ನವದೆಹಲಿ: ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ (ಐಸಿಸಿ) ಬಳಸಿ ವಿದೇಶದಲ್ಲಿ ಮಾಡುವ ವೆಚ್ಚಗಳಿಗೆ ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್) ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಟಿಸಿಎಸ್ ವಿಧಿಸುವ ಕುರಿತು ಸಾಕಷ್ಟು ವಿವಾದ, ಟೀಕೆಗಳು ಆರಂಭವಾಗಿದ್ದರಿಂದ ಸರ್ಕಾರವು ವಿದೇಶಿ ವಿನಿಮಯ ನಿರ್ವಹಣೆ (ಚಾಲ್ತಿ ಖಾತೆ ವರ್ಗಾವಣೆಗಳು) ನಿಯಮ–2000ಕ್ಕೆ ತಿದ್ದುಪಡಿ ತಂದಿದೆ. ಆ ಮೂಲಕ ಆರ್‌ಬಿಐನ ಉದಾರೀಕೃತ ಪಾವತಿ ವ್ಯವಸ್ಥೆಯಿಂದ (ಎಲ್‌ಆರ್‌ಎಸ್) ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಅನ್ನು ಹೊರಗಿಟ್ಟಿದೆ.

ಮೇ 16ರಿಂದಲೇ ಪೂರ್ವಾನ್ವಯವಾಗಿ ಇದು ಜಾರಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದಿನ ಆದೇಶದಲ್ಲಿ ಸರ್ಕಾರವು ಎಲ್‌ಆರ್‌ಎಸ್ ಅಡಿ ವಿದೇಶದಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ₹ 7 ಲಕ್ಷಕ್ಕಿಂತ ಹೆಚ್ಚಿನ ವೆಚ್ಚ ಮಾಡಿದರೆ ಅದಕ್ಕೆ ಶೇ 7ರಷ್ಟು ಟಿಸಿಎಸ್ ನೀಡಬೇಕಿತ್ತು. ವಿದೇಶಿ ಪ್ರವಾಸಕ್ಕೆ ಕ್ರೆಡಿಟ್ ಕಾರ್ಡ್ ಬಳಸಿದರೆ ಗರಿಷ್ಠ ಶೇ 20ರವರೆಗೆ ಟಿಸಿಎಸ್ ಕಟ್ಟಬೇಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.