ನವದೆಹಲಿ: ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್ನಲ್ಲಿ (ಐಸಿಎಲ್) ಹೆಚ್ಚುವರಿಯಾಗಿ ಶೇ 32.72ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಆದಿತ್ಯ ಬಿರ್ಲಾ ಸಮೂಹಕ್ಕೆ ಸೇರಿದ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ಮುಂದಾಗಿದೆ.

ಈ ಸಂಬಂಧ ಇಂಡಿಯಾ ಸಿಮೆಂಟ್ಸ್ನ ಶ್ರೀನಿವಾಸನ್ ಎನ್. ಮತ್ತು ಗುರುನಾಥ್ ನೇತೃತ್ವದ ಪ್ರವರ್ತಕ ಕುಟುಂಬದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಷೇರುಗಳ ಖರೀದಿಗೆ ಬಿರ್ಲಾ ಸಮೂಹದ ಆಡಳಿತ ಮಂಡಳಿಯು ಅನುಮೋದನೆ ನೀಡಿದ್ದು, ಇದಕ್ಕಾಗಿ ₹3,954 ಕೋಟಿ ವಿನಿಯೋಗಿಸಲಾಗುವುದು. ಪ್ರತಿ ಷೇರಿಗೆ ₹390 ನಿಗದಿಪಡಿಸಲಾಗಿದೆ ಎಂದು ಕಂಪನಿಯು, ಷೇರುಪೇಟೆಗೆ ತಿಳಿಸಿದೆ.

ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡರೆ ಇಂಡಿಯಾ ಸಿಮೆಂಟ್ಸ್ನಲ್ಲಿ ಅಲ್ಟ್ರಾಟೆಕ್ ಪಾಲು ಶೇ 55ರಷ್ಟಕ್ಕಿಂತ ಹೆಚ್ಚಾಗಲಿದೆ.

ಜೂನ್ನಲ್ಲಿ ಐಸಿಎಲ್ನ ಶೇ 23ರಷ್ಟು ಷೇರುಗಳನ್ನು ಅಲ್ಟ್ರಾಟೆಕ್ ಕಂಪನಿಯು ಖರೀದಿಸಿತ್ತು. ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಇಂಡಿಯಾ ಸಿಮೆಂಟ್ಸ್ನ ಪ್ರತಿ ಷೇರಿನ ಬೆಲೆ ₹374 ಆಗಿದೆ. ಇದಕ್ಕಿಂತ ಶೇ 4.1ರಷ್ಟು ಹೆಚ್ಚು ಬೆಲೆ ನಿಗದಿಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.