ಈ ಬೆಳವಣಿಗೆಯನ್ನು ಬಹುಶಃ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಇಬ್ಬರೂ ನಿರೀಕ್ಷಿಸಿರಲಿಕ್ಕಿಲ್ಲ. 2020ರ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲೂ ಬೈಡನ್ ಅವರ ವಯಸ್ಸಿನ ಕುರಿತು ಚರ್ಚೆ ನಡೆದಿತ್ತು ನಿಜ. ಒಂದೊಮ್ಮೆ ಬೈಡನ್ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಆ ಸ್ಥಾನವನ್ನು ತುಂಬಬೇಕಾಗಬಹುದು. ಬರೀ ಒಂದು ಅವಧಿಗೆ ಸೆನೆಟರ್ ಆಗಿ ರಾಜಕೀಯ ಅನುಭವ ಹೊಂದಿರುವ ಕಮಲಾ ಹ್ಯಾರಿಸ್, ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಕಾರ್ಯ ನಿರ್ವಹಿಸಲು ಸಮರ್ಥರೇ ಎಂಬ ಪ್ರಶ್ನೆ ಬೈಡನ್ ಅವರು ಕಮಲಾ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ದುಕೊಂಡಾಗ ಎದ್ದಿತ್ತು. ಇದೀಗ ನೋಡಿದರೆ ಎರಡನೆಯ ಅವಧಿಗೆ ಸ್ವತಃ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗುವ ಸಂದರ್ಭ ಎದುರಾಗಿದೆ!

ಕುಸಿದ ಜನಪ್ರಿಯತೆ ಮತ್ತು ಪಕ್ಷದೊಳಗಿನ ವಿರೋಧಕ್ಕೆ ಮಣಿದಿರುವ ಅಧ್ಯಕ್ಷ ಬೈಡನ್, ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಬಲಗೊಳ್ಳದ ಆರ್ಥಿಕತೆ, ಜಾಗತಿಕ ವೇದಿಕೆಯಲ್ಲಿ ಮಂಕಾದ ಅಮೆರಿಕದ ವರ್ಚಸ್ಸು, ಏರು ವಯಸ್ಸಿನ ಕಾರಣಕ್ಕೆ ಬಳಲಿದ ದೇಹ ಮತ್ತು ಧ್ವನಿ ಬೈಡನ್ ಅವರನ್ನು ದುರ್ಬಲ ಅಧ್ಯಕ್ಷ ಸ್ಥಾನದಲ್ಲಿ ನಿಲ್ಲಿಸಿವೆ. ಉಪಾಧ್ಯಕ್ಷೆಯಾಗಿ ಬೈಡನ್ ಅವರ ಛಾಯೆಯಂತೆ ಇದ್ದ ಕಮಲಾ ಹ್ಯಾರಿಸ್ ಉತ್ಸಾಹದಿಂದ ಎದ್ದು ನಿಂತಿದ್ದಾರೆ.

ಅಮೆರಿಕದ ಇತಿಹಾಸದಲ್ಲಿ ಹಾಲಿ ಅಧ್ಯಕ್ಷರು ‘ಮತ್ತೊಂದು ಅವಧಿಗೆ ಅಧ್ಯಕ್ಷನಾಗಲಾರೆ’ ಎಂದು ಚುನಾವಣಾ ಕಣದಿಂದ ಹಿಂದೆ ಸರಿದದ್ದು ಇದೇ ಮೊದ ಲೇನೂ ಅಲ್ಲ. 1952ರಲ್ಲಿ ಅಂದಿನ ಅಧ್ಯಕ್ಷ ಹ್ಯಾರಿ ಟ್ರೂಮನ್ ಮತ್ತು 1968ರಲ್ಲಿ ಲಿಂಡನ್ ಜಾನ್ಸನ್ ಚುನಾ ವಣಾ ವರ್ಷದಲ್ಲಿ ತಾವು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಹಿಂದೆ ಸರಿದಿದ್ದರು. ಕೊರಿಯನ್ ಯುದ್ಧದ ಕಾರಣ ಟ್ರೂಮನ್ ಅವರ ಜನಪ್ರಿಯತೆ ಕುಸಿದಿತ್ತು. ವಿಯೆಟ್ನಾಂ ಯುದ್ಧವು ಜಾನ್ಸನ್ ಅವರ ಕಾಲಿಗೆ ತೊಡಕಾಗಿತ್ತು. ಈ ಇಬ್ಬರು ನಾಯಕರು ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಯಾಗುವುದಿಲ್ಲ ಎಂದು ಘೋಷಿಸಿದ್ದರು. ಆ ಎರಡೂ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದರು.

ಆದರೆ ಈಗಿನ ಸಂದರ್ಭವೇ ಬೇರೆ. ಬೈಡನ್ ಸ್ವಯಿಚ್ಛೆಯಿಂದ ಚುನಾವಣೆಗೆ ಸ್ಪರ್ಧಿಸಲಾರೆ ಎಂದವರಲ್ಲ. ತೀರಾ ಇತ್ತೀಚಿನವರೆಗೂ ತಾನು ಇನ್ನೊಂದು ಅವಧಿಗೆ ಅಧ್ಯಕ್ಷನಾಗಲು ಎಲ್ಲ ರೀತಿಯಿಂದಲೂ ಸಮರ್ಥ ಎಂದೇ ಅವರು ಸಂದರ್ಶನಗಳಲ್ಲಿ ವಾದಿಸುತ್ತಿದ್ದರು. ಕೆಲವು ವಾರಗಳ ಕೆಳಗೆ ಟ್ರಂಪ್ ಅವರೊಂದಿಗೆ ನಡೆದ
ಚರ್ಚೆಯಲ್ಲಿ ವಯಸ್ಸಿನ ಕುರಿತು ಪ್ರಶ್ನೆ ಬಂದಾಗ, ‘ಟ್ರಂಪ್ ಅವರನ್ನು ಸೋಲಿಸಲು, ಪ್ರಜಾಪ್ರಭುತ್ವವನ್ನು ಉಳಿಸಲು ನಾನೇ ಸಮರ್ಥ’ ಎಂದು ಬೈಡನ್ ಕ್ಷೀಣ ಧ್ವನಿಯಲ್ಲೇ ಉತ್ತರಿಸಿದ್ದರು.

ಆದರೆ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವಿನ ಮೊದಲ ಸಂವಾದದಲ್ಲಿ ಟ್ರಂಪ್ ಅವರ ಖಡಕ್ ಉತ್ತರಗಳ ಎದುರು ಮಂಕಾಗಿ ಕಂಡಿದ್ದ ಬೈಡನ್ ಅವರ ವಿರುದ್ಧ ಪಕ್ಷದೊಳಗೆ ಅಪಸ್ವರ ಕೇಳಿಬಂತು. ಸ್ಪರ್ಧೆಯಿಂದ ಹಿಂದೆ ಸರಿಯಿರಿ ಎಂಬ ಅಭಿಯಾನ ನಡೆಯಿತು. ಕೊನೆಗೂ ಬೈಡನ್ ಕಣದಿಂದ ಹಿಂದೆ ಸರಿದರು.

ಇದೀಗ ಕಮಲಾ ಹ್ಯಾರಿಸ್ ಉತ್ಸಾಹದಿಂದ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ. ಒಬಾಮ, ಬೈಡನ್, ಅಲ್ ಗೋರ್ ಸೇರಿದಂತೆ ಡೆಮಾಕ್ರಟಿಕ್ ಪಕ್ಷದ ಹಿರಿಯ ನಾಯಕರು ಕಮಲಾ ಅವರ ಉಮೇದುವಾರಿಕೆ
ಯನ್ನು ಅನುಮೋದಿಸಿರುವುದರಿಂದ, ಈ ತಿಂಗಳ 19ರಿಂದ 22ರವರೆಗೆ ನಡೆಯಲಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಅಧಿವೇಶನದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರು ಹೊರಹೊಮ್ಮುವುದು ಬಹುತೇಕ ಖಚಿತವಾಗಿದೆ. ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷರಾಗಿ ಶ್ವೇತಭವನ ಪ್ರವೇಶಿಸುವ ಅವಕಾಶ ಕಮಲಾ ಅವರ ಮುಂದಿದೆ.

ಕಮಲಾ ಅವರ ಬದುಕು ಮತ್ತು ರಾಜಕೀಯ ಬೆಳವಣಿಗೆಯನ್ನು ಗಮನಿಸಿದವರಿಗೆ ಸ್ಪಷ್ಟವಾಗುವ ಅಂಶ ಎಂದರೆ, ಆಕೆ ಮಹತ್ವಾಕಾಂಕ್ಷಿ. ಕಂಡ ಕನಸನ್ನು ನನಸು ಮಾಡಿಕೊಳ್ಳುವ ಛಲ ಇರುವ ಮಹಿಳೆ. ಶ್ರಮ ಮತ್ತು ಬುದ್ಧಿವಂತಿಕೆಯನ್ನು ಬಳಸಿ ರಾಜಕೀಯದ ಮೆಟ್ಟಿಲುಗಳನ್ನು ಏರಿದ ಚಾಣಾಕ್ಷೆ.

ಸಾಮಾನ್ಯವಾಗಿ ಉಪಾಧ್ಯಕ್ಷರಾದವರು ತೆರೆಮರೆ ಯಲ್ಲೇ ಉಳಿಯುತ್ತಾರೆ. ಕೆಲವರು ಮಾತ್ರ ಉಪಾಧ್ಯಕ್ಷ
ರಾಗಿಯೂ ಆಡಳಿತದ ನೀತಿ ನಿಲುವುಗಳನ್ನು ನಿರ್ದೇಶಿಸುವ ಕೆಲಸ ಮಾಡಿದ್ದಾರೆ. ಐಸೆನ್ ಹೋವರ್ ಅವರ ಅವಧಿಯಲ್ಲಿ ಉಪಾಧ್ಯಕ್ಷ ರಿಚರ್ಡ್ ನಿಕ್ಸನ್ ಅವರೇ ಬಹುತೇಕ ಸಭೆಗಳನ್ನು ನಿರ್ವಹಿಸುತ್ತಿದ್ದರು. ಜಾನ್ ಎಫ್. ಕೆನಡಿ ಅವರ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಲಿಂಡನ್ ಜಾನ್ಸನ್, ಕೆನಡಿ ಹತ್ಯೆಯ ಬಳಿಕ ಉಂಟಾದ ನಿರ್ವಾತವನ್ನು ಬಹುಬೇಗ ತುಂಬಿದರು. ಜಾರ್ಜ್ ಬುಷ್ ಸೀನಿಯರ್ ಅವಧಿಯಲ್ಲಿ ಶ್ವೇತಭವನವು ಉಪಾಧ್ಯಕ್ಷ ಡಿಕ್ ಚೆನಿ ಅವರ ನಿಯಂತ್ರಣದಲ್ಲಿದೆ ಎಂಬ ಮಾತಿತ್ತು. ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ ಅವರಿಗೆ ಸರಿಸಮಾನವಾಗಿ ಎಲ್ಲ ವಿಷಯಗಳಲ್ಲೂ ಅತಿ ಚುರುಕಿನಿಂದ ಕೆಲಸ ಮಾಡಿದವರು ಅಲ್ ಗೋರ್.

ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ಮಾಡಿದ್ದೇನು ಎಂದು ನೋಡಿದರೆ, ಹೆಚ್ಚಿನ ಸಂಗತಿಗಳು ಸಿಗುವುದಿಲ್ಲ. 2022ರ ಜೂನ್‌ನಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ರದ್ದುಗೊಳಿಸುವ ಅಚ್ಚರಿಯ ತೀರ್ಪು ನೀಡಿತು. ಗರ್ಭಪಾತದ ಹಕ್ಕಿನ ಪರ ಇರುವ ಡೆಮಾಕ್ರಟಿಕ್ ಪಕ್ಷ ಹೊಸದೊಂದು ಹೋರಾಟಕ್ಕೆ ಸಜ್ಜಾಯಿತು. ಆಗ ಕಮಲಾ ಗರ್ಭಪಾತದ ಹಕ್ಕನ್ನು ರಕ್ಷಿಸುವ ಕುರಿತು ಮಾತನಾಡಿದರು. ‘ಸಂತಾನೋತ್ಪತ್ತಿ ಸ್ವಾತಂತ್ರ‍್ಯ’ದ ಅಭಿಯಾನ ಕೈಗೊಂಡರು. ಗರ್ಭಪಾತದ ಕ್ಲಿನಿಕ್ ಒಂದಕ್ಕೆ ಭೇಟಿ ಕೊಟ್ಟರು. ಅಂತಹ ಕ್ಲಿನಿಕ್ ಒಂದಕ್ಕೆ ಭೇಟಿ ನೀಡಿದ ಅಮೆರಿಕದ ಮೊದಲ ಉಪಾಧ್ಯಕ್ಷೆ ಎನಿಸಿಕೊಂಡರು. ಬಂದೂಕು ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ದಿಸೆಯಲ್ಲಿ ಶ್ವೇತಭವನದಲ್ಲಿ ವಿಶೇಷ ಕಚೇರಿಯನ್ನು ತೆರೆದಾಗ ಅದರ ಉಸ್ತುವಾರಿಯನ್ನು ಕಮಲಾ ವಹಿಸಿಕೊಂಡರು.

ಈ ಎರಡೂ ವಿಷಯಗಳು ಚುನಾವಣಾ ದೃಷ್ಟಿಯಿಂದ ಮುಖ್ಯವಾದವು. ಅಮೆರಿಕದ ಹಲವು ಅಧ್ಯಕ್ಷೀಯ ಚುನಾವಣೆಗಳು ಗರ್ಭಪಾತ ಸ್ವಾತಂತ್ರ‍್ಯ ಎಂಬ ವಿಷಯದ ಸುತ್ತಲೇ ಗಿರಕಿ ಹೊಡೆದ ನಿದರ್ಶನಗಳಿವೆ. ಡೊನಾಲ್ಡ್ ಟ್ರಂಪ್ ಗರ್ಭಪಾತ ಸ್ವಾತಂತ್ರ‍್ಯದ ವಿಷಯದಲ್ಲಿ ಸ್ಪಷ್ಟ ನಿಲುವು ಹೊಂದಿಲ್ಲ. ಹಾಗಾಗಿ, ಟ್ರಂಪ್ ಅವರು ವಲಸೆ ವಿಷಯವನ್ನು ಈ ಬಾರಿ ಆದ್ಯತೆಯನ್ನಾಗಿಸಿಕೊಂಡರೆ, ಕಮಲಾ ಗರ್ಭಪಾತ ಸ್ವಾತಂತ್ರ್ಯದ ವಿಷಯವನ್ನು ಮುಖ್ಯ ಸಂಗತಿಯಾಗಿಸಿಕೊಳ್ಳಬಹುದು. ಹಲವು ಮೊಕದ್ದಮೆಗಳನ್ನು ಎದುರಿಸುತ್ತಿರುವ ಟ್ರಂಪ್ ಅವರನ್ನು ವಕೀಲ ವೃತ್ತಿ ಹಿನ್ನೆಲೆಯ ಕಮಲಾ ಹೇಗೆ ಕಟ್ಟಿಹಾಕುತ್ತಾರೆ ನೋಡಬೇಕು. ಮಹಿಳಾ ಅಭ್ಯರ್ಥಿ ಮತ್ತು ವರ್ಣೀಯ ಅಭ್ಯರ್ಥಿ ಎನ್ನುವುದನ್ನು ಅವರು ಗೆಲುವಿನ ದಾಳವಾಗಿ ಬಳಸಿಕೊಳ್ಳಬಹುದು.

ಡೊನಾಲ್ಡ್ ಟ್ರಂಪ್ ಅವರ ಮೇಲೆ ಇತ್ತೀಚೆಗೆ ನಡೆದ ಗುಂಡಿನ ದಾಳಿಯು ಚುನಾವಣೆ ಕುರಿತ ಲೆಕ್ಕಾಚಾರವನ್ನು, ಅಭ್ಯರ್ಥಿಗಳ ಬಗೆಗಿನ ಚಿತ್ರಣವನ್ನು ಬದಲಿಸಿಬಿಟ್ಟಿದೆ. ಕಿವಿಗೆ ಗುಂಡು ತಾಗಿ ರಕ್ತ ಒಸರುತ್ತಿದ್ದರೂ ಭದ್ರತಾ ಸಿಬ್ಬಂದಿಯ ಮಧ್ಯದಿಂದ ಎದ್ದು ಗಾಳಿಗೆ ಕೈ ಗುದ್ದಿದ ಟ್ರಂಪ್ ಅವರ ಚಿತ್ರ ಅವರನ್ನು ‘ಗಟ್ಟಿಗ’ ಎಂಬಂತೆ ಬಿಂಬಿಸಿದೆ. ಪ್ರಚಾರ ಸಭೆಗಳಲ್ಲಿ ಟ್ರಂಪ್ ಅವರು ‘ಪ್ರಜಾಪ್ರಭುತ್ವಕ್ಕಾಗಿ ನಾನು ಗುಂಡಿನ ದಾಳಿ ಎದುರಿಸಬೇಕಾಯಿತು’ ಎನ್ನತೊಡಗಿದ್ದಾರೆ. ಅವರ ತಂಡ ಆ ಚಿತ್ರವನ್ನು ಎಲ್ಲೆಡೆ ಪರಿಣಾಮ
ಕಾರಿಯಾಗಿ ಬಳಸುತ್ತಿದೆ. ಪಕ್ಷದೊಳಗಿನ ಆಂತರಿಕ ಒತ್ತಡವನ್ನು ತಾಳಿಕೊಂಡು, ‘ನಾನು ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ’ ಎಂದು ಪಟ್ಟುಹಿಡಿದಿದ್ದ ಬೈಡನ್ ಅವರನ್ನು ಆ ಘಟನೆ ಮತ್ತು ಟ್ರಂಪ್ ಅವರ ಆ ಒಂದು ಚಿತ್ರ ಕದಲಿಸಿಬಿಟ್ಟಿತೇ, ಕಣದಿಂದ ಹಿಂದೆ ಸರಿಯುವಂತೆ ಮಾಡಿತೇ?

ಅದೇನೇ ಇರಲಿ, ಅಮೆರಿಕದ ಎಲ್ಲ ಸಂಕಷ್ಟಗಳಿಗೂ ವಲಸಿಗರೇ ಕಾರಣ ಎಂಬಂತೆ ಮಾತನಾಡುವ ಟ್ರಂಪ್ ಎದುರು ಇದೀಗ ವಲಸಿಗ ದಂಪತಿಯ ಮಗಳು ಕಮಲಾ ಹ್ಯಾರಿಸ್ ನಿಂತಿದ್ದಾರೆ. ಹಲವು ಮೊದಲುಗಳನ್ನು ಸಾಧಿಸಿರುವ ಕಮಲಾ, ಗಾಜಿನ ಚಾವಣಿಯನ್ನು ಸೀಳಿ ಮತ್ತೊಂದು ಮೊದಲನ್ನು ಸಾಧಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ಸುಲಭವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.