ಮುಂಬೈ:ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕಿನ(ಆರ್ಬಿಐ) ಸ್ವಾಯತ್ತತೆಯನ್ನು ಗೌರವಿಸದಿದ್ದರೆ ಹಣಕಾಸು ಮಾರುಕಟ್ಟೆ ಕುಸಿತ ಅನುಭವಿಸಲಿದೆ ಎಂದು ಆರ್ಬಿಐ ಡೆಪ್ಯುಟಿ ಗವರ್ನರ್ ವಿರಳ್ ವಿ. ಆಚಾರ್ಯ ಹೇಳಿದ್ದಾರೆ.

ಆರ್ಬಿಐ ಸ್ವಾತಂತ್ರ ಪ್ರತಿಪಾದಿಸಿದ ಆಚಾರ್ಯ, ‘ಕೇಂದ್ರ ಬ್ಯಾಂಕಿನ ಸ್ವಾತಂತ್ರವನ್ನು ಗೌರವಿಸದ ಸರ್ಕಾರವು ಶೀಘ್ರದಲ್ಲೇ ಅಥವಾ ನಂತರದ ದಿನಗಳಲ್ಲಿ ಆರ್ಥಿಕ ಕುಸಿತವನ್ನು ಅನುಭವಿಸಬೇಕಾಗುತ್ತದೆ. ಇದು ಹಣಕಾಸು ಸಂಕಷ್ಟವನ್ನು ತಂದೊಡ್ಡಲಿದ್ದು, ಇದರಿಂದಾಗಿ ಪ್ರಮುಖ ಹಣಕಾಸು ನಿಯಂತ್ರಣ ಸಂಸ್ಥೆ ದುರ್ಬಲಗೊಳ್ಳಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ನಡೆದ ಎ.ಡಿ. ಶ್ರಾಫ್ ಸ್ಮರಣೆ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೇಂದ್ರ ಬ್ಯಾಂಕ್ ಸರ್ಕಾರದ ಒತ್ತಡದಿಂದ ಮುಕ್ತವಾಗಿ ಜವಾಬ್ದಾರಿಯುತ, ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಆರ್ಬಿಐ ಕಾರ್ಯನಿರ್ವಹಣೆಯನ್ನು ಕ್ರಿಕೆಟ್ಗೆ ಹೋಲಿಸಿದ ಆಚಾರ್ಯ, ‘ಆರ್ಬಿಐ ಟೆಸ್ಟ್ ಪಂದ್ಯದ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರತಿ ಅವಧಿಯಲ್ಲಿಯೂ ಮುನ್ನಡೆ ಸಾಧಿಸಲು ಪ್ರಯತ್ನಿಸುತ್ತದೆ. ಮುಖ್ಯ ಅಂಶವೆಂದರೆ ಮುಂದಿನ ಅವಧಿಯಲ್ಲಿಯೂ ಗೆಲುವಿನ ಅವಕಾಶವನ್ನು ಪಡೆಯಬೇಕಾದರೆ ಆಟವನ್ನು ಉಳಿಸಿಕೊಳ್ಳಬೇಕಾಗುತ್ತದೆ’ ಎಂದು ವಿವರಿಸಿದರು.

1935ರ ಆರ್ಬಿಐ ಕಾಯ್ದೆ ಹಾಗೂ1949ರಬ್ಯಾಂಕಿಂಗ್ ರೆಗ್ಯುಲೇಶನ್ ಕಾಯ್ದೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಈ ಎರಡು ಕಾಯ್ದೆಗಳ ಅಡಿಯಲ್ಲಿ ಆರ್ಬಿಐ ಹಲವು ಪ್ರಮುಖ ಅಧಿಕಾರಗಳನ್ನು ಹೊಂದಿದೆ. ಅವುಗಳನ್ನು ಸಮರ್ಥವಾಗಿ ನಿಭಾಯಿಸಲು ಪರಿಣಾಮಕಾರಿ ಸ್ವಾತಂತ್ರ್ಯ ಅಗತ್ಯ ಎಂದರು.

ಸಾರ್ವಜನಿಕ ವಲಯದ ಬ್ಯಾಂಕುಗಳ ನಿಯಂತ್ರಣ ವಿಚಾರದಲ್ಲಿ, ಖಾಸಗಿ ಬ್ಯಾಂಕುಗಳ ಆಸ್ತಿ ಹಂಚಿಕೆ, ನಿರ್ವಹಣೆ ಮತ್ತು ಮಂಡಳಿಯ ಬದಲಾವಣೆ, ಪರವಾನಗಿ ಹಿಂತೆಗೆದುಕೊಳ್ಳುವಿಕೆ ಅಥವಾ ವಿಲೀನಗೊಳಿಸುವುದು ಮತ್ತು ಅಥವಾ ಮಾರಾಟದಂತಹ ಕ್ರಮಗಳನ್ನು ಕಾನೂನುಬದ್ಧವಾಗಿ ಪರಿಣಾಮಕಾರಿಯಾಗಿ ರೂಪಿಸಲುಆರ್ಬಿಐಗೆ ಸಾಧ್ಯವಾಗುತ್ತದೆ.

ಅಂತರರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉದಾಹರಿಸಿದ ಅವರು,ವಿಶ್ವ ಬ್ಯಾಂಕ್ ಕೂಡ ಸರ್ಕಾರದಿಂದ ಪ್ರತ್ಯೇಕವಾದ ಒಂದು ಸಂಸ್ಥೆಯಾಗಿದ್ದು, ಸರ್ಕಾರದ ವಿಭಾಗವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.