ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಸತತ ಮಳೆ: ನೀರು ಪಾಲಾದ ಬೆಳೆ

ಮುಂಗಾರಿನಲ್ಲಿ ಕಾಡಿದ್ದ ಪ್ರವಾಹ ಹಿಂಗಾರಿಗೂ ಕಾಡುತಿದೆ
Published : 21 ಅಕ್ಟೋಬರ್ 2024, 6:47 IST
Last Updated : 21 ಅಕ್ಟೋಬರ್ 2024, 6:47 IST
ಫಾಲೋ ಮಾಡಿ
Comments
ಹುನಗುಂದ ತಾಲ್ಲೂಕಿನ ನಾಗೂರು ಗ್ರಾಮದ ಹೊಲದಲ್ಲಿನ ಈರುಳ್ಳಿ ಬೆಳೆ ನಿರಂತರ ಮಳೆಯಿಂದ ಹಳದಿ ಬಣ್ಣಕ್ಕೆ ತಿರುಗಿರುವುದು
ಹುನಗುಂದ ತಾಲ್ಲೂಕಿನ ನಾಗೂರು ಗ್ರಾಮದ ಹೊಲದಲ್ಲಿನ ಈರುಳ್ಳಿ ಬೆಳೆ ನಿರಂತರ ಮಳೆಯಿಂದ ಹಳದಿ ಬಣ್ಣಕ್ಕೆ ತಿರುಗಿರುವುದು
ಬಾದಾಮಿ ಸಮೀಪದ ಮುಮರಡ್ಡಿಕೊಪ್ಪ ಗ್ರಾಮದ ಮಲಪ್ರಭಾ ನದಿ ದಂಡೆಯ ಹೊಲಗಳಿಗೆ ನದಿ ನೀರು ನುಗ್ಗಿ ಬೆಳೆಯೆಲ್ಲ ಜಲವೃತವಾಗಿರುವುದು
ಬಾದಾಮಿ ಸಮೀಪದ ಮುಮರಡ್ಡಿಕೊಪ್ಪ ಗ್ರಾಮದ ಮಲಪ್ರಭಾ ನದಿ ದಂಡೆಯ ಹೊಲಗಳಿಗೆ ನದಿ ನೀರು ನುಗ್ಗಿ ಬೆಳೆಯೆಲ್ಲ ಜಲವೃತವಾಗಿರುವುದು
ನೀರಲ್ಲಿ ನಿಂತಿರುವ ಈರುಳ್ಳಿ ಬೆಳೆ
ನೀರಲ್ಲಿ ನಿಂತಿರುವ ಈರುಳ್ಳಿ ಬೆಳೆ
ಈ ಬಾರಿ ತೊಗರಿ ಬೆಳೆ ಉತ್ತಮ ಇಳುವರಿ ಬರುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ತೊಗರಿ ಬೆಳೆ ನೆಲಕಚ್ಚಿದೆ. ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು.
– ಮಹಾಂತೇಶ ಗುಡದಪ್ಪನವರ ರೈತ ಚಿತ್ತವಾಡಗಿ
ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳ ಹಾನಿಯ ಸಮೀಕ್ಷೆ ನಡೆದಿದೆ. ಕೆಲವು ಕಡೆಗಳಲ್ಲಿ ಈರುಳ್ಳಿ ಬೆಳೆ ಹಾನಿ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ
ರವೀಂದ್ರ ಹಕಾಟೆ ಉಪನಿರ್ದೇಶಕ ತೋಟಗಾರಿಕೆ ಇಲಾಖೆ
ನದಿ ದಂಡೆಯ ರೈತರಿಗೆ ಶಾಪವಾದ ಪ್ರವಾಹ
ಬಾದಾಮಿ: ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ಪಕ್ಕದ ಗ್ರಾಮಗಳ ರೈತರಿಗೆ ಪ್ರತಿ ವರ್ಷ ಏನಾದರೊಂದು ಸಮಸ್ಯೆ ಕಾದಿರುತ್ತದೆ. ನದಿ ಬತ್ತಿ ಮಳೆಯಾಗದೇ ಬರ ಇಲ್ಲವೇ ಪ್ರವಾಹದಿಂದ ಬೆಳೆ ಹಾನಿಯಾಗುತ್ತದೆ. ನದಿ ದಂಡೆಯಲ್ಲಿ ಕಪ್ಪು ಮತ್ತು ಕೆಂಪು ಮಣ್ಣಿನ ಫಲವತ್ತಾದ ಜಮೀನುಗಳಿವೆ. ರೈತರು ಎರಡು ಬೆಳೆಯನ್ನು ತೆಗೆಯಬಹುದಾಗಿದ್ದು ಬಿತ್ತನೆ ಮಾಡಿ ಬೆಳೆದ ಬೆಳೆಯು ಇನ್ನೇನು ಕೈಗೆ ಬರುತ್ತದೆ ಎನ್ನುವಾಗಲೇ ಪ್ರವಾಹ ಬಂದು ರೈತರ ಶ್ರಮವು ನೀರಿನಲ್ಲಿ ಕೊಚ್ಚಿ ಹೋಗುತ್ತದೆ. ‘ಈ ಬಾರಿ ಎರಡೂ ಸಲ ಪ್ರವಾಹ ಬಂದು ಬೆಳೆಯೆಲ್ಲ ಹಾನಿಯಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಆಗಸ್ಟ್ ಮತ್ತು ಅಕ್ಟೋಬರ್ ಎರಡನೇ ವಾರದಲ್ಲಿ ನದಿಗೆ ಬೆಣ್ಣೆಹಳ್ಳದ ಮತ್ತು ನವಿಲುತೀರ್ಥ ಜಲಾಶಯದಿಂದ ಬಿಟ್ಟ ಹೆಚ್ಚುವರಿ ನೀರಿನಿಂದ ಕಬ್ಬು ಮೆಕ್ಕೆಜೋಳ ಹೆಸರು ಹತ್ತಿ ಶೇಂಗಾ ಮತ್ತು ತೊಗರಿ ಬೆಳೆಗಳೆಲ್ಲ ಹಾನಿಯಾಗಿವೆ ’ ಎಂದು ಮುರಡ್ಡಿಕೊಪ್ಪ ಗ್ರಾಮದ ರೈತ ವೀರಭದ್ರಯ್ಯ ಹೇಳಿದರು. ‘ ಕಂದಾಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸರ್ವೇ ಪ್ರಕಾರ ಆಗಸ್ಟ್ ತಿಂಗಳ ಪ್ರವಾಹದಿಂದ ನದಿ ದಂಡೆಯಲ್ಲಿ ಅಂದಾಜು 1540 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಪ್ರವಾಹದಿಂದ ಅಂದಾಜು 500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಪ್ರವಾಹ ಕಡಿಮೆಯಾದ ನಂತರ ಜಂಟಿಯಾಗಿ ಸರ್ವೇ ಕಾರ್ಯ ಆರಂಭಿಸಲಾಗುವುದು ’ ಎಂದು ತಹಶೀಲ್ದಾರ್ ಮಧುರಾಜ ಮತ್ತು ಸಹಾಯಕ ಕೃಷಿ ನಿರ್ದೇಶಕ ಅಶೋಕ ತಿರಕನ್ನವರ ತಿಳಿಸಿದರು.
ನೀರಿನಲ್ಲಿ ನಿಂತಿರುವ ಈರುಳ್ಳಿ
ರಾಂಪುರ:ವಾರದಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಕ್ಕಿಂತ ಬೆಳೆಗಳು ನೀರಲ್ಲಿ ನಿಂತು ಕೊಳೆಯುವ ಭೀತಿ ಎದುರಾಗಿರುವುದು ರೈತರನ್ನು ಚಿಂತಾಕ್ರಾಂತರನ್ನಾಗಿಸಿದೆ. ಬಾಗಲಕೋಟೆ ತಾಲ್ಲೂಕಿನ ಶಿರೂರ ಹಾಗೂ ರಾಂಪುರ ಹೋಬಳಿಯಲ್ಲಂತೂ ಮಂಗಳವಾರದಿಂದಲೇ ಧಾರಾಕಾರ ಮಳೆ ಸುರಿದು ಅನೇಕ ಗ್ರಾಮಗಳ ಜಮೀನುಗಳು ಸಂಪೂರ್ಣ ನೀರಲ್ಲಿ ಮುಳುಗಿದ್ದು ಕೊಯ್ಲಿಗೆ ಬಂದಿರುವ ಸಜ್ಜೆ ಗೋವಿನಜೋಳ ಈರುಳ್ಳಿ ಬೆಳೆಗಳು ನೀರಲ್ಲಿ ನಿಂತಿವೆ. ಈರುಳ್ಳಿಗೆ ಉತ್ತಮ ಬೆಲೆ ಸಿಗುತ್ತಿದೆ. ಈರುಳ್ಳಿಯನ್ನು ಕೊಯ್ಲು ಮಾಡಬೇಕೆಂದು ಹಂಬಲಿಸುತ್ತಿದ್ದರೆ ಮಳೆ ನಿತ್ಯ ಸುರಿಯುತ್ತಿರುವುದರಿಂದ ರೈತರ ಆಸೆಗೆ ತಣ್ಣೀರೆರಚುತ್ತಿದೆ. ಕಿತ್ತು ಹಾಕಿರುವ ಈರುಳ್ಳಿ ಬೆಳೆ ಸಹ ನೀರಲ್ಲಿ ನಿಂತು ಕೊಳೆಯುತ್ತಿದೆ. ಮನ್ನಿಕಟ್ಟಿ ಕಿರಸೂರ ಭಗವತಿ ಹಳ್ಳೂರು ಬೆನಕಟ್ಟಿ ಶಿರೂರ ಗ್ರಾಮಗಳ ರೈತರು ಈ ಬಾರಿ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದು ಒಳ್ಳೆಯ ಬೆಲೆ ಸಿಗುತ್ತಿರುವುದಕ್ಕೆ ಸಂತಸಪಟ್ಟಿದ್ದರು. ಆದರೆ ಮಳೆ ರೈತರ ಸಂತಸಕ್ಕೆ ಬ್ರೆಕ್ ಹಾಕಿ ಆತಂಕ ಸೃಷ್ಠಿಸಿದೆ. ಸಧ್ಯಕ್ಕೆ ಮಳೆ ನಿಲ್ಲಬೇಕೆನ್ನುವ ಪ್ರಾರ್ಥನೆ ರೈತರದ್ದಾಗಿದೆ. ಇನ್ನಷ್ಟು ಆತಂಕ: ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಅ.23 ರವರೆಗೂ ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಿದ್ದು ಇದು ರೈತರನ್ನು ಇನ್ನಷ್ಟು ಆತಂಕಗೊಳಿಸಿದೆ. ಹವಾಮಾನ ಇಲಾಖೆಯು ಅ.19 20 ರಂದು 10 ಮಿ.ಮೀ. ಮಳೆಯಾಗುವ ಮುನ್ಸೂಚನೆ ನೀಡಿದೆ. ನಂತರದ ಮೂರು ದಿನ 8 ಮಿ.ಮೀ. ಮಳೆಯಾಗುವ ನಿರೀಕ್ಷೆ ಇರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುವ ಲಕ್ಷಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT