ಜಿನೆವಾ: ವಾತಾವರಣದ ಮೇಲೆ ಪ್ರಭಾವ ಭೀರುತ್ತಿರುವ ಎಲ್ ನಿನೊ ಸದ್ಯ ಪ್ರಗತಿಯಲ್ಲಿದ್ದು, ಇದು 2024ರ ಏಪ್ರಿಲ್‌ವರೆಗೂ ಮುಂದುವರಿಯಲಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗಲಿದೆ ಎಂದು ಜಾಗತಿಕ ಹವಾಮಾನ ಸಂಸ್ಥೆ (WMO) ಹೇಳಿದೆ.

ಪೆಸಿಫಿಕ್ ಸಾಗರದ ಪೂರ್ವ ಹಾಗೂ ಕೇಂದ್ರ ಭಾಗದ ಮೇಲ್ಮೈನ ತಾಪಮಾನ ಏರಿಕೆಯಾಗುವುದರಿಂದ ಎಲ್ ನಿನೊ ಕಂಡುಬಂದಿದೆ. ಇದರಿಂದ ತಾಪಮಾನ ವಿಪರೀತ ಹೆಚ್ಚಳವಾಗಿ ಜಾಗತಿಕ ಮಟ್ಟದಲ್ಲಿ ಕಾಳ್ಗಿಚ್ಚು, ಚಂಡಮಾರುತ ಮತ್ತು ಬರದ ಪರಿಸ್ಥಿತಿ ಮುಂದುವರಿಯಲಿದೆ. ಈಗಾಗಲೇ ಇಂಥ ಘಟನೆಗಳು ಜಗತ್ತಿನ ವಿವಿಧ ಬಾಗಗಳಲ್ಲಿ ಕಂಡುಬಂದಿದೆ. ಇದರಿಂದಾಗಿ ಆಹಾರ ಮತ್ತು ಇಂಧನ ಬೇಡಿಕೆ ಮತ್ತು ಬೆಲೆ ಹೆಚ್ಚಳವಾಗಲಿದೆ

ನೈಸರ್ಗಿಕವಾಗಿ ಸಂಭವಿಸುವ ಘಟನೆಗಳು ಉತ್ತರ ಗೋಳಾರ್ಧದಲ್ಲಿ ಮುಂದುವರಿಯಲಿದೆ. ಅಮೆರಿಕ ಸರ್ಕಾರದ ಹವಾಮಾನ ಇಲಾಖೆ ಹೇಳಿದಂತೆ ಶೇ 90ರಷ್ಟು ಮುನ್ಸೂಚನೆ ಇರಲಿದೆ. 2026ರಲ್ಲೂ ಇಂಥದ್ದೇ ಪರಿಸ್ಥಿತಿ ಇತ್ತು. ಪಳಿಯುಳಿಕೆ ಇಂಧನಗಳನ್ನು ಹೆಚ್ಚಾಗಿ ಸುಡುವುದೂ ಸಹ ಎಲ್ ನಿನೊ ಹಾಗೂ ತಾಪಮಾನ ಹೆಚ್ಚಳಕ್ಕೆ ಕಾರಣವಾಗಲಿದೆ.
.ನವೆಂಬರ್ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲು: ಹವಾಮಾನ ಇಲಾಖೆ.ಜಾಗತಿಕ ತಾಪಮಾನ ಏರಿಕೆ: ಐದು ನಗರಗಳ ಕೊಡುಗೆ ಶೇ 10ರಷ್ಟು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.