ಕೊಡಗು ಜಿಲ್ಲೆಯಲ್ಲಿ ಸುರಿಯುವ ಮುಂಗಾರು ನೂರಾರು ಜಲಪಾತಗಳನ್ನು ಸೃಷ್ಟಿಸಿ, ನಿಸರ್ಗದ ಅಂದವನ್ನು ನೂರ್ಮಡಿಗೊಳುತ್ತದೆ. ರುದ್ರ ರಮಣೀಯವಾದ ಜಲಪಾತಗಳು ಒಂದು ಕಡೆಯಾದರೆ, ನಿರಮ್ಮಳವಾಗಿ ಶಾಂತಚಿತ್ತದಿಂದ ಹರಿಯುವ ಜಲಧಾರೆಗಳು ಮತ್ತೊಂದು ಕಡೆ. ಆದರೆ, ಅಬ್ಬಿ, ಕೋಟೆ ಅಬ್ಬಿ, ಇರ್ಪು ಎಂಬಂತ ಬೆರಳೆಣಿಕೆಯಷ್ಟು ಜಲಪಾತಗಳು ಮಾತ್ರವೇ ಪ್ರಸಿದ್ಧಿಯಾಗಿದ್ದು, ನೂರಾರು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಆದರೆ, ಎಲೆಮರೆ ಕಾಯಂತಿರುವ ಅನೇಕ ಜಲಪಾತಗಳ ಸೌಂದರ್ಯ ನಿಜಕ್ಕೂ ವರ್ಣನಾತೀತ. ಇಂತಹ ಹೆಚ್ಚು ಜನಪ್ರಿಯಗೊಳ್ಳದ ಜಲಪಾತಗಳ ಕುರಿತ ಸರಣಿ ಇಂದಿನಿಂದ ಆರಂಭವಾಗಲಿದೆ.

ನಾಪೋಕ್ಲು: ಧಾರಾಕಾರ ಮಳೆಯಿಂದ ಜಿಲ್ಲೆಯ ಹಲವು ಜಲಪಾತಗಳು ಮೈದುಂಬಿಕೊಂಡು ಧುಮುಕುತ್ತಿವೆ. ಕೆಲವು ಜನಪ್ರಿಯ ಜಲಪಾತಗಳ ನಡುವೆ ಅಪರೂಪದ ಜಲಧಾರೆಗಳು ಹಲವು. ಅನಾಮಧೇಯ ಜಲಪಾತಗಳು ಕಾಡಿನ ನಡುವೆ ಸೌಂದರ್ಯ ಸೂಸುತ್ತಿವೆ. ಅಂತಹ ಜಲಪಾತಗಳ ಪೈಕಿ ನೆಲಜಿ ಗ್ರಾಮದಲ್ಲಿರುವ ಪಾರೆಕಟ್ಟು ಜಲಪಾತವೂ ಒಂದು.’

ಕೆಲವು ದಿನಗಳಿಂದ ಸುರಿದ ಮಳೆಯಿಂದ ಮಲ್ಮ ಬೆಟ್ಟದಿಂದ ಹರಿದು ಬರುವ ಈ ಜಲಧಾರೆ ಗ್ರಾಮದ ಚೀಯಕಪೂವಂಡ ಕುಟುಂಬಸ್ಥರ ಜಾಗದಲ್ಲಿ ಸುಮಾರು 50 ಅಡಿ ಎತ್ತರದಿಂದ ಧುಮುಕುತ್ತಿದೆ. ಬಂಡೆಗಲ್ಲುಗಳ ಮೇಲೆ ಭೋರ್ಗರೆವ ಈ ಜಲಧಾರೆ ಮನಸೆಳೆಯುತ್ತಿದೆ. ಮಳೆಗಾಲದಲ್ಲಿ ಈ ಅಪೂರ್ವ ಜಲಧಾರೆಯ ಸೊಬಗು ವರ್ಣನಾತೀತ.

ಬೇಸಿಗೆಯಲ್ಲಿ ಜಲಧಾರೆ ಬತ್ತಿಹೋಗಿ ದೊಡ್ಡ ಬಂಡೆಗಲ್ಲು ಗೋಚರಿಸಿದರೆ, ಮಳೆಗಾಲ ಆರಂಭದಲ್ಲೇ ನಿಧಾನವಾಗಿ ಜಲಧಾರೆ ಇಳಿದು, ಬಳಿಕ ಮಳೆಯ ರಭಸ ಹೆಚ್ಚಾದಂತೆ ಭೋರ್ಗರೆಯುತ್ತದೆ. ಒಂದೆಡೆ ಬಂಡೆಗಲ್ಲಿನಿಂದ ಇಳಿವ ಶ್ವೇತವರ್ಣದ ಜಲಧಾರೆಯಾದರೆ ಮತ್ತೊಂದೆಡೆ ಬೀಸುಗಾಳಿಗೆ ದೂರದೂರಕೆ ಸಾಗಿ ಮೈಗೆ ಮುತ್ತುವ ಮಂಜಿನ ಹನಿಗಳು ವೀಕ್ಷಕರಿಗೆ ಮುದ ನೀಡುತ್ತವೆ.

ನೆಲಜಿ-ಕಕ್ಕಬ್ಬೆ ಮುಖ್ಯ ರಸ್ತೆಯಿಂದ ನೆಲಜಿ ಗ್ರಾಮದ ಬೆಟ್ಟಶ್ರೇಣಿಗಳತ್ತ ಹೆಜ್ಜೆ ಹಾಕಿದರೆ ಪಾರೆಕಟ್ಟು ಜಲಪಾತವನ್ನು ತಲುಪಬಹುದು .ಇದು ಖಾಸಗಿ ಸ್ಥಳದಲ್ಲಿರುವ ಜಲಪಾತವಾದುದರಿಂದ ಸ್ಥಳೀಯರಿಗಷ್ಟೇ ಜಲಪಾತ ಚಿರಪರಿಚಿತ. ಮಡಿಕೇರಿಯಿಂದ ನಾಪೋಕ್ಲು-ಭಾಗಮಂಡಲ ರಸ್ತೆಯಲ್ಲಿ 26 ಕಿ.ಮೀ ಸಾಗಿ ಬಳಿಕ ನೆಲಜಿ-ಕಕ್ಕಬ್ಬೆ ರಸ್ತೆಯಲ್ಲಿ ಈ ಜಲಪಾತದ ವೀಕ್ಷಣೆಗೆ ತೆರಳಬೇಕು. ಖಾಸಗಿ ವಾಹನದಲ್ಲಿ ತೆರಳಿದರೆ ಮಾತ್ರ ಪಾರೆಕಟ್ಟು ಜಲಪಾತ ವೀಕ್ಷಣೆಗೆ ಲಭ್ಯ.

50 ಅಡಿ ಎತ್ತರದಿಂದ ಧುಮುಕುವ ಜಲಧಾರೆ ನೆಲಜಿ ಗ್ರಾಮದಲ್ಲಿರುವ ಪಾರೆಕಟ್ಟು ಜಲಪಾತ ನೋಡುಗರ ಕಣ್ಣುಗಳಿಗೆ ಹಬ್ಬವನ್ನು ತರುವ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.