ಮುಂಬೈ: ಸತತ ಎರಡು ದಿನದ ವಹಿವಾಟಿನಲ್ಲಿ ಇಳಿಕೆ ಕಂಡಿದ್ದ ಷೇರು ಸೂಚ್ಯಂಕಗಳು ದೀಪಾವಳಿ ಹಬ್ಬದ ಅಂಗವಾಗಿ ನಡೆದ ವಿಶೇಷ ಮುಹೂರ್ತ ವಹಿವಾಟಿನಲ್ಲಿ ಏರಿಕೆ ದಾಖಲಿಸಿವೆ.

ಶುಕ್ರವಾರ ಸಂಜೆ 6 ಗಂಟೆಯಿಂದ 7 ಗಂಟೆವರೆಗೆ ವಹಿವಾಟು ನಡೆಯಿತು. ಬ್ಯಾಂಕಿಂಗ್, ಆಟೊ, ತೈಲ ಮತ್ತು ಅನಿಲ ಷೇರುಗಳ ಖರೀದಿ ಹೆಚ್ಚಳವು ಸೂಚ್ಯಂಕಗಳ ಏರಿಕೆಗೆ ನೆರವಾಯಿತು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 335 ಅಂಶ ಏರಿಕೆಯಾಗಿ, 79,724ಕ್ಕೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 99 ಅಂಶ ಹೆಚ್ಚಳವಾಗಿ 24,304ಕ್ಕೆ ಅಂತ್ಯಗೊಂಡಿತು.

ಶುಭಪ್ರದವಾಗಿರುವ ಮುಹೂರ್ತ ವಹಿವಾಟಿನಲ್ಲಿ ತೊಡಗುವುದರಿಂದ ಸಮೃದ್ಧಿ ಮತ್ತು ಹಣಕಾಸಿನ ಬೆಳವಣಿಗೆ ಸಾಧ್ಯವಾಗುತ್ತದೆ. ಹೊಸ ಆರಂಭಕ್ಕೆ ದೀಪಾವಳಿಯು ಶುಭ ಸಂದರ್ಭ ಎಂಬ ನಂಬಿಕೆ ಹಲವರಲ್ಲಿ ಇದೆ.

ಮಹೀಂದ್ರ ಆ್ಯಂಡ್ ಮಹೀಂದ್ರ, ಅದಾನಿ ಪೋರ್ಟ್ಸ್, ಟಾಟಾ ಮೋಟರ್ಸ್, ಎಕ್ಸಿಸ್ ಬ್ಯಾಂಕ್, ನೆಸ್ಲೆ, ಎನ್ಟಿಪಿಸಿ, ರಿಲಯನ್ಸ್, ಐಟಿಸಿ, ಟೈಟನ್, ಕೋಟಕ್ ಬ್ಯಾಂಕ್, ಇನ್ಫೊಸಿಸ್ ಮತ್ತು ಟಿಸಿಎಸ್ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಎಚ್ಸಿಎಲ್ ಟೆಕ್, ಟೆಕ್ ಮಹೀಂದ್ರ ಮತ್ತು ಐಸಿಐಸಿಐ ಬ್ಯಾಂಕ್ನ ಷೇರಿನ ಮೌಲ್ಯ ಇಳಿಕೆಯಾಗಿದೆ.

ಹಿಂದಿನ ವರ್ಷದ ಮುಹೂರ್ತ ವಹಿವಾಟಿನ ಆರಂಭದ ದಿನದಿಂದ ಪ್ರಸಕ್ತ ವರ್ಷದ ಮುಹೂರ್ತ ವಹಿವಾಟಿನ ಹಿಂದಿನ ದಿನದವರೆಗಿನ ಒಂದು ವರ್ಷದ ಅವಧಿಯಲ್ಲಿ ಸೆನ್ಸೆಕ್ಸ್ 14,484 ಅಂಶ (ಶೇ 22.31) ಏರಿಕೆಯಾಗಿದೆ. ನಿಫ್ಟಿ 4,780 ಅಂಶ (ಶೇ 24.60) ಹೆಚ್ಚಳವಾಗಿದೆ.

ಇದೇ ಅವಧಿಯಲ್ಲಿ ಹೂಡಿಕೆದಾರರ ಸಂಪತ್ತು ₹124 ಲಕ್ಷ ಕೋಟಿ ವೃದ್ಧಿಸಿದ್ದು, ಒಟ್ಟು ಬಿಎಸ್ಇ ಕಂಪನಿಗಳ ಮೌಲ್ಯ ₹444 ಲಕ್ಷ ಕೋಟಿಗೆ (5.29 ಟ್ರಿಲಿಯನ್ ಡಾಲರ್) ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.