ಕಲಬುರಗಿ: ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಗೆ ಜನರು ಹೈರಾಣಾಗಿದ್ದಾರೆ. ನಾಲ್ಕು ಹನಿಗಳು ಮಳೆ ನೀರು ಬೀಳುತ್ತಲೇ ಅನಿಯಮಿತ ವಿದ್ಯುತ್ ಕಡಿತ ಶುರುವಾಗಿ ರಾತ್ರಿ ‘ಕತ್ತಲೆ ಭಾಗ್ಯ’ ಆವರಿಸಿಕೊಳ್ಳುತ್ತದೆ.

ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ (ಜೆಸ್ಕಾಂ) ಕೇಂದ್ರ ಕಚೇರಿ ವ್ಯಾಪ್ತಿಯಲ್ಲೇ ಬೇಕಾಬಿಟ್ಟಿಯಾಗಿ ವಿದ್ಯುತ್ ಕಡಿತವಾಗುತ್ತಿರುವ ಬಗ್ಗೆ ದೂರುಗಳು ಬಂದರೂ ಎಂಜಿನಿಯರ್ಗಳಿಂದ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ. ಗುರುವಾರ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ಸಂದರ್ಭದಲೇ ಕೆಲ ಕಾಲ ವಿದ್ಯುತ್ ಕಡಿತಗೊಂಡಿದ್ದು, ಜೆಸ್ಕಾಂ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಮಂಗಳವಾರ ಸಂಜೆ ಗುಡುಗು ಮಿಂಚು ಸಹಿತ ಜೋರು ಮಳೆಯಾಯಿತು. ಸರ್ದಾರ್ ವಲ್ಲಾಭಭಾಯಿ ಪಟೇಲ್ ವೃತ್ತ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಎರಡ್ಮೂರು ಗಂಟೆಗಳ ಕಾಲ ವಿದ್ಯುತ್ ಇರಲಿಲ್ಲ. ರಾತ್ರಿ 10ರ ನಂತರ ವಿದ್ಯುತ್ ಬಂತಾದರೂ 10–15 ನಿಮಿಷಕ್ಕೊಮ್ಮೆ ತೆಗೆಯಲಾಗುತ್ತಿತ್ತು. ಜೆಸ್ಕಾಂ ಕೇಂದ್ರ ಕಚೇರಿ ಪ್ರದೇಶದಲ್ಲೇ ಇಂತಹ ಪರಿಸ್ಥಿತಿ ಇದ್ದರೆ ತಾಲ್ಲೂಕು, ಗ್ರಾಮೀಣ ಭಾಗದ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ.

‘ಕೆಲವೆಡೆ ದುರಸ್ತಿ ನೆಪದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದರೆ, ಮತ್ತೆ ಕೆಲವೆಡೆ ಮಳೆ, ಗಾಳಿ ಇಲ್ಲದಿದ್ದರೂ ಪದೇ ಪದೇ ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ಯಾವಾಗ ವಿದ್ಯುತ್ ಬರುತ್ತದೆಯೋ, ಯಾವಾಗ ಕಡಿತ ಮಾಡುತ್ತಾರೋ ಎಂದು ಹೇಳುವುದೇ ಕಷ್ಟವಾಗಿದೆ. ಕೆಲವೊಮ್ಮೆ ಗಂಟೆಗೊಮ್ಮೆ, ಅರ್ಧಗಂಟೆಗೊಮ್ಮೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ವಿದ್ಯುತ್ಗಾಗಿ ಕಾದು– ಕಾದು ಸುಸ್ತಾಗಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲು ಆಗುತ್ತಿಲ್ಲ’ ಎನ್ನುತ್ತಾರೆ ನಗರದ ನಿವಾಸಿ ಅನಿಲ್ ಬಿರಾದಾರ್.

ಶಾಲೆ– ಕಾಲೇಜುಗಳು ಈಗಷ್ಟೇ ಆರಂಭವಾಗಿವೆ. ಮಕ್ಕಳಿಗೆ ಸಕಾಲಕ್ಕೆ ಸರಿಯಾಗಿ ಉಪಾಹಾರ, ಊಟ ತಯಾರಿಸಲು ಆಗುತ್ತಿಲ್ಲ. ಮನೆಯಲ್ಲಿರುವ ಚಿಕ್ಕ ಮಕ್ಕಳು, ಬಾಣಂತಿಯರು ಮತ್ತು ವೃದ್ಧರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಪದೇ ಪದೇ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ಬೇಸತ್ತ ಜನರು ಜೆಸ್ಕಾಂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಲೋಡ್ ಶೆಡ್ಡಿಂಗ್ನಿಂದ ಬೇಸತ್ತು ಯುಪಿಎಸ್ ಮೊರೆ ಹೋಗುತ್ತಿದ್ದಾರೆ.

ಅನಿಯಮಿತ ವಿದ್ಯುತ್ ಕಡಿತ ವಾಣಿಜ್ಯ ಚಟುವಟಿಕಗಳ ಕತ್ತು ಹಿಸುಕುತ್ತಿದೆ. ಝರಾಕ್ಸ್, ಕಂಪ್ಯೂಟರ್ ಸೆಂಟರ್, ಹೋಟೆಲ್, ಎಲೆಕ್ಟ್ರಾನಿಕ್ ಉಪಕರಣಗಳ ದುರಸ್ತಿ ಮಳಿಗೆಗಳ ವರ್ತಕರು ಹಾಗೂ ಕಲ್ಲು ಪಾಲಿಶಿಂಗ್ ಸೇರಿದಂತೆ ವಿದ್ಯುತ್ ಅವಲಂಬಿತ ಉದ್ಯಮಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ವರ್ತಕರು ಎಲೆಕ್ಟ್ರಾನಿಕ್ ತೂಕದ ಯಂತ್ರಗಳು ಬಳಸುತ್ತಿರುವ ಕಾರಣ ಕೆಲಸದಲ್ಲಿ ವಿಳಂಬವಾಗುತ್ತಿದೆ.

ರೈತರು ಸಹ ತೋಟಗಾರಿಕೆ ಬೆಳೆಗಳಿಗೆ ಕೊಳವೆಬಾವಿಗಳಿಂದ ನೀರುಣಿಸಲು ಆಗುತ್ತಿಲ್ಲ. ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ. ಕೂಡಲೇ ಜೆಸ್ಕಾಂ ಅಧಿಕಾರಿಗಳು ಅನಿಯಮಿತ ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

‘ಸಹಾಯವಾಣಿ ಕರೆ ಸ್ವೀಕರಿಸಲು ಕಟ್ಟುನಿಟ್ಟಿನ ಆದೇಶ’

‘ಮಳೆಯ ಕಾರಣಕ್ಕೆ ಲೋಡ್ ಹೆಚ್ಚಾಗಿ ವಿದ್ಯುತ್ ಪರಿವರ್ತಕಗಳಲ್ಲಿ ಫ್ಲ್ಯಾಶ್ಔಟ್ ಆಗುತ್ತಿದೆ. ಕೆಪಿಟಿಸಿಎಲ್ ಅವರೊಂದಿಗೆ ಕೈಜೋಡಿಸಿ ಆದ್ಯತೆ ಕೊಟ್ಟು ಅವುಗಳ ದುರಸ್ತಿ ಮಾಡುತ್ತಿದ್ದೇವೆ’ ಎಂದು ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮೀಣ ಭಾಗಕ್ಕಿಂತ ನಗರದಲ್ಲಿ ಫ್ಲ್ಯಾಶ್ಔಟ್ ಹೆಚ್ಚಾಗುತ್ತಿದೆ. ನಗರದ ಕೆಲವು ಹಳೆ ಬಡಾವಣೆಗಳಲ್ಲಿ ಒಂದಿಷ್ಟು ಮಾರ್ಪಾಡುಗಳನ್ನು ಮಾಡಬೇಕಿದೆ. ಗಾಳಿ ಮಳೆಯಿಂದ ವಿದ್ಯುತ್ ಕಂಬ ಟಿ.ಸಿ.ಗಳ ದುರಸ್ತಿಗೆ ಹೆಚ್ಚುವರಿಯಾಗಿ 20 ಸಿಬ್ಬಂದಿಯನ್ನು ನಗರದಲ್ಲಿ ನಿಯೋಜನೆ ಮಾಡಲಾಗಿದೆ. ದೂರು ಬಂದಲ್ಲಿ ತಕ್ಷಣವೇ ಸ್ಪಂದಿಸುವಂತೆ ಸೂಚನೆಯೂ ನೀಡಲಾಗಿದೆ’ ಎಂದರು.

‘ಸಹಾಯವಾಣಿಗೆ ಬರುವ ಕರೆಗಳನ್ನು ಸ್ವೀಕರಿಸುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ಕೊಟ್ಟಿದ್ದೇನೆ. ಸಾರ್ವಜನಿಕರಿಂದ ನಿರಂತರವಾಗಿ ಕರೆಗಳು ಬರುವುದರಿಂದ ಕೆಲವೊಮ್ಮೆ ಸ್ವೀಕರಿಸಲು ಆಗುವುದಿಲ್ಲ. ಕೇಂದ್ರ ಸರ್ಕಾರದ ಉರ್ಜ ಆ್ಯಪ್ನ ಸರ್ವರ್ ಡೌನ್ ಆಗಿದೆ. ಸರಿಯಾಗಿ ಕಾರ್ಯನಿರ್ವಹಿಸಿದ್ದರೆ ಯಾವ ಪ್ರದೇಶದಲ್ಲಿ ಸಮಸ್ಯೆಯಾಗಿದೆ ಎಂಬುದು ನೇರವಾಗಿ ನಮ್ಮ ಗಮನಕ್ಕೆ ಬರುತ್ತಿತ್ತು. ಮಳೆಗಾಲ ಎದುರಿಸಲು ಅಗತ್ಯ ತಯಾರಿ ಮಾಡಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಜೆಸ್ಕಾಂಗೆ ಉದ್ಯಮಿಗಳಿಂದ ಪ್ರತಿಭಟನೆಯ ಎಚ್ಚರಿಕೆ

‘ಪದೇ ಪದೇ ವಿದ್ಯುತ್ ಕಡಿತ ಮಾಡುವುದರಿಂದ ಉದ್ಯಮಗಳ ವಹಿವಾಟು ಹಾನಿಯಾಗುತ್ತಿದೆ. ಯುಪಿಎಸ್ ಬ್ಯಾಟರಿಗಳ ಪವರ್ ಸಾಕಾಗುತ್ತಿಲ್ಲ. ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ. ಲೈನ್ ಮ್ಯಾನ್ಗಳಿಗೆ ಕರೆ ಮಾಡಿದರೂ ದುರಸ್ತಿಗೆ ಬರುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ ಎಚ್ಚರಿಸಿದರು. ‘ಮಂಗಳವಾರ ಸಂಜೆ ಮಳೆಯಾಗಿದ್ದರಿಂದ ರಾತ್ರಿ 8ಕ್ಕೆ ಹೋದ ಕರೆಂಟ್ ತಡರಾತ್ರಿಯಾದರೂ ಬರಲಿಲ್ಲ. ಬುಧವಾರ ಇಡೀ ದಿನ ಇರಲಿಲ್ಲ. ಗುರುವಾರ ಬೆಳಿಗ್ಗೆ ಬಂದು ಎರಡ್ಮೂರು ತಾಸು ಇತ್ತು. ಆ ಬಳಿಕ ಮತ್ತೆ ಹೋಗಿ ಸಂಜೆ ಬಂದಿದೆ. ಕರೆಂಟ್ನ ಕಣ್ಣಾಮುಚ್ಚಾಲೆಯಾಟ ಸಾಕಾಗಿ ಹೋಗಿದೆ. ಜೆಸ್ಕಾಂಗೆ ಚುರುಕು ಮುಟ್ಟಿಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.