ತುಮಕೂರು: ಬಸವೇಶ್ವರ, ಸಿದ್ಧರಾಮೇಶ್ವರರ ಜಯಂತಿ ಪ್ರಯುಕ್ತ ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಸಂಘದಿಂದ ನಗರದಲ್ಲಿ ಶುಕ್ರವಾರ ಗಿಡ ನೆಟ್ಟು, ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಗರದ ಕೋಡಿ ಬಸವೇಶ್ವರ ವೃತ್ತದಿಂದ ಶಿರಾ ಗೇಟ್ನ ಕನಕ ವೃತ್ತದ ವರೆಗೆ ರಸ್ತೆಯ ವಿಭಜಕದಲ್ಲಿ ಸುಮಾರು 150 ಗಿಡ ನೆಡಲಾಯಿತು. ಮಾಜಿ ಸಚಿವ ಸೊಗಡು ಶಿವಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಸಂಘದ ಸಭಾಂಗಣದಲ್ಲಿ ಮಾಗಡಿ ಜಡೇಮಠದ ಇಮ್ಮಡಿ ಬಸವರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವೇದಿಕೆ ಸಮಾರಂಭ ನೆರವೇರಿತು. ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕೆ.ಬಿ.ಜಯಣ್ಣ, ವೀರಶೈವ ಸಮಾಜದ ಹಿರಿಯ ಮುಖಂಡರಾದ ಜಿ.ಎಚ್.ಪರಮಶಿವಯ್ಯ, ಎಸ್.ಎನ್.ವಿನಯ್ಬಾಬು ಅವರನ್ನು ಸನ್ಮಾನಿಸಲಾಯಿತು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ವೀರಶೈವ ಬ್ಯಾಂಕ್ ಅಧ್ಯಕ್ಷ ಕೆ.ಜೆ.ರುದ್ರಪ್ಪ, ಉಪಾಧ್ಯಕ್ಷ ಹೆಬ್ಬಾಕ ಮಲ್ಲಿಕಾರ್ಜುನ್, ಇನ್ಸ್ಪೆಕ್ಟರ್ ದಿನೇಶ್ಕುಮಾರ್, ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಉಪಾಧ್ಯಕ್ಷ ಎಚ್.ಆರ್.ನಾಗೇಶ್, ನಿರ್ದೇಶಕರಾದ ಟಿ.ಎಸ್.ನಳಿನಾ, ಟಿ.ಬಿ.ಮೃತ್ಯುಂಜಯ, ಎಚ್.ಎನ್.ಶಿವಕುಮಾರ್, ಪ್ರಭಾಕರ್, ಕೆ.ಎಸ್.ಸುರೇಶ್, ಅರುಣ್ಕುಮಾರ್, ಟಿ.ಎಸ್.ಪೃಥ್ವಿಪ್ರಸಾದ್, ಟಿ.ಶಾಂತಕುಮಾರಿ, ಟಿ.ಎಸ್.ಲೋಕೇಶ್ಕುಮಾರ್, ಟಿ.ಎಸ್.ಚಿದಾನಂದ್, ಡಿ.ಎಸ್.ಸುರೇಶ್, ಟಿ.ಎಸ್.ಜಗದೀಶ್, ಎಚ್.ಎಸ್.ಸಿದ್ದರಾಜು, ಸಿಇಒ ಕೆ.ಎಸ್.ಮಂಜುನಾಥ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.