ದಾವಣಗೆರೆ: ಕಳೆದ ವರ್ಷ ಅನಾವೃಷ್ಟಿಯಿಂದ ನಷ್ಟ ಅನುಭವಿಸಿದ್ದ ಜಿಲ್ಲೆಯ ರೈತರು, ಇದೀಗ ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯ ಭೀತಿಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು, ಅತೀವ ತೇವಾಂಶದಿಂದ ಮೆಕ್ಕೆಜೋಳ, ಹತ್ತಿ, ಜೋಳದ ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಜಿಲ್ಲೆಯಲ್ಲಿ ಮೂರು ವಾರಗಳಿಂದ ಬಿಟ್ಟೂ ಬಿಡದೇ ಸತತ ಮಳೆ ಸುರಿಯುತ್ತಿದೆ. ಬಿಸಿಲೇ ಇಲ್ಲದ್ದರಿಂದ ಬೆಳೆಗಳು ಕೊಳೆಯಲಾರಂಭಿಸಿವೆ. ಮಳೆ ಇದೇ ರೀತಿ ಮುಂದುವರಿದರೆ ಈ ವರ್ಷವೂ ಸಂಕಷ್ಟ ತಪ್ಪಿದ್ದಲ್ಲ ಎಂಬ ಆತಂಕ ರೈತರಲ್ಲಿ ಆವರಿಸಿದೆ.

ಜಿಲ್ಲೆಯಲ್ಲಿ ಜೂನ್ 1ರಿಂದ ಜುಲೈ 26ರ ವರೆಗೆ 274 ಮಿ.ಮೀ ವಾಡಿಕೆ ಮಳೆ ನಿರೀಕ್ಷಿಸಲಾಗಿತ್ತು. ಈ ಬಾರಿಯ ಮುಂಗಾರು ಚುರುಕು ಪಡೆದಿದ್ದರಿಂದ 396 ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ವಾಡಿಕೆಗಿಂತ ಅಧಿಕ ಮಳೆಯಾಗಿದೆ.

ಜೋರು ಮಳೆ ಸುರಿದು, ಆಗಾಗ ಬಿಡುವು ನೀಡಿದ್ದರೆ, ಬೆಳೆಗಳಿಗೆ ಹೆಚ್ಚಿನ ಹಾನಿಯಾಗುತ್ತಿರಲಿಲ್ಲ. ಆದರೆ, ಒಂದು ದಿನವೂ ಬಿಡುವು ನೀಡದೇ ಮಳೆ ಸುರಿಯುತ್ತಿರುವುದರಿಂದ ಬೆಳೆಗಳು ಹಾಳಾಗುತ್ತಿವೆ.

‘ಜೂನ್ ಆರಂಭದಲ್ಲಿ ಬಿತ್ತಿದ ಬೆಳೆಗಳು ತೇವಾಂಶವನ್ನು ಸಹಿಸಿಕೊಳ್ಳು ತ್ತಿವೆ. ತಡವಾಗಿ ಬಿತ್ತನೆ ನಡೆಸಿದ ಬೆಳೆಗಳು ಬೇರು ಗಟ್ಟಿಗೊಳ್ಳದೇ ಕೊಳೆಯಲಾರಂಭಿ ಸಿವೆ. ಅದರಲ್ಲೂ ಮೆಕ್ಕೆಜೋಳ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ತಗ್ಗುಪ್ರದೇಶಗಳಲ್ಲಿರುವ ಜಮೀನುಗಳಲ್ಲಿನ ಬೆಳೆಯು ಪೂರ್ತಿ ಹಾಳಾಗುವ ಭೀತಿ ಉಂಟಾಗಿದೆ’ ಎಂದು ಚನ್ನಗಿರಿ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ರೈತ ಮುನಿ ಎಸ್.ಎಂ. ಆತಂಕ
ವ್ಯಕ್ತಪಡಿಸಿದರು.

‘ನಮ್ಮ ತಾಲ್ಲೂಕಿನಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆ ಬೆಳೆದಿದ್ದೇವೆ. ನಿರಂತರ ಮಳೆಯಿಂದ ಹತ್ತಿ ಬೆಳೆಗೆ ಹೆಚ್ಚಿನ ಹಾನಿಯುಂಟಾಗಿದೆ. ಹತ್ತಿ ಗಿಡದಲ್ಲಿ ಕಾಯಿ ಬಿಡುತ್ತಿದ್ದು, ಮಳೆ ನೀರು ಸೇರಿಕೊಳ್ಳುತ್ತಿರುವುದರಿಂದ ಕೊಳೆಯುತ್ತಿವೆ. ಜಮೀನುಗಳಲ್ಲಿ ನೀರು ನಿಂತಿರುವುದರಿಂದಲೂ ಗಿಡಗಳು ಸಾಯುತ್ತಿವೆ’ ಎಂದು ಜಗಳೂರು ತಾಲ್ಲೂಕಿನ ಅಸಗೋಡು ಗ್ರಾಮದ ರೈತ ಕೆ.ಬಿ.ರವಿ ಸಂಕಷ್ಟ ತೋಡಿಕೊಂಡರು.

‘ಮೆಕ್ಕೆಜೋಳ ಮಾತ್ರವಲ್ಲದೇ ಸೊಪ್ಪು, ತರಕಾರಿ ಬೆಳೆಗೂ ಮಳೆಯಿಂದ ಹೆಚ್ಚಿನ ಹಾನಿ ಸಂಭವಿಸಿದೆ. ತೇವಾಂಶದಿಂದಾಗಿ ಬೇರುಗಳು ಸದೃಢವಾಗಿಲ್ಲ. ಬೆಳೆಗಳಿಗೆ ರಸಗೊಬ್ಬರ ನೀಡಲಾಗುತ್ತಿಲ್ಲ. ರಸಗೊಬ್ಬರ ಹಾಕಿದರೂ, ಸಹಿಸಿಕೊಳ್ಳುವ ಶಕ್ತಿ ಗಿಡಗಳಿಗಿಲ್ಲ. ಬೆಳೆಗಳು ಉಳಿಯಲು ಬಿಸಿಲಿನ ವಾತಾವರಣ ತುರ್ತು ಅವಶ್ಯವಾಗಿದೆ’ ಎಂದು ನ್ಯಾಮತಿ ತಾಲ್ಲೂಕಿನ ರೈತ ಜಿ.ನಿಜಲಿಂಗಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.