ಮಡಿಕೇರಿ: ಕೋಟ್ಯಂತರ ಮಂದಿಯ ದಾಹ ಹಿಂಗಿಸುವ, ಲಕ್ಷಾಂತರ ಮಂದಿಯ ಬದುಕಿಗೆ ಆಧಾರವಾಗಿರುವ ಕಾವೇರಿ ನದಿಯ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಲ್ಲಿನ ಭಾಗಮಂಡಲದ ಸಮೀಪದ ತಲಕಾವೇರಿಯಲ್ಲಿ ಭರದ ಸಿದ್ಧತೆಗಳು ಸೋಮವಾರ ನಡೆದಿದ್ದು, ಸಹಸ್ರಾರು ಮಂದಿ ಆಗಮಿಸುವ ನಿರೀಕ್ಷೆ ಇದೆ.

‘ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋಧ್ಬವ’ ಎಂದೇ ಕರೆಯಲಾಗುವ ಈ ಧಾರ್ಮಿಕ ವಿದ್ಯಮಾನವು ಸೋಮವಾರ ಸಂಜೆ 7.21ಕ್ಕೆ ಮೇಷ ಲಗ್ನದಲ್ಲಿ ನಡೆಯಲಿದೆ.ಜಿಲ್ಲಾಡಳಿತ ಈಗಾಗಲೇ ತನ್ನ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

ತಲಕಾವೇರಿಯಲ್ಲಿರುವ ಅಗಸ್ತ್ಯೇಶ್ವರ, ಮಹಾಗಣಪತಿ ದೇಗುಲಗಳು ಹೂಗಳಿಂದ ಸಿಂಗಾರಗೊಂಡಿವೆ. ಕಬ್ಬಿಣದ ಬ್ಯಾರಿಕೇಡ್ಗಳನ್ನು ಹಾಕಿ ಭಕ್ತ ರನ್ನು ನಿಯಂತ್ರಿಸಲು ಪೊಲೀಸರೂ ಸನ್ನದ್ಧರಾಗಿದ್ದಾರೆ. ವಿವಿಧ ಬಗೆಯ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.