ಹುಬ್ಬಳ್ಳಿ: ಕೋವಿಡ್ 19 ಕಾರಣದಿಂದ ಬಹಳಷ್ಟು ಕಾರ್ಖಾನೆಗಳು ಮುಚ್ಚಿವೆ. ಆದರೆ, ಇಲ್ಲೊಬ್ಬರು ತಮ್ಮ ಕೈಗಾರಿಕೆಗೆ ಎದುರಾಗಿದ್ದ ಸವಾಲನ್ನೇ ಅವಕಾಶವಾಗಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

ತಾಲ್ಲೂಕಿನ ಬು. ಅರಳಿಕಟ್ಟಿ ಹಾಗೂ ನಗರದ ಬಂಕಾಪುರ ಚೌಕ್ ಬಳಿ ‘ಬುರಟ್ ಎಂಟರ್ಪ್ರೈಸಸ್‘ ಹೆಸರಿನಲ್ಲಿ ಪ್ರವೀಣ ಬುರಟ್ ಅವರು ಗಾರ್ಮೆಂಟ್ ನಡೆಸುತ್ತಿದ್ದರು.

ಶಾಲಾ ಮಕ್ಕಳ ಸಮವಸ್ತ್ರ, ಸ್ಕೂಲ್ ಹಾಗೂ ಟ್ರಾವೆಲ್ ಬ್ಯಾಗ್ ತಯಾರಿಸುತ್ತಿದ್ದರು. ಕೋವಿಡ್ನಿಂದಾಗಿ ಶಾಲೆಗಳು ನಡೆಯದೇ, ಲಕ್ಷಾಂತರ ಮೊತ್ತದ ಆರ್ಡರ್ಗಳೆಲ್ಲ ರದ್ದಾದವು. ಕಾರ್ಖಾನೆ ನಡೆಸುವುದೇ ಕಷ್ಟವಾಗಿತ್ತು. ಆಗ ಕೊರೊನಾ ಚಿಕಿತ್ಸೆಯಲ್ಲಿ ಬಳಸುವ ಪಿಪಿಇ ಕಿಟ್ ಮುಂತಾದ ಸಾಮಗ್ರಿಗಳ ತಯಾರಿಕೆಯನ್ನು ಆರಂಭಿಸಿ ಕಾರ್ಖಾನೆ ಉಳಿಸಿಕೊಂಡಿದ್ದಲ್ಲದೆ, ಉದ್ಯೋಗಿಗಳಿಗೂ ಕೆಲಸ ನೀಡಿದ್ದಾರೆ.

ಬೇಡಿಕೆಗೆ ತಕ್ಕಂತೆ ಬದಲಾದ ಇವರ ಫ್ಯಾಕ್ಟರಿಯಲ್ಲೀಗ ಪಿಪಿಇ ಕಿಟ್, ಕೋವಿಡ್ನಿಂದ ಮೃತಪಟ್ಟವರಿಗೆ ಬಳಸುವ ಬ್ಯಾಗ್, ವೈದ್ಯರ ಗೌನ್, ಸೋಂಕಿತರು ಧರಿಸುವ ಗೌನ್ ಉತ್ಪಾದಿಸಲಾಗುತ್ತಿದೆ.

ಗುಜರಾತ್ನ ಸೂರತ್, ಬೆಂಗಳೂರಿನಿಂದ ಕಚ್ಚಾವಸ್ತುಗಳನ್ನು ತರಿಸಲಾಗುತ್ತಿದೆ. ಇಲ್ಲಿ ತಯಾರಿಸಿದ ವೈದ್ಯಕೀಯ ಸಾಮಗ್ರಿಗಳನ್ನು ಧಾರವಾಡ ಜಿಲ್ಲೆಗೆ ಪೂರೈಸಲಾಗುತ್ತಿದೆ.

ವಿಜಯಪುರ, ದಾವಣಗೆರೆ, ಬಳ್ಳಾರಿ, ಬೀದರ್, ಬೆಳಗಾವಿ ಮುಂತಾದ ಜಿಲ್ಲೆಗಳಿಗಳಿಂದಲೂ ಬೇಡಿಕೆ ಇದೆ.

‘ನಿತ್ಯ 500 ರಿಂದ 600 ಪಿಪಿಇ ಕಿಟ್, 500 ವೈದ್ಯರ ಗೌನ್, 300 ರೋಗಿಗಳ ಗೌನ್ ಹಾಗೂ 100 ಪಾರ್ಥಿವ ಶರೀರ ಪ್ಯಾಕ್ ಮಾಡುವ ಬ್ಯಾಗ್ ಸಿದ್ಧಪಡಿಸಲಾಗುತ್ತಿದೆ. ಡಿಸ್ಪೋಸೇಬಲ್ ಬೆಡ್ಶೀಟ್ಗಳನ್ನು ಬೇಡಿಕೆ ಆಧಾರದ ಮೇಲೆ ಉತ್ಪಾದಿಸಲಾಗುತ್ತಿದೆ‘ ಎನ್ನುತ್ತಾರೆ ಪ್ರವೀಣ ಬುರಟ್.

ಲಾಕ್ಡೌನ್ ಕಾರಣ ಕಚ್ಚಾ ಸಾಮಗ್ರಿಗಳನ್ನು ತರಿಸಲು ಸ್ವಲ್ಪ ವಿಳಂಬವಾಗುತ್ತಿದೆ. ಬೇಡಿಕೆ ಕುಗ್ಗಿಲ್ಲ. ಮೊದಲು ಎಲ್ಲದ
ಕ್ಕೂ ಚೀನಾ ಕಡೆಗೆ ಮುಖ ಮಾಡಬೇಕಿತ್ತು. ಈಗ ದೇಶೀಯವಾಗಿಯೇ ತಯಾರಾಗುತ್ತಿವೆ. 45 ಮಹಿಳಾ ಹಾಗೂ 15 ಪುರುಷ ಕೆಲಸಗಾರರಿಗೆ ಉದ್ಯೋಗ ಸಿಕ್ಕಿದೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.