ಷೇರುಪೇಟೆಯು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದು, ಇದರ ನಡುವೆಯೇ ಪಿಎಸ್‌ಯು ಬ್ಯಾಂಕ್‌ಗಳು ತಮ್ಮ ಷೇರಿನ ಮೌಲ್ಯವನ್ನು ಹೆಚ್ಚಿಸಿಕೊಂಡು ಮಿನುಗುತ್ತಿವೆ. ಕಳೆದ ಒಂದು ತಿಂಗಳಲ್ಲಿ ಷೇರಿನ ಬೆಲೆಯನ್ನು ಶೇ 26.65ರಷ್ಟು ಹೆಚ್ಚಿಸಿಕೊಳ್ಳುವ ಮೂಲಕ ‘ಕೆನರಾ ಬ್ಯಾಂಕ್’ ಗಮನ ಸೆಳೆಯುತ್ತಿದೆ...

ಭಾರತೀಯ ಷೇರುಪೇಟೆಯು ‘ಕರಡಿ ಹಿಡಿತ’ದಿಂದ ಬಿಡಿಸಿಕೊಂಡು, ಏಳ್ಗೆಯ ಹಾದಿಯತ್ತ ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದರೆ, ಇತ್ತ ಸರ್ಕಾರಿ ಸ್ವಾಮ್ಯದ (PSU) ಬ್ಯಾಂಕಿಂಗ್ ವಲಯವು ಗಳಿಕೆಯ ಸ್ಪರ್ಧೆಯಲ್ಲಿ ‘ಗೂಳಿ ಓಟ’ವನ್ನು ಆರಂಭಿಸಿದೆ. ಒಂದು ತಿಂಗಳ ಅವಧಿಯಲ್ಲಿ ಶೇ 16.07ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿರುವ ‘ನಿಫ್ಟಿ ಪಿಎಸ್‌ಯು ಬ್ಯಾಂಕ್’ ಸೂಚ್ಯಂಕವು ಷೇರುಪೇಟೆಯಲ್ಲೀಗ ಹೊಳೆಯುತ್ತಿದೆ. ಇದೇ ಅವಧಿಯಲ್ಲಿ ತನ್ನ ಷೇರಿನ ಮೌಲ್ಯವನ್ನು ಶೇ 26.65ರಷ್ಟು ವೃದ್ಧಿಸಿಕೊಂಡಿರುವ ಕೆನರಾ ಬ್ಯಾಂಕ್, ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ವಲಯದ ಗಳಿಕೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ನಿರಂತರವಾಗಿ ಬಂಡವಾಳ ಹಿಂತೆಗೆದುಕೊಂಡಿರುವುದೂ ಸೇರಿ ಜಾಗತಿಕ ವಿದ್ಯಮಾನಗಳಿಂದಾಗಿ ಭಾರತೀಯ ಷೇರುಪೇಟೆಯು ಕುಸಿತದ ಹಾದಿಯನ್ನು ಹಿಡಿದಿತ್ತು. ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿನ ಇಳಿಕೆ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ತೊಡಗಿಸಲು ತೋರಿದ ಉತ್ಸಾಹವು ಭಾರತೀಯ ಷೇರುಪೇಟೆಗೆ ತುಸು ‘ಚೈತನ್ಯ’ವನ್ನು ತಂದುಕೊಟ್ಟಿರುವಂತೆ ಕಾಣುತ್ತಿದೆ.

ಕಳೆದ ವಾರದ ವಹಿವಾಟನ್ನು ಗಮನಿಸಿದಾಗ ಮುಂಬೈ ಷೇರು ವಿನಿಮಯ ಕೇಂದ್ರದ (BSE) ಪ್ರಧಾನ ಸೂಚ್ಯಂಕವಾದ ‘ಎಸ್&ಪಿ ಸೆನ್ಸೆಕ್ಸ್’ 2,311 (ಶೇ 4.30) ಅಂಶ ಹಾಗೂ ರಾಷ್ಟ್ರೀಯ ಷೇರು ವಿನಿಮಿಯ ಕೇಂದ್ರ (NSE)ದ ‘ನಿಫ್ಟಿ–50’ ಸೂಚ್ಯಂಕವು 670 (ಶೇ 4.18) ಅಂಶಗಳಷ್ಟು ಏರಿಕೆ ಕಂಡಿದೆ.

ಇದೇ ಅವಧಿಯಲ್ಲಿ ‘ಬಿಎಸ್‌ಇ ಬ್ಯಾಂಕೆಕ್ಸ್’ ಸೂಚ್ಯಂಕವು 2,331 (ಶೇ 5.81) ಹಾಗೂ ‘ನಿಫ್ಟಿ ಬ್ಯಾಂಕ್’ ಸ್ಯೂಚ್ಯಂಕವು 2,056 (ಶೇ 5.93) ಅಂಶಗಳಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿವೆ. ಈ ಎಲ್ಲಾ ಸೂಚ್ಯಂಕಗಳನ್ನೂ ಮೀರಿಸಿರುವ ‘ನಿಫ್ಟಿ ಪಿಎಸ್‌ಯು ಬ್ಯಾಂಕ್’ ಸೂಚ್ಯಂಕವು, 199 (ಶೇ 7.71) ಅಂಶಗಳಷ್ಟು ಏರಿಕೆಯನ್ನು ದಾಖಲಿಸುವ ಮೂಲಕ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ.

ಒಂದು ತಿಂಗಳ ಅವಧಿಯ ಸಾಧನೆಯನ್ನು ನೋಡಿದಾಗ ಸೆನ್ಸೆಕ್ಸ್ ಶೇ 8.20, ನಿಫ್ಟಿ–50 ಶೇ 8.47, ಬಿಎಸ್‌ಇ ಬ್ಯಾಂಕೆಕ್ಸ್ ಶೇ 12.03, ನಿಫ್ಟಿ ಬ್ಯಾಂಕ್ ಶೇ 11.85ರಷ್ಟು ಏರಿಕೆಯನ್ನು ಕಂಡಿದೆ. ಇದೇ ಅವಧಿಯಲ್ಲಿ ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು ಶೇ 16.07ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿರುವುದನ್ನು ಗಮನಿಸಿದರೆ, ಹೂಡಿಕೆದಾರರ ಚಿತ್ತ ಪಿಎಸ್‌ಯು ಬ್ಯಾಂಕ್‌ಗಳತ್ತ ಹೊರಳಿದಂತೆ ಭಾಸವಾಗುತ್ತಿದೆ.

ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು ಕಳೆದ ಮೂರು ತಿಂಗಳಲ್ಲಿ ಕೇವಲ ಶೇ 0.04, ಆರು ತಿಂಗಳಲ್ಲಿ ಶೇ 2.89ರಷ್ಟು ಅಲ್ಪ ಏರಿಕೆ ಕಂಡಿದೆ. ವರ್ಷಾರಂಭದಿಂದ ಇದುವರೆಗೆ (YTD) ಶೇ 10.18ರಷ್ಟು ಏರಿಕೆ ದಾಖಲಿಸಿರುವ ಈ ಸೂಚ್ಯಂಕವು, ಒಂದು ವರ್ಷದ ಅವಧಿಯಲ್ಲಿ ಶೇ 15.67 ಹಾಗೂ ಎರಡು ವರ್ಷಗಳಲ್ಲಿ ಶೇ 92.38ರಷ್ಟು ಮೌಲ್ಯ ವೃದ್ದಿಸಿಕೊಂಡಿರುವುದು ಗಮನಾರ್ಹ ಸಂಗತಿ.

ಕೆನರಾ ಬ್ಯಾಂಕ್ ಚಾಂಪಿಯನ್

ಕಳೆದ ಒಂದು ತಿಂಗಳ ಅವಧಿಯನ್ನು ಅವಲೋಕಿಸಿದಾಗ ಪಿಎಸ್‌ಯು ಬ್ಯಾಂಕ್‌ಗಳ ಪೈಕಿ ಕೆನರಾ ಬ್ಯಾಂಕ್ ತನ್ನ ಷೇರಿನ ಮೌಲ್ಯವನ್ನು ₹ 48.20 (ಶೇ 26.65)ರಷ್ಟು ಹೆಚ್ಚಿಸಿಕೊಳ್ಳುವ ಮೂಲಕ ಗಳಿಕೆಯ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿದೆ. ಈ ಕಂಪನಿಯ ಷೇರಿನ ಬೆಲೆಯು ಕಳೆದ ವಾರದ ವಹಿವಾಟಿನಲ್ಲಿ ₹ 22.95 (ಶೇ 11.13)ರಷ್ಟು ಹೆಚ್ಚಾಗಿರುವುದೂ ಗಮನಾರ್ಹ ಸಂಗತಿ.

ಮೂರು ತಿಂಗಳ ಅವಧಿಯಲ್ಲಿ ಶೇ –1.80 ಮೌಲ್ಯ ಕಳೆದುಕೊಂಡಿದ್ದ ಕೆನರಾ ಬ್ಯಾಂಕ್, ಆರು ತಿಂಗಳಲ್ಲಿ ಶೇ 6.24 ಹಾಗೂ ಒಂದು ವರ್ಷದಲ್ಲಿ ಶೇ 58.07ರಷ್ಟು ಏರಿಕೆಯನ್ನು ಕಂಡಿದೆ. 2021ರ ಜುಲೈ 28ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹ 142.10) ಕುಸಿದಿತ್ತು. ಕಳೆದ ಫೆಬ್ರುವರಿ 3ರಂದು 52 ವಾರಗಳ ಗರಿಷ್ಠ ಮಟ್ಟಕ್ಕೆ (₹ 272.80) ತಲುಪಿತ್ತು. 52 ವಾರಗಳ ಕನಿಷ್ಠ ಮಟ್ಟದಿಂದ ಜುಲೈ 22ರ ವೇಳೆಗೆ ₹ 86.95 (ಶೇ 61.18)ರಷ್ಟು ಬೆಲೆ ಹೆಚ್ಚಿಸಿಕೊಂಡಿದೆ.

ಒಂದು ತಿಂಗಳಲ್ಲಿ ಷೇರಿನ ಮೌಲ್ಯವನ್ನು ₹ 32.50 (ಶೇ 22.28)ರಷ್ಟು ಹೆಚ್ಚಿಸಿಕೊಂಡಿರುವ ಇಂಡಿಯನ್ ಬ್ಯಾಂಕ್ ಎರಡನೇ ಸ್ಥಾನದಲ್ಲಿದೆ. ಒಂದು ವಾರದಲ್ಲಿ ಈ ಕಂಪನಿಯ ಷೇರಿನ ಮೌಲ್ಯವು ₹ 6.65 (ಶೇ 3.87)ರಷ್ಟು ಹೆಚ್ಚಾಗಿದೆ. 2021ರ ಆಗಸ್ಟ್ 21ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹ 115.10) ಕುಸಿದಿದ್ದ ಷೇರಿನ ಬೆಲೆಯು, ಕಳೆದ ಅಕ್ಟೋಬರ್ 26ರಂದು 52 ವಾರಗಳ ಗರಿಷ್ಠ ಮಟ್ಟಕ್ಕೆ (₹ 194.95) ತಲುಪಿತ್ತು. 52 ವಾರಗಳ ಕನಿಷ್ಠ ಮಟ್ಟದಿಂದ ಇದುವರೆಗೆ ₹ 63.25 (ಶೇ 54.95)ರಷ್ಟು ಬೆಲೆ ಹೆಚ್ಚಾಗಿದೆ.

ಬ್ಯಾಂಕ್ ಆಫ್ ಬರೋಡ (ಶೇ 21.63), ಜೆ.ಕೆ. ಬ್ಯಾಂಕ್ (ಶೇ 16.33), ಎಸ್‌ಬಿಐ (ಶೇ 14.75), ಬ್ಯಾಂಕ್ ಆಫ್ ಇಂಡಿಯಾ (ಶೇ 11.48) ಕಂಪನಿಗಳ ಷೇರಿನ ಮೌಲ್ಯ ಒಂದು ತಿಂಗಳ ಅವಧಿಯಲ್ಲಿ ಗಮನಾರ್ಹವಾಗಿ ವರ್ಧನೆಯಾಗಿದೆ.

ಖಾಸಗಿ ವಲಯದಲ್ಲಿ ಮುಂಚೂಣಿಯಲ್ಲಿರುವ ಫೆಡರಲ್ ಬ್ಯಾಂಕ್

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಜೊತೆಗೆ ಪೈಪೋಟಿಗೆ ಇಳಿದಿರುವ ಖಾಸಗಿ ಬ್ಯಾಂಕ್‌ಗಳೂ ಷೇರಿನ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ.

ಒಂದು ತಿಂಗಳ ಅವಧಿಯಲ್ಲಿ ಷೇರಿನ ಮೌಲ್ಯವನ್ನು ಶೇ 23.50ರಷ್ಟು ಹೆಚ್ಚಿಸಿಕೊಂಡಿರುವಫೆಡರಲ್ ಬ್ಯಾಂಕ್, ‘ನಿಫ್ಟಿ ಪ್ರೈವೇಟ್ ಬ್ಯಾಂಕ್’ ಸೂಚ್ಯಂಕದೊಂದಿಗೆ ಗುರುತಿಸಿಕೊಂಡಿರುವ 10 ಖಾಸಗಿ ಬ್ಯಾಂಕ್‌ಗಳ ಪೈಕಿ ಗಳಿಕೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ಒಂದು ವಾರದಲ್ಲಿ ಈ ಕಂಪನಿಯ ಷೇರಿನ ಬೆಲೆ ಶೇ 8.56ರಷ್ಟು ಹೆಚ್ಚಾಗಿದೆ.

ಐಡಿಎಫ್‌ಸಿ ಫಸ್ಟ್ ಬ್ಯಾಂಕ್ (ಶೇ 22.64), ಇಂಡಸ್ ಬ್ಯಾಂಕ್ (ಶೇ 21.19), ಯೆಸ್ ಬ್ಯಾಂಕ್ (ಶೇ 18.07), ಎಕ್ಸಿಸ್ ಬ್ಯಾಂಕ್ (ಶೇ 16.58), ಐಸಿಐಸಿಐ ಬ್ಯಾಂಕ್ (ಶೇ 16.52) ಹಾಗೂ ಕೋಟಕ್ ಮಹಿಂದ್ರಾ ಬ್ಯಾಂಕ್ (ಶೇ 9.43) ಒಂದು ತಿಂಗಳ ಅವಧಿಯಲ್ಲಿ ಗಮನಾರ್ಹವಾಗಿ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ.

ಮಾರುಕಟ್ಟೆ ಬಂಡವಾಳದ ಲೆಕ್ಕಾಚಾರದಲ್ಲಿ ಬ್ಯಾಂಕಿಂಗ್ ವಲಯದ ‘ದೊಡ್ಡಣ್ಣ’ ಎಂದೇ ಹೆಸರಾಗಿರುವ ‘ಎಚ್‌ಡಿಎಫ್‌ಸಿ ಬ್ಯಾಂಕ್’ನ ಷೇರಿನ ಮೌಲ್ಯವು ಈ ಅವಧಿಯಲ್ಲಿ ಕೇವಲ ಶೇ 4.68ರಷ್ಟು ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.