ಹಿರಿಯೂರು: ತಾಲ್ಲೂಕಿನಲ್ಲಿರುವ ವಾಣಿವಿಲಾಸ ಜಲಾಶಯಕ್ಕೆ ಒಳಹರಿವು ಆರಂಭವಾಗಿದ್ದು, ಸೋಮವಾರ ವೇದಾವತಿ ನದಿಯ ಮೂಲಕ ಜಲಾಶಯಕ್ಕೆ 974 ಕ್ಯುಸೆಕ್ ನೀರು ಹರಿದುಬರುತ್ತಿದೆ.

ಪ್ರಸ್ತುತ ಜಲಾಶಯದ ನೀರಿನ ಮಟ್ಟ 113.50 ಅಡಿ ಇದ್ದು (ಗರಿಷ್ಠ 130 ಅಡಿ), ಜಲಾಶಯಕ್ಕೆ ಇನ್ನೂ ಅಧಿಕ ನೀರು ಹರಿದು ಬರುವ ನಿರೀಕ್ಷೆ ಇದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಆ ಭಾಗದ ಕೆರೆಗಳು ತುಂಬಿ ಜಲಾಶಯದತ್ತ ನೀರು ಹರಿದು ಬರುತ್ತಿದೆ.

ಭದ್ರಾ ಜಲಾಶಯವೂ ತುಂಬುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ನೀರನ್ನು ವಾಣಿವಿಲಾಸ ಜಲಾಶಯಕ್ಕೆ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವೇದಾವತಿ ನದಿಯ ಉಗಮ ಸ್ಥಾನ ವಾಣಿವಿಲಾಸ ಜಲಾಶಯದಿಂದ 104 ಕಿ.ಮೀ ದೂರದಲ್ಲಿದ್ದು, ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಉದ್ಭವಿಸುತ್ತದೆ. ತರೀಕೆರೆ ಹಾಗೂ ಬೇಲೂರು ತಾಲ್ಲೂಕಿನ ಹಳ್ಳಗಳು ಈ ನದಿಗೆ ಸೇರುತ್ತವೆ. ಮದಗದ ಕೆರೆ ತುಂಬಿದ ನಂತರ ಇದು ನದಿಯ ಸ್ವರೂಪ ಪಡೆಯುತ್ತದೆ.

ಕಾಫಿನಾಡಿನಲ್ಲಿ 55 ಕಿ.ಮೀ ಹರಿದ ನಂತರ ಹೊಸದುರ್ಗ ತಾಲ್ಲೂಕಿನ ಭಾಗಶೆಟ್ಟಿ ಹಳ್ಳಿಯ ಹತ್ತಿರ ಚಿತ್ರದುರ್ಗ ಜಿಲ್ಲೆ ಪ್ರವೇಶಿಸುತ್ತದೆ. ಕಡೂರು ಮೂಲಕ ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮರು ತಾಲ್ಲೂಕುಗಳನ್ನು ಹಾಯ್ದು ಬಳ್ಳಾರಿ ಜಿಲ್ಲೆಯಲ್ಲಿ ತುಂಗಭದ್ರಾ ನದಿಯನ್ನು ಸೇರಿ ಮುಂದೆ ಸಾಗುತ್ತದೆ.

ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1898ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ತಾಲ್ಲೂಕಿನ ಮಾರಿಕಣಿವೆ ಬಳಿ ಅಣೆಕಟ್ಟೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. ₹ 45 ಲಕ್ಷ ರೂಪಾಯಿ ವೆಚ್ಚದಲ್ಲಿ 1907ರ ವೇಳೆಗೆ ಜಲಾಶಯವನ್ನು ಲೋಕಾರ್ಪಣೆ ಮಾಡಿದರು. ವಾಣಿವಿಲಾಸ ಅಣೆಕಟ್ಟೆ ಜೀವಂತವಾಗಿ ಉಳಿಯಬೇಕೆಂದರೆ ಜಲಾಶಯದ ಮೇಲ್ಭಾಗದ ಅಚ್ಚುಕಟ್ಟು ಪ್ರದೇಶದಲ್ಲಿ ಯಾವುದೇ ಕೆರೆಕಟ್ಟೆ ನಿರ್ಮಿಸಬಾರದು ಎಂದು ಸರ್ ಎಂ. ವಿಶ್ವೇಶ್ವರಯ್ಯ ಅವರು ಸಲಹೆ ನೀಡಿದ್ದರು.

‘ಅಧಿಕಾರ ಹಿಡಿದವರು ಸರ್ ಎಂ.ವಿ ಅವರ ಸಲಹೆ ಪಾಲಿಸದ ಕಾರಣ ಜಲಾಶಯ ನಿರ್ಮಾಣಗೊಂಡ 114 ವರ್ಷಗಳಲ್ಲಿ ಸರಾಸರಿ ಹತ್ತು ವರ್ಷಕ್ಕೆ ಒಮ್ಮೆ ಬರಿದಾಗಿದೆ. 1933ರಲ್ಲಿ ಒಮ್ಮೆ ಭರ್ತಿಯಾಗಿದ್ದು, 89 ವರ್ಷದ ನಂತರ 2022ರಲ್ಲಿ ಎರಡನೇ ಬಾರಿ ಜಲಾಶಯ ತುಂಬಿತ್ತು’ ಎನ್ನುತ್ತಾರೆ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ.

ಈ ಜಲಾಶಯದಿಂದ ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ, ಚಳ್ಳಕೆರೆ, ನಾಯಕನಹಟ್ಟಿ ಸಮೀಪದ ಡಿಆರ್ಡಿಒ ಯೋಜನೆಗೆ ನೀರು ಕೊಡಲಾಗುತ್ತಿದೆ. ಚಳ್ಳಕೆರೆ ತಾಲ್ಲೂಕಿನ ಹಳ್ಳಿಗಳು ಹಾಗೂ ಮೊಳಕಾಲ್ಮರು ಕ್ಷೇತ್ರದ ಹಳ್ಳಿಗಳ ಕುಡಿಯುವ ನೀರಿಗೆ, ಐಮಂಗಲ ಹೋಬಳಿಯ ಹಳ್ಳಿಗಳ ಜನರಿಗೆ ಕುಡಿಯಲು ಬಳಕೆಯಾಗುತ್ತದೆ.

ಅಚ್ಚುಕಟ್ಟು ಪ್ರದೇಶ ಬೆಳೆಗಳು ಒಳಗೊಂಡಂತೆ ಒಟ್ಟಾರೆ ಬೇಡಿಕೆ 7– 8 ಟಿಎಂಸಿ ಅಡಿ ನೀರು ದೊರೆಯುತ್ತದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಕೇವಲ 2 ಟಿಎಂಸಿ ಅಡಿ ನೀರನ್ನು ವಾಣಿವಿಲಾಸಕ್ಕೆ ಮೀಸಲಿಡಲಾಗಿದೆ. ಜಲಾಶಯವನ್ನು ನಂಬಿರುವ ಎಲ್ಲರನ್ನೂ ತೃಪ್ತಿಪಡಿಸಲು ಭದ್ರಾ ಅಥವಾ ಎತ್ತಿನಹೊಳೆ ಯೋಜನೆಯಿಂದ ಕನಿಷ್ಠ 10 ಟಿಎಂಸಿ ಅಡಿ ನೀರು ಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಭದ್ರಾ ನೀರು ಹರಿಸಲು ಆಗ್ರಹ

3–4 ದಿನದಲ್ಲಿ ತರೀಕೆರೆ ಸಮೀಪದ ಭದ್ರಾ ಜಲಾಶಯ ಭರ್ತಿಯಾಗಲಿದೆ. ತುಂಗಭದ್ರಾ ಜಲಾಶಯ ಈಗಾಗಲೇ ಭರ್ತಿಯಾಗಿದ್ದು ಭದ್ರೆಯ ನೀರನ್ನು ಪಂಪ್ ಮಾಡುವ ಮೂಲಕ ವಾಣಿವಿಲಾಸಕ್ಕೆ ಹರಿಸಲು ಇದು ಸಕಾಲ. ನಿತ್ಯ 2–3 ಸಾವಿರ ಕ್ಯುಸೆಕ್ ನೀರು ಹರಿಸಿದರೆ ಕೇವಲ ಒಂದೂವರೆ ತಿಂಗಳಲ್ಲಿ ಜಲಾಶಯ ತುಂಬಿ ಕೋಡಿ ಬೀಳುತ್ತದೆ. ಜಿಲ್ಲಾಉಸ್ತುವಾರಿ ಸಚಿವರು ಜಿಲ್ಲೆಯ ಶಾಸಕರು ಸರ್ಕಾರದ ಮೇಲೆ ಒತ್ತಡ ತರುವ ಇಚ್ಛಾಶಕ್ತಿ ಪ್ರದರ್ಶಿಸಬೇಕು ರೈತರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.