ಕಾರವಾರ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ಕ್ಕೆ ನಗರ ವ್ಯಾಪ್ತಿಯಲ್ಲಿ ನಿರ್ಮಿಸಿದ ಮೇಲ್ಸೇತುವೆ ನಿಗೂಢ ತಾಣವಾಗಿ ಮಾರ್ಪಟ್ಟಿದೆ. ಈ ತಾಣದ ಸುರಕ್ಷತೆಗೆ ನಿಗಾ ಇರಿಸುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆದಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಪತ್ರ ಬರೆದಿರುವುದಾಗಿ ತಿಳಿಸಿದೆ.

ಹೆದ್ದಾರಿಯ ಸುರಂಗ ಮಾರ್ಗ ಕೊನೆಗೊಳ್ಳುವ ಲಂಡನ್ ಸೇತುವೆಯಿಂದ ಆರಂಭಿಸಿ ಆರ್.ಟಿ.ಒ ಕಚೇರಿ ಎದುರಿನವರೆಗೆ ಸಮಾರು 2.5 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಿಸಲಾಗಿದೆ. ಅದರ ಕೆಳಭಾಗದಲ್ಲಿರುವ ಜಾಗವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕೃತವಾಗಿ ಯಾರ ಬಳಕೆಗೂ ನೀಡಿಲ್ಲ.

ಆದರೆ, ಸದ್ಯ ಈ ತಾಣ ವಾಹನಗಳ ನಿಲುಗಡೆಗೆ, ಫಾಸ್ಟ್ ಫುಡ್ ಮಾರಾಟಕ್ಕೆ, ಮೀನುಗಾರರು ಬಲೆಗಳನ್ನು ದಾಸ್ತಾನಿಡಲು, ತಂಪುಪಾನೀಯಗಳ ಮಾರಾಟಗಾರರ ತಾತ್ಕಾಲಿಕ ಅಂಗಡಿಗೆ ನೆಲೆ ಒದಗಿಸಿದೆ. ರಾತ್ರಿ ವೇಳೆ ಇದೇ ತಾಣದಲ್ಲಿ ಕುಡುಕರ ಮೋಜು ಮಸ್ತಿ ಹೆಚ್ಚುತ್ತಿದೆ. ಇಲ್ಲಿ ನಿಲ್ಲುವ ವಾಹನಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಶಂಕೆಯನ್ನೂ ಸ್ಥಳೀಯ ಹಲವರು ವ್ಯಕ್ತಪಡಿಸುತ್ತಿದ್ದಾರೆ.

‘ಮೇಲ್ಸೇತುವೆಯ ಕೆಳಭಾಗದಲ್ಲಿ ಕಾನೂನುಬಾಹಿರ ಚಟುವಟಿಕೆಯಾಗಲಿ ಅಥವಾ ಸೇತುವೆಯ ಮೇಲಿರುವ ಹೆದ್ದಾರಿಗೆ ಧಕ್ಕೆ ತರಬಹುದಾದ ಯಾವುದೇ ಚಟವಟಿಕೆ ನಡೆಯಬಾರದು. ಮೇಲ್ಸೇತುವೆಯ ಸುರಕ್ಷತೆ ಬಗ್ಗೆ ನಿಗಾ ಇರಿಸಬೇಕು ಎಂದು ಈಚೆಗಷ್ಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಪತ್ರ ಬರೆಯಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೇಲ್ಸೇತುವೆಯ ಅಡಿಯಲ್ಲಿ ವಾಹನಗಳ ನಿಲುಗಡೆ, ಅನಧಿಕೃತ ಮಳಿಗೆಗಳ ಸ್ಥಾಪನೆಯ ಕುರಿತಾಗಿ ದೂರು ಬಂದಿದೆ. ಅವುಗಳ ಮೇಲೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆ ಗಮನಹರಿಸಬೇಕಿದೆ. ಆದರೆ, ನಗರ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಡಿಮೆ ಇರುವ ಕಾರಣ ವಾರದ ಸಂತೆಯ ವೇಳೆ ಮೇಲ್ಸೇತುವೆಗುಂಟ ವಾಹನ ನಿಲುಗಡೆ ಆಗುತ್ತಿದೆ. ಇದನ್ನು ತಡೆಯುವ ಕ್ರಮ ಆಗುತ್ತಿಲ್ಲ’ ಎಂದು ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಡಿಪಿಆರ್ ಸಿದ್ಧತೆ ಆಗಿಲ್ಲ

ಮೇಲ್ಸೇತುವೆಯ ಕೆಳಗೆ ಸ್ಕೇಟಿಂಗ್ ರಿಂಕ್ ಸ್ಥಾಪನೆಗೆ ಜಾಗ ಪಡೆದುಕೊಳ್ಳಲಾಗುವುದು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗಿದೆ. ಅಗತ್ಯ ಕ್ರಮವನ್ನು ನಗರಸಭೆ ಕೈಗೊಳ್ಳಬೇಕು ಎಂದು ತಿಂಗಳ ಹಿಂದೆ ನಡೆದಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಸತೀಶ ಸೈಲ್ ಸೂಚಿಸಿದ್ದರು. ಆದರೆ ಈವರೆಗೆ ಜಾಗ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆ ನಡೆದಿಲ್ಲ. ‘ಮೇಲ್ಸೇತುವೆಯ ಅಡಿಯ ಭಾಗವನ್ನು ಮೊದಲು ನಗರಸಭೆ ಸುಪರ್ದಿಗೆ ಪಡೆದುಕೊಳ್ಳಬೇಕಾಗುತ್ತದೆ. ಆ ನಂತರವೇ ವಿಸ್ತೃತ ಯೋಜನಾ ವರದಿ (ಡಿ.ಪಿ.ಆರ್) ಸಿದ್ಧಪಡಿಸಲಾಗುತ್ತದೆ. ಈವರೆಗೆ ಜಾಗ ಹಸ್ತಾಂತರವಾಗದ ಕಾರಣ ಡಿಪಿಆರ್ ಸಿದ್ಧಪಡಿಸುವ ಪ್ರಕ್ರಿಯೆ ನಡೆದಿಲ್ಲ’ ಎಂದು ನಗರಸಭೆ ಎಇಇ ಸದಾನಂದ ಸಾಳೆಹಿತ್ತಲ ತಿಳಿಸಿದರು.

ಮೇಲ್ಸೇತುವೆಯ ಅಡಿಯ ಭಾಗವನ್ನು ನಗರಸಭೆಗೆ ಬಳಕೆಗೆ ನೀಡುವ ಯಾವುದೇ ಪ್ರಸ್ತಾವ ನಮ್ಮೆದುರು ಇಲ್ಲ. ಜಾಗ ನೀಡುವ ಅಧಿಕಾರ ಜಿಲ್ಲಾಧಿಕಾರಿ ಅವರಿಗಿದ್ದು ಅವರೇ ಅಗತ್ಯ ಕ್ರಮ ಕೈಗೊಳ್ಳುತ್ತಾರೆ
-ಕೆ.ಶಿವಕುಮಾರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.