ನವದೆಹಲಿ: ಜೂನ್ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಮೇ ತಿಂಗಳಿಗಿಂತ ಕಡಿಮೆಯಾಗಿದೆ.

ಹಿಂದಿನ ತಿಂಗಳ ₹ 1,00,289 ಕೋಟಿಗೆ ಹೋಲಿಸಿದರೆ ಜೂನ್ನಲ್ಲಿ ₹ 99,939 ಕೋಟಿ ತೆರಿಗೆ ಸಂಗ್ರಹವಾಗಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ₹ 95,610 ಕೋಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ 4.52ರಷ್ಟು ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.

ಕೇಂದ್ರೀಯ ಜಿಎಸ್ಟಿ (ಸಿಜಿಎಸ್ಟಿ) ₹ 18,366 ಕೋಟಿ, ರಾಜ್ಯ ಜಿಎಸ್ಟಿ (ಎಸ್ಜಿಎಸ್ಟಿ) ₹ 47,777 ಕೋಟಿ ಮತ್ತು ಸಮಗ್ರ ಜಿಎಸ್ಟಿ (ಐಜಿಎಸ್ಟಿ) ₹ 8,457 ಕೋಟಿಗಳಷ್ಟಿದೆ. ಜೂನ್ ತಿಂಗಳಾಂತ್ಯಕ್ಕೆ ಸಲ್ಲಿಸಲಾದ ಜಿಎಸ್ಟಿಆರ್–3ಬಿ ರಿಟರ್ನ್ಸ್ಗಳ ಸಂಖ್ಯೆಯು 74.38 ಲಕ್ಷದಷ್ಟಿದೆ. ಮೇ ತಿಂಗಳಲ್ಲಿ ಇದು 72.45 ಲಕ್ಷದಷ್ಟಿತ್ತು.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್ಟಿ ಸಂಗ್ರಹದ ಬಜೆಟ್ ಗುರಿ ತಲುಪಲಾಗುವುದು’ ಎಂದು ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

‘ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತೆರಿಗೆ ಸಂಗ್ರಹವು ಸಾಧಾರಣ ಮಟ್ಟದಲ್ಲಿ ಇರುವುದು ಕಳವಳಕಾರಿ ಸಂಗತಿಯಾಗಿದೆ. ಲೆಕ್ಕಪತ್ರ ತಪಾಸಣೆ ಮತ್ತು ಪರಿಶೀಲನೆ ಹೆಚ್ಚಿಸುವ ಅಗತ್ಯ ಇದೆ’ ಎಂದು ಪಿಡಬ್ಲ್ಯುಸಿ ಇಂಡಿಯಾ ಪಾರ್ಟನರ್ ಪ್ರತೀಕ್ ಜೈನ್ ಹೇಳಿದ್ದಾರೆ.

‘ನಿರೀಕ್ಷೆಗಿಂತ ಕಡಿಮೆ ತೆರಿಗೆ ಸಂಗ್ರಹವಾಗಿರುವುದನ್ನು ಗಮನಿಸಿದರೆ, ಜಿಎಸ್ಟಿಎನ್ನಲ್ಲಿ ಲಭ್ಯ ಇರುವ ದತ್ತಾಂಶಗಳ ವಿಶ್ಲೇಷಣೆ ನಡೆಸಿ, ಸೋರಿಕೆಗೆ ತುರ್ತಾಗಿ ಕಡಿವಾಣ ಹಾಕುವ ಅಗತ್ಯ ಇದೆ’ ಎಂದು ಡೆಲಾಯ್ಟ್ ಇಂಡಿಯಾ ಪಾರ್ಟನರ್ ಎಂ. ಎಸ್. ಮಣಿ ಪ್ರತಿಕ್ರಿಯಿಸಿದ್ದಾರೆ.

ಮುಂಬರುವ ತಿಂಗಳುಗಳಲ್ಲಿ ಜಿಎಸ್ಟಿ ಸಂಗ್ರಹ ಹೆಚ್ಚಳಗೊಳ್ಳುವ ಬಗ್ಗೆ ನಾನು ನಿಮಗೆ ಭರವಸೆ ನೀಡುವೆ.
-ಅನುರಾಗ್ ಠಾಕೂರ್, ಹಣಕಾಸು ರಾಜ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.