ಮೈಸೂರು: ‘ಕೇಂದ್ರ ಸರ್ಕಾರವು ಈಚೆಗೆ ಮಂಡಿಸಿದ ಬಜೆಟ್ನಲ್ಲಿ ಮಿತ್ರಪಕ್ಷಗಳ ಓಲೈಕೆಗೆ ಆದ್ಯತೆ ನೀಡಿ ಕೃಷಿ ಹಾಗೂ ಕೃಷಿಕರರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಸಮಗ್ರ ಭಾರತದ ದೂರದೃಷ್ಟಿಯ ಕಲ್ಪನೆಗಳಿಲ್ಲ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದರು.

‘ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಟ್ಟ ಪದ್ಧತಿಯನ್ನು ಈ ಬಜೆಟ್ನಲ್ಲಿ ಅಳವಡಿಸಿಕೊಳ್ಳಲಾಗಿದೆ. ಕೃಷಿ ಪ್ರಧಾನವಾದ ಈ ದೇಶದಲ್ಲಿರುವ ಬಹುಸಂಖ್ಯಾತ ರೈತರ ಬಗ್ಗೆ ಚಿಂತನೆಯನ್ನೇ ಕೇಂದ್ರ ಸರ್ಕಾರ ಮಾಡಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ದೂರಿದರು.
.ಮಾಗಡಿ | ಬಜೆಟ್: ರಾಜ್ಯಕ್ಕೆ ಅನುದಾನವಿಲ್ಲ- ಹೆಚ್.ಸಿ.ಬಾಲಕೃಷ್ಣ.
‘ದೇಶದಲ್ಲಿ ದಿನಕ್ಕೆ 36 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸರ್ಕಾರದ ಅಂಕಿ–ಅಂಶಗಳೇ ಹೇಳುತ್ತವೆ. ಆದರೆ, ಆತ್ಮಹತ್ಯೆ ತಡೆಗೆ ಯಾವುದೇ ಯೋಜನೆಯ ಪ್ರಸ್ತಾಪವನ್ನೂ ಮಾಡಿಲ್ಲ. ಈ ಸರ್ಕಾರಕ್ಕೆ ಕೃಷಿಕರ ಪ್ರಾಣ ಲೆಕ್ಕಕ್ಕಿಲ್ಲ ಎಂಬುದು ಇದರಿಂದ ಸಾಬೀತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿಕರಿಗೆ ಆತಂಕ

‘ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ 2021ರ ಡಿ.19ರಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯ ಪ್ರಸ್ತಾಪಿಸದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾತು ತಪ್ಪಿದೆ. ಕೃಷಿ ಕ್ಷೇತ್ರದ ಸಂಕಷ್ಟಗಳ ಬಗ್ಗೆ ನೀತಿ ಆಯೋಗ ಆತಂಕ ವ್ಯಕ್ತಪಡಿಸಿದೆ. ಹೀಗಿರುವಾಗ, ಕೇಂದ್ರ ಸರ್ಕಾರವು ತಲೆಕೆಡಿಸಿಕೊಳ್ಳದೇ ಇರುವುದು ಕೃಷಿಕರ ಕಳವಳಕ್ಕೆ ಕಾರಣವಾಗಿದೆ’ ಎಂದು ತಿಳಿಸಿದರು.
.ಕೊಡಗು | ಕೇಂದ್ರ ಬಜೆಟ್; ಮಿಶ್ರ ಪ್ರತಿಕ್ರಿಯೆ.
‘ಜನಸಾಮಾನ್ಯರು, ಯುವಕರು ಹಾಗೂ ಮಹಿಳೆಯರ ಪರವಾದ ಬಜೆಟ್ ಕೂಡ ಇದಾಗಿಲ್ಲ’ ಎಂದು ಟೀಕಿಸಿದರು.

ಕೆಆರ್ಎಸ್ನಲ್ಲಿ ವಿಶ್ವದರ್ಜೆ ಉದ್ಯಾನ: ವಿರೋಧ

‘ಮಂಡ್ಯ ಜಿಲ್ಲೆಯ ಕೆಆರ್ಎಸ್ ಸುತ್ತಲೂ ವಿಶ್ವದರ್ಜೆಯ ಉದ್ಯಾನ ಅಭಿವೃದ್ಧಿಪಡಿಸುವುದಕ್ಕೆ ರೈತ ಸಂಘ ಪ್ರಬಲ ವಿರೋಧ ವ್ಯಕ್ತಪಡಿಸುತ್ತದೆ. ಈ ಹಿಂದೆ ಡಿಸ್ನಿಲ್ಯಾಂಡ್ ಮಾದರಿಯ ಯೋಜನೆಗೆ ಸರ್ಕಾರ ಮುಂದಾಗಿತ್ತು. ಆಗ, ರೈತ ಸಂಘ ಹಾಗೂ ಸಾರ್ವಜನಿಕರ ವಿರೋಧದ ಕಾರಣದಿಂದ ಕೈಬಿಡಲಾಗಿದ್ದ ಯೋಜನೆಯನ್ನು ಬೇರೆ ಹೆಸರಿನಲ್ಲಿ ಈಗ ಅನುಷ್ಠಾನಕ್ಕ ತರಲು ಹುನ್ನಾರ ನಡೆಯುತ್ತಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

‘ಜಲಾಶಯದ ಸುತ್ತ ಈಗಾಗಲೇ ಇರುವ ಭೂಮಿಯ ಜೊತೆಗೆ 198 ಎಕರೆ ಭೂಮಿಯನ್ನು ಉದ್ಯಾನಕ್ಕೆಂದು ಪಡೆಯಬೇಕಾಗುತ್ತದೆ ಎಂದು ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ. ಫಲವತ್ತಾದ ಕೃಷಿ ಭೂಮಿ ಬಳಸಿಕೊಳ್ಳಲು ಮುಂದಾದರೆ ನಾವು ಸಹಿಸುವುದಿಲ್ಲ’ ಎಂದರು.
.ಆಳ–ಅಗಲ | ಅಂಕಿ ಅಂಶಗಳಲ್ಲಿ ಬಜೆಟ್ ನೋಟ...
‘ಯೋಜನೆಯ ಸಂಬಂಧ ಸಾರ್ವಜನಿಕರ ಅಭಿಪ್ರಾಯವನ್ನು ಪಡೆದು ಮುಂದುವರಿಯುವಂತೆ ಒತ್ತಾಯಿಸಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ಕುಟುಂಬಕ್ಕೊಬ್ಬ ಸದಸ್ಯ–ಊರಿಗೊಬ್ಬ ಕಾರ್ಯಕರ್ತ’ ಎಂಬ ಗುರಿಯೊಂದಿಗೆ ರೈತ ಪರ ನೀತಿಗಾಗಿ ಚಳವಳಿಯನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶ ಹೊಂದಲಾಗಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಈಚೆಗೆ ನಡೆದ 45ನೇ ರೈತ ಹುತಾತ್ಮರ ದಿನಾಚರಣೆ ಹಾಗೂ ರಾಜ್ಯಮಟ್ಟದ ಪ್ರತಿನಿಧಿಗಳ ಸಮಾವೇಶದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಜನಾಂದೋಲನಗಳ ರಾಜಕೀಯ ಶಕ್ತಿ ವೃದ್ಧಿಗೆ ತೀರ್ಮಾನಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್, ಮುಖಂಡರಾದ ಮರಂಕಯ್ಯ ಹಾಗೂ ಮಂಡಕಳ್ಳಿ ಮಹೇಶ್ ಪಾಲ್ಗೊಂಡಿದ್ದರು.
.Union Budget 2024 | ವಿಶ್ಲೇಷಣೆ: ದೇಶಕ್ಕೆ ‘ಹಿತ’ ಜನರಿಗೆ ‘ಮಿತ’ ನೀಡಿದ ಬಜೆಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.