ಮೈಸೂರು: ರಾಜ್ಯದ ವಿವಿಧ ಭಾಗಗಳಲ್ಲಿರುವ ‘ಪ್ರಾಗೈತಿಹಾಸಿಕ ಕಾಲದ ಅವಶೇಷ’ಗಳನ್ನು ಒಂದೇ ಕಡೆ ವೀಕ್ಷಿಸಲು ಅನುಕೂಲವಾಗುವಂತೆ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಇಲ್ಲಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ.

ನಮ್ಮ ಪರಂಪರೆ, ಇತಿಹಾಸ ಹಾಗೂ ಸ್ಥಳದ ವಿಶೇಷಗಳನ್ನು ಕಟ್ಟಿಕೊಡುವ ಅವಶೇಷಗಳ ದೊಡ್ಡದಾದ ಚಿತ್ರಗಳನ್ನು ವಿವರಗಳೊಂದಿಗೆ ಇಲಾಖೆಯ ಆಯುಕ್ತರ ಕಚೇರಿಯ ವರಾಂಡದ ಗೋಡೆಗಳಲ್ಲಿ ಪ್ರದರ್ಶಿಸಲಾಗಿದೆ.

ಛಾಯಾಚಿತ್ರ–ಮಾಹಿತಿ ಒಳಗೊಂಡ ಈ ಪ್ರದರ್ಶನವನ್ನು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಶನಿವಾರ ಉದ್ಘಾಟಿಸಿದರು. ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಂ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜು, ಉಪ ನಿರ್ದೇಶಕಿ ಸಿ.ಎನ್.ಮಂಜುಳಾ, ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ ಪಾಲ್ಗೊಂಡಿದ್ದರು.

ವಿಶೇಷವೇನು?: ಅಪರೂಪದ ಶಿಲಾಗೋರಿಗಳು, ಸಂಗೀತ ಕಲ್ಲುಗಳು, ವೃತ್ತ ಶಿಲಾಸಮಾಧಿಗಳು, ಕಲ್ಲಾಸರೆ ಚಿತ್ರಗಳು ಇಲ್ಲಿವೆ. ಹಳೇ ಶಿಲಾಯುಗ, ನವಶಿಲಾಯುಗ, ಬೃಹತ್ ಶಿಲೆಗಳ ಅವಶೇಷಗಳ ಫೋಟೋಗಳನ್ನು ‘ಫ್ರೇಮ್’ನಲ್ಲಿ ಚಿತ್ರಿಸಲಾಗಿದೆ. ಆಯಾ ಸ್ಥಳಗಳ ವಿಶೇಷಗಳ ಕಿರು ಪರಿಚಯವನ್ನೂ ನೀಡಲಾಗಿದೆ.

ಪ್ರಾಗೈತಿಹಾಸಿಕ ಕಾಲದ ನೆಲೆಯಾದ ಬಳ್ಳಾರಿಯ ಸಂಗನಕಲ್ಲು, ಕಪಗಲ್ಲು ಬೆಟ್ಟಗಳು, ಸಂಗನಕಲ್ಲಿನ ಕಲ್ಲುಕುಟ್ಟು, ಸಂಗನಕಲ್ಲಿನ ಸಂಗೀತ ಹೊಮ್ಮಿಸುವ ಕಲ್ಲು, ಕುಡತಿನಿಯ ಬೂದಿಗುಡ್ಡ, ಕುಮತಿಯ ಶಿಲಾಸಮಾಧಿಗಳು, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಹೂವಿನಾಕಾರದ ಶಿಲಾಗೋರಿ, ಪಾತಕೋಟೆಯ ಕಲ್ಗುಳಿಗಳು, ಬಾಗೇಪಲ್ಲಿಯ ಕಲ್ಲಾಸರೆಗಳು, ರಾಮನಗರ ಜಿಲ್ಲೆಯ ಹಕ್ಕಿನಾಳು ಗ್ರಾಮದಲ್ಲಿ ಕಾಣಸಿಗುವ ಶಿಲಾಗೋರಿ, ಪಾವಗಡದ ನಿಲುಸುಗಲ್ಲುಗಳು, ಪಾವಗಡದಲ್ಲಿ ಕಂಡುಬರುವ ಕುಟ್ಟ ಚಿತ್ರಗಳು, ಸಂಗೀತ ಹೊಮ್ಮಿಸುವ ಕಲ್ಲುಗಳು, ಹುತ್ರಿದುರ್ಗದ ಶಿಲಾವೃತ್ತ ಸಮಾಧಿಗಳು, ಕುಟ್ಟಣಕೇರಿಯ ಕಲ್ಲಾಸರೆ, ಐಹೊಳೆಯ ಶಿಲಾಗೋರಿಗಳು, ಬಾಗಲಕೋಟೆ ಜಿಲ್ಲೆಯ ಬೆನಕನವಾರಿಯ ಕಲ್ಲಾಸರೆ ಚಿತ್ರಗಳು, ಉಡುಪಿ ಜಿಲ್ಲೆ ಪಳ್ಳಿ ಗ್ರಾಮದಲ್ಲಿರುವ 3,500 ವರ್ಷಷಗಳು ಪ್ರಾಚೀನವಾದ ಶಿಲಾಗೋರಿಗಳ ಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ಸಾರ್ವಜನಿಕರು ಉಚಿತವಾಗಿ ಇವುಗಳನ್ನು ವೀಕ್ಷಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.