ನವದೆಹಲಿ: ಮೈಕ್ರೊಸಾಫ್ಟ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸತ್ಯ ನಾದೆಲ್ಲಾ ಅವರು 2024ರ ಹಣಕಾಸು ವರ್ಷದಲ್ಲಿ ಒಟ್ಟು 79.1 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹665 ಕೋಟಿ ರೂಪಾಯಿ) ವೇತನ ಪಡೆದುಕೊಂಡಿದ್ದಾರೆ. ಇದರೊಂದಿಗೆ ನಾದೆಲ್ಲ ವೇತನ ಶೇ 63ರಷ್ಟು ಏರಿಕೆಯಾದಂತಾಗಿದೆ.

2023ರ ಆರ್ಥಿಕ ವರ್ಷದಲ್ಲಿ ಸತ್ಯ ನಾದೆಲ್ಲಾ ಅವರ ವೇತನ 48.5 ಮಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು (ಅಂದಾಜು ₹408 ಕೋಟಿ). ಮೈಕ್ರೊಸಾಫ್ಟ್ ಕಂಪನಿಗೆ ಸೇರಿದ ಬಳಿಕ ನಾದೆಲ್ಲಾ ಪಡೆದ ಎರಡನೇ ಅತಿ ಹೆಚ್ಚು ಸಂಭಾವನೆ ಇದಾಗಿದೆ. ಇದಕ್ಕೂ ಮುನ್ನ 2014ರಲ್ಲಿ 84 ಮಿಲಿಯನ್ ಅಮೆರಿಕನ್ ಡಾಲರ್ ವೇತನ ಪಡೆದಿದ್ದರು. ಕಂಪನಿಯು ಷೇರು ಮಾರುಕಟ್ಟೆಗೆ ನೀಡಿದ ಮಾಹಿತಿಯಿಂದ ಈ ಎಲ್ಲಾ ಅಂಶಗಳು ತಿಳಿದುಬಂದಿದೆ.

ಭದ್ರತಾ ಉಲ್ಲಂಘನೆಗಳಿಂದಾಗಿ ಜುಲೈನಲ್ಲಿ ವಿಶ್ವದಾದ್ಯಂತ ಮೈಕ್ರೊಸಾಫ್ಟ್ ಸಿಸ್ಟಮ್ಗಳ ಮೇಲೆ ಪರಿಣಾಮ ಬೀರಿತ್ತು. ಜತೆಗೆ ಇತರೆ ಕಾರಣಗಳಲ್ಲಿ ನೀಡಿದ್ದ ನಾದೆಲ್ಲಾ, ಸಂಬಳ ಏರಿಕೆ ಮಾಡದಂತೆ ಕಂಪನಿಗೆ ಮನವಿ ಮಾಡಿದ್ದರು ಎಂದು ವರದಿಯಾಗಿದೆ.

ನಾದೆಲ್ಲಾ ಗಳಿಕೆಯ ವಿವರ

ಷೇರುಗಳು: $71,236,392 (ಅಂದಾಜು ₹600 ಕೋಟಿ)

ನಾನ್-ಇಕ್ವಿಟಿ ಇನ್ಸೆಂಟಿವ್ ಯೋಜನೆ: $5.2 ಮಿಲಿಯನ್ (ಅಂದಾಜು ₹44 ಕೋಟಿ)

ಮೂಲ ವೇತನ: $2.5 ಮಿಲಿಯನ್ (₹21 ಕೋಟಿಗಿಂತ ಹೆಚ್ಚು)

ವಿವಿಧ ಭತ್ಯೆಗಳು: $169,791 (ಅಂದಾಜು ₹15 ಲಕ್ಷ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.