ತಲಕಾವೇರಿ (ಮಡಿಕೇರಿ): ಜೀವನದಿ ಕಾವೇರಿಗೆ ಭಾನುವಾರ ತೀರ್ಥೋದ್ಭವದ ಸಂಭ್ರಮ. ಬ್ರಹ್ಮಗಿರಿಯ ತಲಕಾವೇರಿ ಕ್ಷೇತ್ರದಲ್ಲಿ ಮಧ್ಯಾಹ್ನ 1.12ಕ್ಕೆ ಕಾವೇರಿಯು ಭಕ್ತರಿಗೆ ತೀರ್ಥರೂಪಿಣಿಯಾಗಿ ಒಲಿದಳು.

ಪವಿತ್ರ ಕುಂಡಿಯಲ್ಲಿ, ಕಾವೇರಿ ಉಕ್ಕೇರುತ್ತಿದ್ದಂತೆಯೇ ಜೈ ಜೈ ಮಾತಾ ಕಾವೇರಿ ಮಾತಾ, ಕಾವೇರಿ ಮಾತಾಕೀ ಜೈ ಎನ್ನುವ ಘೋಷಣೆಗಳು ಮೊಳಗಿದವು.

ಈ ವರ್ಷದ ಮಧ್ಯಾಹ್ನದ ವೇಳೆಯಲ್ಲಿ ಕಾವೇರಿ ದರ್ಶನ ನೀಡಿದ್ದು ಅಪಾರ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರದಲ್ಲಿ ಸೇರಿದ್ದರು. ತೀರ್ಥೋದ್ಭವದ ಬಳಿಕ ಭಕ್ತರು ತಂದಿದ್ದ ಸ್ಟೀಲ್ ಬಿಂದಿಗೆಯಲ್ಲಿ ತೀರ್ಥವನ್ನು ಸಂಗ್ರಹಿಸಿಕೊಂಡು ಮನೆಗೆ ಕೊಂಡೊಯ್ದರು. ಕ್ಷೇತ್ರದಲ್ಲಿ ಭಕ್ತಿ ಗೀತೆಗಳು ಮೊಳಗಿದವು. ಕಳೆದ ವರ್ಷ ಕೋವಿಡ್ ಕಾರಣಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು. ಈ ವರ್ಷ ತೀರ್ಥೋದ್ಭವದ ದರ್ಶನಕ್ಕೆ ಜಿಲ್ಲಾಡಳಿತವು ಅವಕಾಶ ನೀಡಿತ್ತು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಭಕ್ತರೂ ಕಂಡುಬಂದರು. ಕೋವಿಡ್ ಕಾರಣಕ್ಕೆ ಮಾಸ್ಕ್ ಕಡ್ಡಾಯ ಮಾಡಲಾಗಿತ್ತು. ಅಂತರ ಕಾಯ್ದುಕೊಳ್ಳುವಂತೆ ಭಕ್ತರಲ್ಲಿ ಮನವಿ ಮಾಡಲಾಗುತ್ತಿತ್ತು. ಆದರೆ ಅಂತರ ಮಾತ್ರ ಮಾಯವಾಗಿತ್ತು.

ಭಾಗಮಂಡಲದಲ್ಲೂ ಜಾತ್ರೆ ಸಂಭ್ರಮ:ಭಾಗಮಂಡಲದ ಭಗಂಡೇಶ್ವರ ದೇಗುಲದಲ್ಲೂ ಕಾವೇರಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರಧಾನ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆದವು. ಮುಡಿ ನೀಡುವವರು ಅಪಾರ ಸಂಖ್ಯೆಯಲ್ಲಿ ಬಂದಿದ್ದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಸಂಸದ ಪ್ರತಾಪ ಸಿಂಹ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಮೊದಲಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.