ಮೈಸೂರು: ನಗರದ ಅಪೋಲೊ ಬಿಜಿಎಸ್ ಆಸ್ಪತ್ರೆಯಿಂದ ವಿಶ್ವ ಸ್ಟ್ರೋಕ್ ದಿನದ ಪ್ರಯುಕ್ತ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಯೋಗಾಭ್ಯಾಸ ನಡೆಯಿತು.

ಸ್ಟ್ರೋಕ್ ತಡೆಗಟ್ಟುವಿಕೆ, ಗುರುತಿಸುವಿಕೆ ಮತ್ತು ತಕ್ಷಣದ ಪ್ರತಿಕ್ರಿಯೆಯ ಮಹತ್ವವನ್ನು ಜಾಗೃತಗೊಳಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನೂರಾರು ಜನರು ಭಾಗವಹಿಸಿ ಬೆಂಬಲ ಸೂಚಿಸಿದರು.

ಭಾರತ ಹಾಕಿ ತಂಡದ ಮಾಜಿ ನಾಯಕ ವಿ.ಆರ್.ರಘುನಾಥ್ ಭಾಗವಹಿಸಿ, ಸಕ್ರಿಯ ಜೀವನ ಶೈಲಿಯ ಮಹತ್ವ, ದೈಹಿಕ ಚಟುವಟಿಕೆಯ ಅಗತ್ಯವನ್ನು ತಿಳಿಸಿದರು.

ಆಸ್ಪತ್ರೆಯ ತಜ್ಞರು ಸ್ಟ್ರೋಕ್ ಲಕ್ಷಣಗಳನ್ನು ಗುರುತಿಸುವುದರ ಬಗ್ಗೆ ಮಾಹಿತಿ ಹಂಚಿಕೊಂಡರು.

ಆಸ್ಪತ್ರೆಯ ಉಪಾಧ್ಯಕ್ಷ ಎನ್.ಜಿ.ಭರತೀಶ ರೆಡ್ಡಿ, ಡಾ.ಸೋಮನಾಥ್ ವಾಸುದೇವ್, ಡಾ.ಆಮಿರ್ ಮೊಯಿನ್, ಡಾ.ಶಂಕರ್, ಡಾ.ಕೆ.ಎಸ್.ಬೋಪಯ್ಯ, ಡಾ.ಬಿ.ಎಲ್.ಲೋಕೇಶ್, ಡಾ.ಎಸ್.ವಿನಯ್ ಹೆಗ್ಡೆ, ಡಾ.ಜ್ಯೋತ್ಸ್ನಾ, ಡಾ.ಅಮನ್ ನಾಯಕ್ (ವೈದ್ಯಕೀಯ ಅಧೀಕ್ಷಕರು), ನ್ಯೂರೋ ವಿಭಾಗದ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.