ಚೆನ್ನೈ: ವಿದ್ಯುನ್ಮಾನ ಮತಯಂತ್ರದ ಕುರಿತು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಮದ್ರಾಸ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಮಂಗಳವಾರ ಸಲ್ಲಿಸಿದೆ.

ಮತಯಂತ್ರ ಮತ್ತು ನಿಯಂತ್ರಣ ಯಂತ್ರ (CU)ದ ನಡುವೆ ಪ್ರಿಂಟರ್ ಅಳವಡಿಸಲಾಗಿದ್ದು, ಇದು ಕಂಟ್ರೋಲ್ ಯೂನಿಟ್‌ನಲ್ಲಿರುವ ಮಾಹಿತಿಯ ಸಮಗ್ರತೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿದೆ.

‘ಜನಪ್ರಾತಿನಿಧ್ಯ ಕಾಯ್ದೆ 1951 ಅಡಿಯಲ್ಲಿ ನಿಗದಿಪಡಿಸಿದ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಜತೆಗೆ 1961ರ ಕಾನೂನಿಡಿಯಲ್ಲಿ ಕಂಟ್ರೋಲ್ ಯೂನಿಟ್‌ಗೆ ಪ್ರಿಂಟರ್ ಅನ್ನು ನೇರವಾಗಿ ಅಳವಡಿಸಲು ಅವಕಾಶವಿಲ್ಲ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

‘ವಿದ್ಯುನ್ಮಾನ ಮತಯಂತ್ರದಲ್ಲಿ ದಾಖಲಾಗುವ ಮತಗಳು ಹೊಂದಾಣಿಕೆಯಾಗದಿದ್ದಲ್ಲಿ ಸಲ್ಲಿಸಬೇಕಾದ ಅರ್ಜಿ ನಮೂನೆ ಸಂಖ್ಯೆ 17ಸಿ ಕೂಡಾ ಈ ಕಾಯ್ದೆಯಡಿ ಅನ್ವಯಿಸದು. ಈ ವಿಷಯವನ್ನು ಕೇಂದ್ರ ಚುನಾವಣಾ ಆಯೋಗವು ಬಹಿರಂಗಪಡಿಸಿಲ್ಲ. ಬದಲಿಗೆ ಇದರಲ್ಲಿ ಪಾರದರ್ಶಕತೆಯ ಕೊರತೆಯೂ ಎದ್ದು ಕಾಣುತ್ತಿದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

‘ಇವಿಎಂ ಯಂತ್ರದ ಸಂಕೀರ್ಣತೆಯನ್ನು ಪರಿಗಣಿಸಿದಾಗ, ಇಂಥ ಮಹತ್ವದ ನಿರ್ಧಾರಗಳನ್ನು ಸ್ವತಂತ್ರವಾಗಿ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದೆ.

ಖರೀದಿಸಿದ್ದು 24 ಲಕ್ಷ, ಪರಿಶೀಲನೆ ನಡೆಸಿದ್ದು 20 ಸಾವಿರ ವಿವಿಪ್ಯಾಟ್

‘ಮತಯಂತ್ರಗಳ ಆಡಿಟ್‌ನಲ್ಲಿ ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಬಳಕೆಯಾಗುವ ಆಯ್ದ ಐದು ಇವಿಎಂಗಳ ವಿವಿಪ್ಯಾಟ್‌ನಲ್ಲಿ ಸಂಗ್ರಹವಾಗುವ ಮತಪತ್ರಗಳ ಪರಿಶೀಲನೆ ಬದಲಾಗಿ, ಎಲ್ಲಾ ಮತಯಂತ್ರಗಳನ್ನೂ ಸಂಪೂರ್ಣವಾಗಿ ಪರಿಶೀಲಿಸಬೇಕು’ ಎಂದು ಆಗ್ರಹಿಸಿ ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ವಕೀಲ ಅರುಣ್ ಕುಮಾರ್ ಅಗರ್ವಾಲ್ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ಮತಯಂತ್ರಗಳ ಪರಿಶೀಲನೆಯನ್ನು ನಿರಂತರವಾಗಿ ನಡೆಸಲು ಹೆಚ್ಚಿನ ಅಧಿಕಾರಿಗಳನ್ನು ನಿಯೋಜಿಸಬೇಕು. ಇದು ಕೇವಲ 5ರಿಂದ 6 ಗಂಟೆಗಳ ಕೆಲಸವಷ್ಟೇ. ಹೆಚ್ಚಿನ ಅಧಿಕಾರಿಗಳನ್ನು ನಿಯೋಜಿಸುವುದರಿಂದ ಈ ಕೆಲಸ ಪೂರ್ಣಗೊಳಿಸಲು ಸಾಧ್ಯ’ ಎಂದಿದ್ದಾರೆ.

‘24 ಲಕ್ಷ ವಿವಿಪ್ಯಾಟ್‌ಗಳ ಖರೀದಿಗೆ ಸರ್ಕಾರ ₹5 ಸಾವಿರ ಕೋಟಿ ಖರ್ಚು ಮಾಡಿದೆ. ಆದರೆ ಈವರೆಗೂ 20 ಸಾವಿರ ವಿವಿಪ್ಯಾಟ್‌ಗಳ ಪರಿಶೀಲನೆ ಮಾತ್ರ ಆಗಿದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.