ಜೀವನ ಸಾಗಿಸಲು ಮತ್ತು ಜೀವ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಸ್ಥಿತಿಯನ್ನು ಕೊರೊನಾ ತಂದಿಟ್ಟಿದೆ. ಉದ್ಯೋಗನಷ್ಟ, ಕಂಪನಿಗಳಲ್ಲಿ ಚಟುವಟಿಕೆ ಸ್ಥಗಿತ, ಲಾಕ್ಡೌನ್... ಇಂತಹ ಕಾರಣಗಳಿಂದಾಗಿ ಶ್ರೀಸಾಮಾನ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ. ಯಾವುದಕ್ಕೆ ವೆಚ್ಚ ಮಾಡಲಿ, ಯಾವುದಕ್ಕೆ ಖರ್ಚು ಮಾಡುವುದನ್ನು ಮುಂದೂಡಲಿ ಎಂಬ ಪ್ರಶ್ನೆ ಅವನಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಹಣಕಾಸಿನ ನಿರ್ಧಾರಗಳನ್ನು ಹೇಗೆ ಕೈಗೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.

1) ಕೊರೊನಾ ನಿಯಂತ್ರಣಕ್ಕೆ ಬರುವವರೆಗೆ ಷೇರು ಮಾರುಕಟ್ಟೆ ಹೂಡಿಕೆಯಿಂದ ಹೊರ ಬರುವುದು ಸೂಕ್ತವೇ?

ಈ ಪ್ರಶ್ನೆಯೇ ಅಸಂಬದ್ಧ! ಸಾಮಾನ್ಯ ದಿನಗಳಲ್ಲೂ ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಇದ್ದೇ ಇರುತ್ತವೆ. ಈಗ ಕೊರೊನಾ ಕಾರಣದಿಂದಾಗಿ ಸಹಜವಾಗಿಯೇ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇದೆ. ಸಾಮಾನ್ಯವಾಗಿ ಷೇರು ಮಾರುಕಟ್ಟೆ ಹೂಡಿಕೆದಾರರು ಸೂಚ್ಯಂಕ ಕುಸಿದಾಗ ಹೆಚ್ಚು ಖರೀದಿಗೆ ಆಸಕ್ತಿ ತೋರುತ್ತಾರೆ. ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಕನಿಷ್ಠ 6ರಿಂದ 8 ವರ್ಷಗಳ ಗುರಿ ಇರಬೇಕು. ನಿಮಗೆ ಷೇರು ಮಾರುಕಟ್ಟೆಯ ಕನಿಷ್ಠ ಪರಿಚಯವೂ ಇಲ್ಲವೆಂದಾದರೆ ಹೂಡಿಕೆ ಮಾಡಲು ಹೋಗಬೇಡಿ. ಷೇರು ಮಾರುಕಟ್ಟೆ ಬಗ್ಗೆ ತಿಳಿದಿದೆ, ಅಲ್ಪಾವಧಿಯ ಏರಿಳಿತಗಳನ್ನು ಸಹಿಸಿಕೊಳ್ಳಬಹುದು ಎಂದಾದಲ್ಲಿ ಷೇರು ಮಾರುಕಟ್ಟೆ ಹೂಡಿಕೆ ಹಿಂಪಡೆಯಬೇಡಿ.

2) ವ್ಯವಸ್ಥಿತ ಹೂಡಿಕೆ ಯೊಜನೆ (ಎಸ್ಐಪಿ) ಮುಂದುವರಿಸಬೇಕೇ ಅಥವಾ ಸಾಲದ ಕಂತು (ಇಎಂಐ) ಪಾವತಿಸಬೇಕೆ?

ಹಣದ ಕೊರತೆ ಇದೆ ಎಂದಾದರೆ ಮ್ಯೂಚುವಲ್ ಫಂಡ್ಗಳಲ್ಲಿ ಎಸ್ಐಪಿ ಮೂಲಕ ಹೂಡಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ. ಉಳಿತಾಯ ಮತ್ತು ಹೂಡಿಕೆಯನ್ನು ಅಗತ್ಯ ವೆಚ್ಚಗಳ ನಂತರದಲ್ಲಿ ಪರಿಗಣಿಸಬೇಕಾಗುತ್ತದೆ. ಹಾಗಾಗಿ ಹಣಕಾಸಿನ ಲಭ್ಯತೆ ಇಲ್ಲದಿದ್ದಲ್ಲಿ ಎಸ್ಐಪಿ ನಿಲ್ಲಿಸಿ. ಇಎಂಐ ಮುಂದೂಡಿಕೆಗೆ ಆಗಸ್ಟ್ವರೆಗೆ ಅವಕಾಶ ಇದೆಯಾದರೂ ಇಎಂಐ ಪಾವತಿಸುವುದು ಒಳಿತು. ‘ಇಎಂಐ ಪಾವತಿ ಮುಂದೂಡಿಕೆಗೆ ಹೇಗೂ ಅವಕಾಶ ಇದೆಯಲ್ಲ, ಎಸ್ಐಪಿ ಮೂಲಕ ಹೂಡಿಕೆ ಮಾಡಿ ಅಲ್ಪಾವಧಿಯಲ್ಲಿ ಹೆಚ್ಚು ಲಾಭಗಳಿಸೋಣ’ ಎಂಬ ಧೋರಣೆ ಬೇಡ. ಕಷ್ಟಕಾಲದಲ್ಲಿ ಹೂಡಿಕೆ ವಿಚಾರದಲ್ಲಿ ಅಂದಾಜಿಗೆ ಗುಂಡು ಹಾರಿಸುವ ಲೆಕ್ಕಾಚಾರ ಸಮಂಜಸವಲ್ಲ.

3) ನನ್ನ ಬಳಿ ಇಎಂಐ ಪಾವತಿಸಲು ಹಣವಿಲ್ಲ, ಇಎಂಐ ಮುಂದೂಡಿಕೆಯ ಪ್ರಯೋಜನ ಪಡೆಯುವುದು ಸೂಕ್ತವೇ?

ಸಾಧ್ಯವಾದಷ್ಟೂ ಇಎಂಐ ಪಾವತಿಸಲು ಪ್ರಯತ್ನಿಸುವುದು ಒಳಿತು. ಇಎಂಐ ಮುಂದೂಡಿಕೆ ಆಯ್ಕೆ ಮಾಡಿಕೊಂಡರೆ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಬಡ್ಡಿಯ ಹೊರೆ ಹೊರಬೇಕಾಗುತ್ತದೆ. ಡೆಟ್ ಫಂಡ್ಗಳು, ಚಿನ್ನದ ಮೇಲಿನ ಹೂಡಿಕೆ, ಪಿಎಫ್ ಹಣ, ನಿಶ್ಚಿತ ಠೇವಣಿಗಳಲ್ಲಿ ಇಟ್ಟಿರುವ ಹಣವನ್ನು ಪಡೆದು ಇಎಂಐ ಪಾವತಿಸುವುದು ಸೂಕ್ತ ನಿರ್ಧಾರ. ಇಎಂಐ ಪಾವತಿಸುವುದು ಮಾತ್ರವಲ್ಲ; ಕೊರೊನಾದಂತಹ ಕಠಿಣ ಸಂದರ್ಭಗಳಲ್ಲಿ ಸಾಲಮುಕ್ತರಾಗುವುದು ಬಹಳ ಮುಖ್ಯ.

4) ಡೆಟ್ ಫಂಡ್ ಹೂಡಿಕೆಯಿಂದ ಹಣ ತೆಗೆದು ನಿಶ್ಚಿತ ಠೇವಣಿ (ಎಫ್ಡಿ) ಮಾಡುವುದು ಸೂಕ್ತವೇ?

ಫ್ರಾಂಕ್ಲಿನ್ ಟೆಂಪಲ್ಟನ್ ತನ್ನ ಆರು ಡೆಟ್ ಫಂಡ್ಗಳನ್ನು (ಸಾಲ ನಿಧಿ) ಹಠಾತ್ತನೆ ರದ್ದುಪಡಿಸಿದ ನಂತರ ಡೆಟ್ ಫಂಡ್ಗಳ ಮೇಲೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಇಡೀ ಮ್ಯೂಚುವಲ್ ಫಂಡ್ ವ್ಯವಸ್ಥೆಯೇನೂ ಹಾದಿ ತಪ್ಪಿಲ್ಲ. ನೀವು ಹೂಡಿಕೆ ಮಾಡಿರುವ ಡೆಟ್ ಫಂಡ್ನಲ್ಲಿ ಎಷ್ಟು ರಿಸ್ಕ್ ಇದೆ ಎನ್ನುವುದನ್ನು ಅರಿತಿದ್ದರೆ ಹಣದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ನಿಮಗೆ ಡೆಟ್ ಫಂಡ್ನ ಒಳಸುಳಿ ಅರ್ಥವಾಗದಿದ್ದರೆ ಒಳ್ಳೆಯ ಬ್ಯಾಂಕ್ನಲ್ಲಿ ನಿಶ್ಚಿತ ಠೇವಣಿ (ಎಫ್ಡಿ) ಇರಿಸುವುದು ಸೂಕ್ತ.

5) ಕೊರೊನಾದಿಂದಾಗಿ ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಿದೆ. ಮುಂದಿನ ತಿಂಗಳು ಒಟ್ಟೊಟ್ಟಿಗೆ ಇಎಂಐ ಮತ್ತು ಇನ್ಶುರೆನ್ಸ್ ಪ್ರೀಮಿಯಂ ಕಟ್ಟಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದನ್ನು ಪಾವತಿಸಲಿ, ಯಾವುದನ್ನು ಬಿಡಲಿ ಎಂಬ ಗೊಂದಲವಿದೆ...

ಕೊರೊನಾ ಕಾಲದಲ್ಲಿ ಟರ್ಮ್ ಲೈಫ್ ಇನ್ಶುರೆನ್ಸ್ ಮತ್ತು ಆರೋಗ್ಯ ವಿಮೆಯ ಕಂತುಗಳನ್ನು ಯಾವ ಕಾರಣಕ್ಕೂ ತಪ್ಪಿಸಬೇಡಿ. ಸಂಕಷ್ಟ ಕಾಲದಲ್ಲಿ ಈ ವಿಮೆಗಳು ನೆರವಿಗೆ ಬರುತ್ತವೆ. ತೀರಾ ಇಕ್ಕಟ್ಟಿನ ಪರಿಸ್ಥಿತಿ ಇದ್ದರೆ ಆಗಸ್ಟ್ವರೆಗೆ ಇಎಂಐ ಪಾವತಿಯಿಂದ ವಿನಾಯಿತಿ ಪಡೆದುಕೊಳ್ಳಿ. ಹೇಗಾದರೂ ಹಣ ಹೊಂದಿಸಿ ಇನ್ಶುರೆನ್ಸ್ ಪ್ರೀಮಿಯಂ ಪಾವತಿಸಿ. ಸಾಂಪ್ರದಾಯಿಕ ಯುಲಿಪ್, ಮನಿ ಬ್ಯಾಕ್, ಎಂಡೋಮೆಂಟ್ ಪಾಲಿಸಿಗಳಿದ್ದು, ಹಣ ಹೊಂದಿಸಲು ಸಾಧ್ಯವಾಗದಿದ್ದಲ್ಲಿ ಅವನ್ನು ಮೊಟಕುಗೊಳಿಸಿ. ಸಾಲದ ಕಂತು ಪಾವತಿಸಲು ಪಿಎಫ್, ಎಫ್ಡಿ ಹೂಡಿಕೆ ಮೂಲಗಳಿದ್ದರೆ ಬಳಸಿಕೊಳ್ಳಿ.

ಸತತ 5ನೇ ವಾರವೂ ಗಳಿಕೆ

ಭಾರತೀಯ ಷೇರುಪೇಟೆಯ ಸೂಚ್ಯಂಕಗಳು ಸತತ ಐದನೇ ವಾರ ಗಳಿಕೆ ಕಂಡಿವೆ. 37,020 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 1.16ರಷ್ಟು ಗಳಿಸಿದ್ದರೆ, 10,901 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.24ರಷ್ಟು ಜಿಗಿದಿದೆ. ಮಾರ್ಚ್-ಏಪ್ರಿಲ್ 2019ರ ನಂತರದಲ್ಲಿ ವಾರದ ಗಳಿಕೆಯಲ್ಲಿ ಕಂಡುಬಂದಿರುವ ನಿರಂತರ ಸ್ಥಿರತೆ ಇದಾಗಿದೆ.

ತ್ರೈಮಾಸಿಕ ಫಲಿತಾಂಶಗಳ ಸಕಾರಾತ್ಮಕ ನೋಟ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಗಳಿಕೆಯ ಪರಿಣಾಮವಾಗಿ ದೇಶಿ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ. ಕೋವಿಡ್–19 ಪ್ರಕರಣಗಳ ಏರಿಕೆಯ ನಡುವೆಯೂ, ಈ ಕಾಯಿಲೆಗೆ ಲಸಿಕೆ ಬೇಗನೆ ಸಿಗಲಿದೆ ಎನ್ನುವ ಭರವಸೆಗೆ ಮಾರುಕಟ್ಟೆ ಸ್ಪಂದಿಸಿದೆ. ಸೆನ್ಸೆಕ್ಸ್ನಲ್ಲಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಈಗ ₹ 144.88 ಲಕ್ಷ ಕೋಟಿಗೆ ಏರಿಕೆಯಾಗಿದೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಐ.ಟಿ. ವಲಯ ಶೇಕಡ 10ರಷ್ಟು ಏರಿಕೆಯೊಂದಿಗೆ ಮುಂಚೂಣಿಯಲ್ಲಿದೆ. ಫಾರ್ಮಾ ಶೇ 5.11ರಷ್ಟು, ಲೋಹ ಶೇ 4.71ರಷ್ಟು, ಎಫ್ಎಂಸಿಜಿ ಶೇ 2.98ರಷ್ಟು, ವಾಹನ ಶೇ 2.38ರಷ್ಟು, ಖಾಸಗಿ ಬ್ಯಾಂಕ್ ಶೇ 0.59ರಷ್ಟು, ಬ್ಯಾಂಕ್ ಶೇ 0.52ರಷ್ಟು, ಹಣಕಾಸು ಸೇವೆ ಶೇ 0.41ರಷ್ಟು ಗಳಿಕೆ ಕಂಡಿವೆ. ರಿಯಲ್ ಎಸ್ಟೇಟ್ ವಲಯ ಶೇ 3.30ರಷ್ಟು ಕುಸಿದಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.24ರಷ್ಟು ಮತ್ತು ಮಾಧ್ಯಮ ವಲಯ ಶೇ 2.47ರಷ್ಟು ತಗ್ಗಿವೆ.

ನಿಫ್ಟಿಯಲ್ಲಿ ಬಿಪಿಸಿಎಲ್, ಒಎನ್ಜಿಸಿ, ಭಾರ್ತಿ ಇನ್ಫ್ರಾಟೆಲ್, ಗೇಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಗರಿಷ್ಠ ಗಳಿಕೆ ಕಂಡಿವೆ. ಹಿಂಡಾಲ್ಕೋ, ಬ್ರಿಟಾನಿಯಾ ಇಂಡಸ್ಟ್ರೀಸ್, ನೆಸ್ಲೆ, ಟಿಸಿಎಸ್ ಮತ್ತು ರೆಡ್ಡೀಸ್ ಲ್ಯಾಬ್ಸ್ ಕುಸಿತ ಕಂಡಿವೆ.

ಮುನ್ನೋಟ: ಐಸಿಐಸಿಐ ಬ್ಯಾಂಕ್, ಜಿಂದಾಲ್ ಸ್ಟೀಲ್, ಎಬಿಬಿ, ಬಯೋಕಾನ್, ಏಷ್ಯನ್ ಪೇಂಟ್ಸ್, ಐಟಿಸಿ, ಎಸ್ಬಿಐ ಲೈಫ್, ಬಜಾಜ್ ಆಟೋ, ಬಜಾಜ್ ಫೈನಾನ್ಸ್, ಬಜಾಜ್ ಫಿನ್ಸರ್ವ್, ಡಿಶ್ ಟಿವಿ, ಇಂಡಿಯಾ ಮಾರ್ಟ್, ಆ್ಯಕ್ಸಿಸ್ ಬ್ಯಾಂಕ್, ಎಸ್ಬಿಐ ಕಾರ್ಡ್ಸ್, ಎಸಿಸಿ, ಬಾಂಬೆ ಡೈಯಿಂಗ್ ಸೇರಿದಂತೆ ಪ್ರಮುಖ ಕಂಪನಿಗಳು ಈ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಈ ವಾರವೂ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮುಂದುವರಿಯಲಿದೆ. ಕೊರೊನಾ ಪ್ರಕರಣಗಳು, ತ್ರೈಮಾಸಿಕ ಫಲಿತಾಂಶಗಳು ಮತ್ತು ಜಾಗತಿಕ ವಿದ್ಯಮಾನಗಳ ಮೇಲೆ ಹೂಡಿಕೆದಾರರ ದೃಷ್ಟಿ ಇರಲಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.