ನಾಪೋಕ್ಲು: ಕಾವೇರಿ ತೀರ್ಥೋದ್ಭವದ ಆಂಗವಾಗಿ ಕಾವೇರಿ ಮಾತೆಗೆ ತೊಡಿಸಲು ಚಿನ್ನಾಭರಣಗಳನ್ನು ಭಾಗಮಂಡಲ ದೇವಾಲಯದಿಂದ ಮಂಗಳವಾರ ಕೊಂಡೊಯ್ಯಲಾಯಿತು.

ಭಾಗಮಂಡಲದ ಭಗಂಡೇಶ್ವರ ದೇವಾಲಯದ ಆಡಳಿತಾಧಿಕಾರಿ ಚಂದ್ರಶೇಖರ್ ಅವರಿಂದ ತಕ್ಕರಾದ ಕೋಡಿ ಮೋಟಯ್ಯ ಮಾತೆಗೆ ತೊಡಿಸುವ ಚಿನ್ನಾಭರಣಗಳನ್ನು ಹಾಗೂ ಬೆಳ್ಳಿಯ ಆಭರಣಗಳನ್ನು ಪಡೆದುಕೊಂಡರು. ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ಪೊಲೀಸ್ ಬಿಗಿ ಭದ್ರತೆಯಲ್ಲಿ ತಲಕಾವೇರಿಗೆ ಕೊಂಡೊಯ್ಯಲಾಯಿತು. ಅಲ್ಲಿ ಕಾವೇರಿ ಮಾತೆಗೆ ಚಿನ್ನಾಭರಣ ತೊಡಿಸಲಾಯಿತು. ಒಂದು ತಿಂಗಳ ಕಾಲ ಚಿನ್ನಾಭರಣಗಳಿಂದ ಕಾವೇರಿ ಮಾತೆ ಕಂಗೊಳಿಸುವಳು. ಕಿರು ಸಂಕ್ರಮಣದ ಬಳಿಕ ಮತ್ತೆ ಚಿನ್ನಾಭರಣಗಳನ್ನು ಹಿಂತಿರುಗಿಸಲಾಗುವುದು.

ಭಾಗಮಂಡಲ ಭಗಂಡೇಶ್ವರ ದೇವಾಲಯದ ತಕ್ಕರಾದ ಕೋಡಿ ಮೋಟಯ್ಯ, ತಲಕಾವೇರಿ ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.