ಬೆಂಗಳೂರು: ಒಬ್ಬ ರಾಜಕಾರಣಿಯಾಗಿ ನಾನು ಫೇಲ್ ಆಗಿದ್ದೇನೆ. ಆದರೆ, ಒಬ್ಬ ಸಂಸದನಾಗಿ ಸಕ್ಸಸ್ ಆಗಿದ್ದೇನೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ‘ರಾಜಕಾರಣಿಯಾದವರು ಕೇವಲ ಚುನಾವಣಾ ಟಿಕೆಟ್ಗೋಸ್ಕರ ಹೋರಾಟ ಮಾಡಬಾರದು. ಒಳ್ಳೆಯ ಕೆಲಸ ಮಾಡುವುದಕ್ಕಾಗಿ ಹೋರಾಡಬೇಕು. ಒಬ್ಬ ರಾಜಕಾರಣಿಯಾಗಿ ನಾನು ಫೇಲ್ ಆಗಿದ್ದೇನೆ. ಆದರೆ, ಒಬ್ಬ ಸಂಸದನಾಗಿ ಸಕ್ಸಸ್ ಆಗಿದ್ದೇನೆ. ರಾಜಕಾರಣಕ್ಕೂ ಅಭಿವೃದ್ಧಿ ಬಹಳ ವ್ಯತ್ಯಾಸವಿದೆ ಎಂದಿದ್ದಾರೆ.

ನಾನು ಇದುವರೆಗೆ ರಾಜಕಾರಣ ಕಲಿತಿರಲಿಲ್ಲ. ಆದರೆ, ಇನ್ನು ಮುಂದೆ ಖಂಡಿತಾ ರಾಜಕಾರಣ ಕಲಿಯುತ್ತೇನೆ. ನಾನು ಕೇವಲ ಕೆಲಸದ ಬಲದಿಂದಲೇ ಜನರ ಪ್ರೀತಿ, ವಿಶ್ವಾಸ ಗಳಿಸಿದೆ. ಅದೇ ರೀತಿ ನಾಗಾಲೋಟದಿಂದ ಓಡಾಡಿ, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಇದೇ ಕಾರಣಕ್ಕೆ ಜನರು ಎರಡು ಬಾರಿ ಸಂಸದನನ್ನಾಗಿ ಆಯ್ಕೆ ಮಾಡಿದ್ದರು. ಆದರೆ, ಇವುಗಳ ಮಧ್ಯೆ ರಾಜಕಾರಣ ಇರುತ್ತದೆ ಎಂಬುದು ಅರಿತುಕೊಳ್ಳುವಲ್ಲಿ ನಾನು ಸೋತಿದ್ದೇನೆ’ ಎಂದು ಹೇಳಿದ್ದಾರೆ.

ಪ್ರತಾಪ ಸಿಂಹ ಅವರಿಗೆ ಈ ಬಾರಿಯ ಲೋಕಸಭೆ ಚುನಾವಣೆಯ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಣಕ್ಕಿಳಿಯಲಿದ್ದಾರೆ.
.ಪ್ರತಾಪ ಸಿಂಹ: ಆಗ ‘ಅಚ್ಚರಿಯ ಅಭ್ಯರ್ಥಿ’, ಈಗ ಅಚ್ಚರಿಯ ನಿರಾಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.