ಕೃಷಿ ಮೇಳದಲ್ಲಿ ಸೋಮವಾರ ಪಾಲ್ಗೊಂಡಿದ್ದ ಜನಸ್ತೋಮ ಪ್ರಜಾವಾಣಿ ಚಿತ್ರ
ಕೃಷಿ ಮೇಳದ ಮಳಿಗೆಯೊಂದರಲ್ಲಿ ರೈತರು ಯಂತ್ರೋಪಕಣ ಖರೀದಿಯಲ್ಲಿ ತೊಡಗಿರುವುದು ಪ್ರಜಾವಾಣಿ ಚಿತ್ರ
ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ಜನರು ಎತ್ತುಗಳನ್ನು ವೀಕ್ಷಿಸುತ್ತಿರುವುದು ಪ್ರಜಾವಾಣಿ ಚಿತ್ರ
ಕೃಷಿ ಮೇಳದ ಮಳಿಗೆಯೊಂದರಲ್ಲಿ ರೈತರು ಕೃಷಿ ಉಪಕರಣ ವೀಕ್ಷಿಸುತ್ತಿರುವುದು
ಕೃಷಿ ವಿಶ್ವವಿದ್ಯಾಲಯದ ಸಂಶೋಧನೆಗಳನ್ನು ವಾಣಿಜ್ಯೀಕರಣಗೊಳಿಸಿ ಅದನ್ನು ರೈತರಿಗೆ ತಲುಪಿಸಬೇಕು. ರೈತರ ಲಾಭ ದ್ವಿಗುಣವಾಗಬೇಕು
ರವಿಕುಮಾರ ಮಾಳಿಗೇರ ಸದಸ್ಯ ವ್ಯವಸ್ಥಾಪನಾ ಮಂಡಳಿ ಕೃಷಿ ವಿಶ್ವವಿದ್ಯಾಲಯ‘ಉತ್ಪನ್ನದ ಮೌಲ್ಯವರ್ಧನೆಯೇ ದ್ವಿತೀಯ ಕೃಷಿ’
‘ಬೆಳೆ ಕಟಾವು ಮಾಡಿ ಒಕ್ಕಣೆ ಮಾಡಿ ಉತ್ಪನ್ನ ತಯಾರಿಸುವುದು ಪ್ರಥಮ ಕೃಷಿ ಉತ್ಪನ್ನದ ಮೌಲ್ಯವರ್ಧನೆ ದ್ವಿತೀಯ ಕೃಷಿ. ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡಿದರೆ ಕಡಿಮೆ ಆದಾಯ ಸಿಗುತ್ತದೆ. ಉತ್ಪನ್ನದ ಮೌಲ್ಯ ವರ್ಧನೆ ಮಾಡಿ ಮಾರಾಟ ಮಾಡಿದರೆ ಹೆಚ್ಚು ಆದಾಯ ಸಿಗುತ್ತದೆ’ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಹನುಮಂತಪ್ಪ ತಿಳಿಸಿದರು. ‘ತರಕಾರಿ ಮತ್ತು ಹಣ್ಣುಗಳನ್ನು ಮೌಲ್ಯವರ್ಧನೆ ಮಾಡಬೇಕು. ಹಾಲು ಮಾರಾಟ ಮಾಡಿದರೆ ಲಾಭ ಕಡಿಮೆ. ಹಾಲಿನಿಂದ ತುಪ್ಪ ಫೇಡಾ ತಯಾರಿಸಿ ಮಾರಾಟ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು’ ಎಂದು ತಿಳಿಸಿದರು. ಮೌಲ್ಯವರ್ಧನೆಗೆ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕು. ನವೋದ್ಯಮ (ಸ್ಟಾರ್ಟ್‌ಅಪ್) ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು. ನಿಮ್ಮದೇ ಬ್ರ್ಯಾಂಡ್ ಸೃಷ್ಟಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ಮೇಳ; ಸಮಾರೋಪ ಇಂದು
ಸೆ. 24ರಂದು ಬೆಳಿಗ್ಗೆ 10.30ಕ್ಕೆ ಕೃಷಿ ಮೇಳದ ವೇದಿಕೆಯಲ್ಲಿ ‘ಎಣ್ಣೆಕಾಳು ಹಾಗೂ ದ್ವಿದಳ ಧಾನ್ಯ ಉತ್ಪಾದನೆ ಹೆಚ್ಚಿಸಲು ಅಗತ್ಯ ಕೃಷಿ ತಾಂತ್ರಿಕತೆಗಳು’ ಗೋಷ್ಠಿ 11.30ಕ್ಕೆ ಕನ್ನಡ ಕೃಷಿ ಗೋಷ್ಠಿ ಮಧ್ಯಾಹ್ನ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.