ವಾಷಿಂಗ್ಟನ್: ಅಮೆರಿಕದ ಖ್ಯಾತ ನಟ ಜೇಮ್ಸ್ ಎರ್ಲ್ ಜೋನ್ಸ್ (93) ಅವರು ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದೀರ್ಘಕಾಲದ ಮಧುಮೇಹದಿಂದ ಬಳಲುತ್ತಿದ್ದ ಜೋನ್ಸ್ ಅವರು ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಸಹಾಯಕ ಬ್ಯಾರಿ ಮ್ಯಾಕ್‌ಫರ್ಸನ್ ಹೇಳಿದ್ದಾರೆ.

ಜೋನ್ಸ್ ನಿಧನ ಕುರಿತು ಅವರ ಮಗ ಹ್ಯಾಮಿಲ್ ‘ಎಕ್ಸ್’ನಲ್ಲಿ ‘#RIP ಡ್ಯಾಡ್’ ಎಂದು ಹೃದಯದ ಎಮೋಜಿ ಬಳಸಿ ಪೋಸ್ಟ್ ಮಾಡಿದ್ದಾರೆ.

ಜೇಮ್ಸ್ ಎರ್ಲ್ ಜೋನ್ಸ್ ಅವರು ‘ದಿ ಲಯನ್ ಕಿಂಗ್’ ಕಾರ್ಟೂನ್ ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಜತೆಗೆ, ‘ಸ್ಟಾರ್ ವಾರ್ಸ್’ ಸೇರಿದಂತೆ ಹಲವು ಖ್ಯಾತ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡುವುದರ ಜತೆಗೆ ರಂಗಭೂಮಿ ಕಲಾವಿದರಾಗಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

1969ರಲ್ಲಿ ‘ದಿ ಗ್ರೇಟ್ ವೈಟ್ ಹೋಪ್’, 1987ರಲ್ಲಿ ‘ಫೆನ್ಸಸ್’ ಚಿತ್ರಕ್ಕೆ ಪ್ರಶಸ್ತಿ ಲಭಿಸಿತ್ತು. ಆದೇ ರೀತಿ 1991ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ‘ಗೇಬ್ರಿಯಲ್ಸ್ ಫೈರ್’, ‘ಹೀಟ್ ವೇವ್’ ಕಾರ್ಯಕ್ರಮಗಳು ಜೋನ್ಸ್‌ಗೆ ಖ್ಯಾತಿ ತಂದುಕೊಟ್ಟಿದ್ದವು. ಅವರು 1977ರಲ್ಲಿ ‘ಗ್ರೇಟ್ ಅಮೇರಿಕನ್ ಡಾಕ್ಯುಮೆಂಟ್ಸ್’ ಎಂಬ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದರು. 2011ರಲ್ಲಿ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.