ತುಮಕೂರು: ತಾಲ್ಲೂಕಿನ ಬಿದರೆಕಟ್ಟೆ ಬಳಿಯ ವಿಶ್ವವಿದ್ಯಾಲಯದ ನೂತನ ‘ಜ್ಞಾನಸಿರಿ’ ಕ್ಯಾಂಪಸ್ಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿದ್ದು, ನಗರದ ವಿ.ವಿ ಮುಂಭಾಗ ಬುಧವಾರ ಶಾಸಕ ಬಿ.ಸುರೇಶ್ಗೌಡ ಬಸ್ಗೆ ಚಾಲನೆ ನೀಡಿದರು.

ಅ. 10ರಂದು ಮೊದಲ ವರ್ಷದ ಸ್ನಾತಕೋತ್ತರ ವಿಜ್ಞಾನ ವಿಷಯಗಳಿಗೆ ಪ್ರವೇಶಾತಿ ನಡೆಯಲಿದ್ದು, ಅ. 14ರಿಂದ ಪ್ರಥಮ ವರ್ಷದ ಸ್ನಾತಕೋತ್ತರ ತರಗತಿಗಳು ಆರಂಭವಾಗಲಿವೆ. ಪ್ರತಿ ದಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ವಿ.ವಿ ಕ್ಯಾಂಪಸ್ನಿಂದ ಬಿದರೆಕಟ್ಟೆಗೆ ಬಸ್ ಸಂಚರಿಸಲಿದೆ. ತುಮಕೂರು- ಗೂಳೂರು- ಹೊನ್ನುಡಿಕೆ ಹ್ಯಾಂಡ್ಪೋಸ್ಟ್, ಸೋಪನಹಳ್ಳಿ ಗೇಟ್- ಬಿದರಕಟ್ಟೆ ಕ್ಯಾಂಪಸ್ ತಲುಪಲಿದೆ.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್, ಪ್ರಾಧ್ಯಾಪಕರು ಬಸ್ನಲ್ಲಿ ‘ಜ್ಞಾನಸಿರಿ’ ಕ್ಯಾಂಪಸ್ಗೆ ಪ್ರಯಾಣಿಸಿದರು. ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.