ಮುಂಬೈ: ವಿಮಾ ವಲಯದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್ಡಿಐ) ಅಗತ್ಯವಿದೆ ಎಂದು ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್ಡಿಎಐ) ಅಧ್ಯಕ್ಷ ದೇವಶಿಶ್ ಪಾಂಡಾ ಶುಕ್ರವಾರ ಹೇಳಿದ್ದಾರೆ.

ವಿಮಾ ವಲಯದಲ್ಲಿ 2000ರಿಂದ ಖಾಸಗಿ ಮತ್ತು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಯಿತು. ಪ್ರಸ್ತುತ ಸಾಮಾನ್ಯ, ಜೀವ ಮತ್ತು ಆರೋಗ್ಯ ವಿಮೆಯಲ್ಲಿ ಶೇ 74ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶವಿದೆ.

2027ರ ವೇಳೆಗೆ ‘ಎಲ್ಲರಿಗೂ ವಿಮೆ’ ಗುರಿ ಸಾಧಿಸಲು ವಿಮಾ ವಲಯದಲ್ಲಿ ಅತ್ಯಧಿಕ ಬಂಡವಾಳ ಹೂಡಿಕೆಯ ಅಗತ್ಯವಿದೆ. ಹೆಚ್ಚಿನ ಸಂಸ್ಥೆಗಳು ಹೂಡಿಕೆ ಮಾಡಲು ಮುಂದಾಗಬೇಕಿದೆ. ಇದು 2047ರ ‘ವಿಕಸಿತ ಭಾರತ’ ಗುರಿ ಸಾಧನೆಗೆ ಮಹತ್ವದ್ದಾಗಿದೆ ಎಂದು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಂಡಾ ಹೇಳಿದರು.

ಭಾರತದ ಪಾಲುದಾರರ ಸಹಾಯದ ಅವಶ್ಯಕವಿಲ್ಲದೇ ವಿದೇಶಿ ಹೂಡಿಕೆದಾರರು ಕಾರ್ಯಾಚರಣೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ಐಆರ್ಡಿಎಐನ ಬಿಮಾ ಸುಗಮ್ ಡಿಜಿಟಲ್ ವೇದಿಕೆ ಪಾಲಿಸಿದಾರರಿಗೆ ಒಂದೇ ವೇದಿಕೆಯಡಿ ವಿಮಾ ವಲಯದ ಮಾಹಿತಿ ನೀಡಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.