬ್ಸಿಡಿ ದೊರೆಯಲಿದೆ. ಎಲ್5 ವರ್ಗಕ್ಕೆ ಸೇರಿದ (ಸರಕು ಸಾಗಣೆ ತ್ರಿಚಕ್ರವಾಹನ) ವಾಹನಗಳಿಗೆ ಪ್ರಥಮ ವರ್ಷ ₹50 ಸಾವಿರ ಹಾಗೂ ದ್ವಿತೀಯ ವರ್ಷದಲ್ಲಿ ₹25 ಸಾವಿರ ಸಬ್ಸಿಡಿ ಸಿಗಲಿದೆ. ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸುವ ಓಲಾ ಟಿವಿಎಸ್ ಅಥೆರ್ ಎನರ್ಜಿ ಹೀರೊ ವಿದಾ (ಹೀರೊ ಮೋಟೊಕಾರ್ಪ್) ಮತ್ತು ಚೇತಕ್ ಬಜಾಜ್‌ನ ಬ್ಯಾಟರಿ ಸಾಮರ್ಥ್ಯ 2.88ರಿಂದ 4 ಕೆಡಬ್ಲ್ಯುಎಚ್ ಇದೆ. ಇವುಗಳ ಬೆಲೆ ₹90 ಸಾವಿರದಿಂದ ₹1.5 ಲಕ್ಷ ಇದೆ.