ಮುಂಬೈ: ಅಡಮಾನ ಸಾಲ ನೀಡುವ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನ (ಡಿಎಚ್ಎಫ್ಎಲ್) ವಸೂಲಾಗದ ಸಾಲ (ಎನ್ಪಿಎ) ಖಾತೆಯಲ್ಲಿ ₹ 3,688.58 ಕೋಟಿ ವಂಚನೆ ನಡೆದಿರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗಮನಕ್ಕೆ ತರಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ತಿಳಿಸಿದೆ.

ಡಿಎಚ್ಎಫ್ಎಲ್ ಖಾತೆಯಲ್ಲಿನ ವಂಚನೆಯನ್ನು ಆರ್ಬಿಐ ಗಮನಕ್ಕೆ ತರಲಾಗಿದೆ ಎಂದು ಬ್ಯಾಂಕ್ ಷೇರುಪೇಟೆಗೂ ಮಾಹಿತಿ ನೀಡಿದೆ. ವಸೂಲಾಗದ ಸಾಲಗಳ ವೆಚ್ಚ ಭರಿಸಲು ಬ್ಯಾಂಕ್ ಈಗಾಗಲೇ ₹ 1,246.58 ಕೋಟಿ ತೆಗೆದು ಇರಿಸಿದೆ.

ಡಿಎಚ್ಎಫ್ಎಲ್ ತಾನು ಬ್ಯಾಂಕ್ಗಳಿಂದ ಪಡೆದುಕೊಂಡ ₹ 97 ಸಾವಿರ ಕೋಟಿಗಳಲ್ಲಿ ₹ 31 ಸಾವಿರ ಕೋಟಿಗಳನ್ನು ನಕಲಿ ಕಂಪನಿಗಳ ಹೆಸರಿನಲ್ಲಿ ಬೇರೆಗೆ ಸಾಗಿಸಿ ವಂಚನೆ ಎಸಗಿದೆ ಎಂದು ಈ ಹಿಂದೆ ವರದಿಯಾಗಿತ್ತು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಆರ್ಬಿಐ, ಹಿಂದಿನ ವರ್ಷದ ನವೆಂಬರ್ನಲ್ಲಿ ಡಿಎಚ್ಎಫ್ಎಲ್ ಅನ್ನು ದಿವಾಳಿ ಸಂಹಿತೆ (ಐಬಿಸಿ) ಪ್ರಕ್ರಿಯೆಗೆ ಒಳಪಡಿಸಿತ್ತು. ಸಾಲ ಇತ್ಯರ್ಥಕ್ಕೆ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಗೆ ಮೊರೆ ಹೋದ ಮೊದಲ ಹಣಕಾಸು ಸಂಸ್ಥೆ ಇದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.