ನವದೆಹಲಿ: ‘ತನ್ನ ಮಸಾಲೆ ಪದಾರ್ಥಗಳಲ್ಲಿ ಯಾವುದೇ ಕೀಟನಾಶಕ ಅಂಶ ಇಲ್ಲ. ಗ್ರಾಹಕರ ಬಳಕೆಗೆ ಶೇ 100ರಷ್ಟು ಸುರಕ್ಷಿತವಾಗಿವೆ’ ಎಂದು ಎಂಡಿಎಚ್ ಪ್ರೈವೆಟ್ ಲಿಮಿಟೆಡ್ ಸ್ಪಷ್ಟಪಡಿಸಿದೆ.

ಎಂಡಿಎಚ್ ಬ್ರ್ಯಾಂಡ್‌ನ ಮದ್ರಾಸ್ ಕರ‍್ರಿ ಪೌಡರ್, ಸಾಂಬಾರ್ ಮಸಾಲೆ ಮಿಕ್ಡ್ಸ್ ಮಸಾಲೆ ಪೌಡರ್ ಹಾಗೂ ಕರ‍್ರಿ ಪೌಡರ್ ಮಿಕ್ಸ್ಡ್ ಮಸಾಲೆ ಪೌಡರ್‌ನಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಅಂಶವಿದೆ ಎಂಬ ಆರೋಪದ ಮೇರೆಗೆ ಹಾಂಗ್‌ಕಾಂಗ್ ಮತ್ತು ಸಿಂಗಪುರದಲ್ಲಿ ಈ ಪದಾರ್ಥಗಳ ಬಳಕೆ ಮತ್ತು ಮಾರಾಟಕ್ಕೆ ನಿಷೇಧ ಹೇರಲಾಗಿದೆ.

‘ಆದರೆ, ಈ ಎರಡು ದೇಶಗಳ ಆಹಾರ ಸುರಕ್ಷತೆ ಕೇಂದ್ರಗಳಿಂದ ಕೀಟನಾಶಕ ಅಂಶವಿರುವ ಬಗ್ಗೆ ಯಾವುದೇ ಮಾಹಿತಿ ಸ್ವೀಕರಿಸಿಲ್ಲ. ಈ ಆರೋಪ ಸತ್ಯಕ್ಕೆ ದೂರವಾದುದು. ಇದನ್ನು ಋಜುವಾತುಪಡಿಸುವಂತಹ ಯಾವುದೇ ಪುರಾವೆಗಳಿಲ್ಲ’ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಅಲ್ಲದೆ, ಭಾರತೀಯ ಮಸಾಲೆ ಮಂಡಳಿ ಹಾಗೂ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೂ (ಎಫ್‌ಎಸ್‌ಎಸ್‌ಎಐ) ಈ ದೇಶಗಳಿಂದ ಮಾಹಿತಿ ಅಥವಾ ಪರೀಕ್ಷಾ ಮಾದರಿಯ ವರದಿ ಸಲ್ಲಿಕೆಯಾಗಿಲ್ಲ’ ಎಂದು ಹೇಳಿದೆ.

‘ಮಸಾಲೆ ಸಂಗ್ರಹ, ಸಂಸ್ಕರಣೆ ಅಥವಾ ಪ್ಯಾಕಿಂಗ್ ವೇಳೆ ಕೀಟನಾಶಕ ಬಳಕೆ ಮಾಡುವುದಿಲ್ಲ. ಹಾಗಾಗಿ, ಮಾರಾಟಗಾರರು ಮತ್ತು ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದೆ.

ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಮತ್ತು ಸುರಕ್ಷತೆಗೆ ಕಂಪನಿಯು ಒತ್ತು ನೀಡಿದೆ. ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ಪೂರೈಸುವುದಕ್ಕೆ ಬದ್ಧವಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.