ಮುಂಬೈ: ದೇಶದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಹೆಸರನ್ನು ಗ್ರ್ಯಾಮಿ ಸಂಗೀತ ಪ್ರಶಸ್ತಿ ಸಮಾರಂಭದ ಸ್ಮರಣೀಯ ವಿಭಾಗದಲ್ಲಿ ಉಲ್ಲೇಖಿಸದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಲತಾ ಮಂಗೇಶ್ಕರ್ ಹೆಸರನ್ನು ಕೈಬಿಟ್ಟಿರುವುದಕ್ಕೆ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಾಸ್ ವೆಗಾಸ್‌ನಲ್ಲಿ ಆಯೋಜಿಸಲಾಗಿದ್ದ 2022 ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ, ಈ ವರ್ಷ ನಿಧನರಾದ ಖ್ಯಾತ ಗಾಯಕರು, ಸಂಗೀತ ಸಂಯೋಜಕರು ಮತ್ತು ನಿರ್ದೇಶಕರನ್ನು ಸ್ಮರಿಸಲಾಗುತ್ತದೆ. ಆದರೆ, ಆ ಪಟ್ಟಿಯಲ್ಲಿ ಲತಾ ಮಂಗೇಶ್ಕರ್ ಹೆಸರು ಇರಲಿಲ್ಲ.

ಲತಾ (92) ಅವರು ಜನವರಿ 6ರಂದು, ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿ ನಿಧನರಾಗಿದ್ದರು.

ಕಳೆದ ತಿಂಗಳು ಲಾಸ್ ಏಂಜಲೀಸ್‌ನಲ್ಲಿ ನಡೆದಿದ್ದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ‘ಸ್ಮರಣೀಯ‘ ವಿಭಾಗದಲ್ಲಿ ಲತಾ ಅವರ ಹೆಸರನ್ನು ಕೈಬಿಡಲಾಗಿತ್ತು.

ಬೆಂಗಳೂರಿನ ರಿಕಿ ಕೇಜ್ಗೆ ಮತ್ತೊಂದು ಗ್ರ್ಯಾಮಿ ಸಂಗೀತ ಪ್ರಶಸ್ತಿ

ಈ ಬಾರಿ ಗ್ರ್ಯಾಮಿ ಸಮಾರಂಭದಲ್ಲೂ ಲತಾ ಹೆಸರು ಕೈಬಿಟ್ಟಿರುವುದು ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಟ್ವಿಟರ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತೆಲುಗಿನ ಚಿರಂಜೀವಿ ತಮ್ಮನ ಪುತ್ರಿ ನಿಹಾರಿಕ ಬಂಧನ: ಮಗಳ ಬಗ್ಗೆ ಅಪ್ಪ ಹೇಳಿದ್ದೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.