ಬೀದರ್: ಪರಿಶಿಷ್ಟ ಜಾತಿಯವರು ಹಾಗೂ ಲಿಂಗಾಯತರ ನಡುವಿನ ಘರ್ಷಣೆಯಿಂದ ಉದ್ವಿಗ್ನಗೊಂಡಿರುವ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮಕ್ಕೆ ಹಿರಿಯ ಅಧಿಕಾರಿಗಳು ಬುಧವಾರ ಭೇಟಿ ನೀಡಿ, ಶಾಂತಿ ಸಭೆ ನಡೆಸಿದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪರಿಶಿಷ್ಟರು ಹಾಗೂ ಲಿಂಗಾಯತ ಸಮಾಜದ ಮುಖಂಡರ ಪ್ರತ್ಯೇಕ ಸಭೆಗಳನ್ನು ನಡೆಸಿದರು. ಆನಂತರ ಎರಡೂ ಕಡೆಯವರನ್ನು ಸೇರಿಸಿ ಒಂದೇ ಸಭೆ ನಡೆಸಿದರು.
.ಚಳಕಾಪುರ | ಲಿಂಗಾಯತರು–ಪರಿಶಿಷ್ಟರ ನಡುವೆ ಗಲಾಟೆ: ಶಾಂತಿ ಸ್ಥಾಪನೆಗೆ ಖಂಡ್ರೆ ಮನವಿ.
‘ಘಟನೆಗೆ ಕಾರಣರಾದವರ ವಿರುದ್ಧವಷ್ಟೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ಮುಗ್ಧರು,ಅಮಾಯಕರಿಗೆ ವಿನಾಕಾರಣ ತೊಂದರೆ ಕೊಡುವುದಿಲ್ಲ. ಗ್ರಾಮದಲ್ಲಿ ಶಾಂತಿ ಸ್ಥಾಪನೆಗೆ ಎಲ್ಲರೂ ಸಹಕಾರ ಕೊಡಬೇಕು’ ಎಂದು ಮನವಿ ಮಾಡಿದರು.

ನ. 3ರಂದು ಹನುಮಾನ ದೇವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪರಿಶಿಷ್ಟರು ಹಾಗೂ ಲಿಂಗಾಯತರ ನಡುವೆ ಘರ್ಷಣೆ ನಡೆದಿತ್ತು. ಎರಡೂ ಕಡೆಯವರು ಠಾಣೆಗೆ ದೂರು–ಪ್ರತಿ ದೂರು ಕೊಟ್ಟಿದ್ದಾರೆ. 70ಕ್ಕೂ ಅಧಿಕ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕರ್ತವ್ಯಲೋಪಕ್ಕಾಗಿ ಪಿಎಸ್ಐ ಹಾಗೂ ಇಬ್ಬರು ಕಾನ್ಸ್ಟೆಬಲ್ಗಳನ್ನು ಮಂಗಳವಾರ ಕೆಲಸದಿಂದ ಅಮಾನತುಗೊಳಿಸಲಾಗಿತ್ತು.
.ಬೀದರ್ | ಬೈಕ್ಗೆ ಸಾರಿಗೆ ಬಸ್ ಡಿಕ್ಕಿ: ಒಂದೇ ಕುಟುಂಬದ ನಾಲ್ವರ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.