ದೆಹಲಿಯ ಕೋಚಿಂಗ್ ಕೇಂದ್ರದಲ್ಲಿ ನಡೆದಿರುವ ಅನಾಹುತವು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಇದು ಮೊದಲ ಘಟನೆಯೇನಲ್ಲ. ಹಲವು ವರ್ಷಗಳಿಂದ ಇಂಥವು ನಡೆಯುತ್ತಲೇ ಇವೆ. ಉಜ್ವಲ ಭವಿಷ್ಯದ ಕನಸು ಹೊತ್ತ ಯುವಕ ಯುವತಿಯರು, ತರಬೇತಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿಯೂ ಮೂರನೇ ದರ್ಜೆಯ ಮನುಷ್ಯರಂತೆ ಬದುಕಬೇಕಾಗಿ ಬಂದಿರುವುದು, ಮಹತ್ವಾಕಾಂಕ್ಷೆಯ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳ ಅವ್ಯವಸ್ಥೆಗೆ ಬಲಿಯಾಗುವಂತಾಗಿರುವುದು ವ್ಯವಸ್ಥೆಯ ಲೋಪಗಳಿಗೆ ಕನ್ನಡಿ ಹಿಡಿಯುತ್ತಿದೆ...

ರಾಷ್ಟ್ರ ರಾಜಧಾನಿ ದೆಹಲಿಯು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ಪರೀಕ್ಷೆಗಳು ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ಗೆ ಹೆಸರಾಗಿದೆ. ಹಳೆ ರಾಜಿಂದರ್ನಗರ ಮತ್ತು ಮುಖರ್ಜಿ ನಗರದಲ್ಲಿ ಕೋಚಿಂಗ್ ಕೇಂದ್ರಗಳು ಕಿಕ್ಕಿರಿದಿವೆ. ಐಎಎಸ್, ಐಪಿಎಸ್ ಆಗುವ ಕನಸು ಹೊತ್ತ ತರುಣ, ತರುಣಿಯರು ದೇಶದ ಎಲ್ಲ ಭಾಗಗಳಿಂದಲೂ ತರಬೇತಿಗಾಗಿ ಅಲ್ಲಿಗೆ ಹೋಗುತ್ತಾರೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಶುಲ್ಕವನ್ನೂ ಕಟ್ಟುತ್ತಾರೆ. ಆದರೆ, ಅನೇಕ ಕೋಚಿಂಗ್ ಕೇಂದ್ರಗಳಲ್ಲಿ ಮೂಲಸೌಕರ್ಯ ಕೂಡ ಲಭ್ಯವಿಲ್ಲ. ಕಟ್ಟಡದ ನೆಲಮಾಳಿಗೆಗಳನ್ನೂ (ಬೇಸ್ಮೆಂಟ್) ಕೋಚಿಂಗ್ ನೀಡುವ ಸ್ಥಳವಾಗಿ ಬಳಸುವ ಮೂಲಕ ಕಟ್ಟಡ ನಿರ್ಮಾಣ ಮತ್ತು ಬಳಕೆಯ ನಿಯಮಗಳನ್ನೂ ಉಲ್ಲಂಘಿಸಲಾಗುತ್ತಿದೆ. ಇದರ ಪರಿಣಾಮವಾಗಿ ಹಲವು ರೀತಿಯ ಅನಾಹುತಗಳು ಘಟಿಸುತ್ತಿವೆ.

2020ರ ಜನವರಿಯಲ್ಲಿ ಈಶಾನ್ಯ ದೆಹಲಿಯ ಭಜನ್ಪುರದ ಕೋಚಿಂಗ್ ಕೇಂದ್ರವೊಂದರ ಚಾವಣಿ ಕುಸಿದುಬಿದ್ದು ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ಐವರು ಸಾವಿಗೀಡಾಗಿದ್ದರು, 14 ಮಂದಿ ಗಾಯಗೊಂಡಿದ್ದರು. ಕಳೆದ ವರ್ಷದ ಜೂನ್ನಲ್ಲಿ, ಮುಖರ್ಜಿ ನಗರದ ಕೋಚಿಂಗ್ ಕೇಂದ್ರ ಇದ್ದ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಟ್ಟಡದಲ್ಲಿ ಸುರಕ್ಷತೆಯ ವ್ಯವಸ್ಥೆ ಇಲ್ಲದಿದ್ದುದರಿಂದ ವಿದ್ಯಾರ್ಥಿಗಳು ಜೀವ ಉಳಿಸಿಕೊಳ್ಳಲು ಕಿಟಕಿಗಳಿಂದ ಧುಮುಕಿದ್ದರು. ಹಗ್ಗ, ವೈರ್ ಹಿಡಿದು ಕಟ್ಟಡದಿಂದ ಕೆಳಕ್ಕೆ ಜಿಗಿದಿದ್ದರು. ಅದರ ವಿಡಿಯೊಗಳು ಎಲ್ಲೆಡೆ ಹರಿದಾಡಿದ್ದವು. ಕಟ್ಟಡದ ಮೂರನೇ ಮಹಡಿಯಲ್ಲಿದ್ದ ವಿದ್ಯುತ್ ಮೀಟರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅನಾಹುತ ನಡೆದಿತ್ತು. ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು.

ದೆಹಲಿಯ ಇಕ್ಕಟ್ಟಾದ ಗಲ್ಲಿಗಳಲ್ಲಿ, ಜನನಿಬಿಡ ವಾಣಿಜ್ಯ ಕೇಂದ್ರಗಳಲ್ಲಿರುವ ಸೌಲಭ್ಯಗಳಿಲ್ಲದ ಬಹುಮಹಡಿ ಕಟ್ಟಡಗಳಲ್ಲಿ ನಡೆಸಲಾಗುತ್ತಿರುವ ಕೋಚಿಂಗ್ ಕೇಂದ್ರಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಜೀವ ಪಣಕ್ಕೊಡ್ಡಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ತರಬೇತಿ ಪಡೆಯುತ್ತಿದ್ದಾರೆ. ಕೆಲವು ಕೋಚಿಂಗ್ ಕೇಂದ್ರಗಳ ಕಟ್ಟಡಗಳಲ್ಲಿ ಒಳಹೋಗಲು ಮತ್ತು ಹೊರಬರಲು ಒಂದೇ ಬಾಗಿಲು ಇದ್ದರೆ, ಮತ್ತೆ ಕೆಲವು ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಇಲ್ಲ. ಅಡ್ಡಾದಿಡ್ಡಿಯಾಗಿ ಹರಡಿಕೊಂಡಿರುವ ವೈರ್ಗಳು, ಮಿತಿಮೀರಿದ ಎಲೆಕ್ಟ್ರಿಕಲ್ ಸರ್ಕಿಟ್ಗಳಂತೂ ಸಾಮಾನ್ಯ ಎನ್ನುವಂತಾಗಿದೆ. ನಗರದ ಹಲವೆಡೆ ಚರಂಡಿಗಳನ್ನು ಒತ್ತುವರಿ ಮಾಡಲಾಗಿದ್ದು, ಮಳೆ ಬಂದಾಗ ರಸ್ತೆಯ ಮೇಲಿನ ನೀರು ಕಟ್ಟಡಗಳ ನೆಲಮಾಳಿಗೆಗೆ ನುಗ್ಗುತ್ತಿದೆ.

ಮುಖರ್ಜಿ ನಗರದ ಘಟನೆಯ ನಂತರ ದೆಹಲಿ ಹೈಕೋರ್ಟ್, ಕೋಚಿಂಗ್ ಕೇಂದ್ರಗಳ ಸುರಕ್ಷತಾ ವ್ಯವಸ್ಥೆಯ ಲೋಪ ಮತ್ತು ನಿಯಮ ಉಲ್ಲಂಘನೆಯ ಬಗ್ಗೆ ಗಮನ ಹರಿಸುವಂತೆ ದೆಹಲಿ ಆಡಳಿತಕ್ಕೆ ಸೂಚಿಸಿತ್ತು.

ಕೋಚಿಂಗ್ ಕೇಂದ್ರಗಳ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿದ್ದ ದೆಹಲಿ ಪೊಲೀಸರು, ರಾಷ್ಟ್ರ ರಾಜಧಾನಿಯಲ್ಲಿರುವ ಬಹುತೇಕ ಕೋಚಿಂಗ್ ಕೇಂದ್ರಗಳಲ್ಲಿ ಸುರಕ್ಷತಾ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆ ಇದೆ ಎಂದು ಹೈಕೋರ್ಟ್ಗೆ ವಸ್ತುಸ್ಥಿತಿ ವರದಿ ಸಲ್ಲಿಸಿದ್ದರು.

ದೆಹಲಿ ಅಗ್ನಿಶಾಮಕ ಇಲಾಖೆಯು (ಡಿಎಫ್ಎಸ್) 461 ಕೋಚಿಂಗ್ ಕೇಂದ್ರಗಳ ಸಮೀಕ್ಷೆ ನಡೆಸಿತ್ತು. ಕೇಂದ್ರಗಳಲ್ಲಿ ಅಗ್ನಿ ಅವಘಡ ಹಾಗೂ ಅದರ ಪರಿಣಾಮಗಳನ್ನು ತಡೆಗಟ್ಟಲು ಸೂಕ್ತ ವ್ಯವಸ್ಥೆ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದ್ದರೂ, ಕೇಂದ್ರಗಳು ಅವನ್ನು ಅಳವಡಿಸಿಕೊಂಡಿಲ್ಲ ಎಂದು ಡಿಎಫ್ಎಸ್ ತನ್ನ ವರದಿಯಲ್ಲಿ ತಿಳಿಸಿತ್ತು. ದೆಹಲಿ ಮಾಸ್ಟರ್ ಪ್ಲಾನ್–2021ರ ಅನ್ವಯ ಮೂಲಸೌಕರ್ಯ ಕಲ್ಪಿಸದ ಕೋಚಿಂಗ್ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿತ್ತು.

‘ಹೈಕೋರ್ಟ್ ನಿರ್ದೇಶನದಂತೆ ನಾವು ಕೆಲವು ಕೋಚಿಂಗ್ ಕೇಂದ್ರಗಳಿಗೆ ನೋಟಿಸ್ ಜಾರಿ ಮಾಡಿದ್ದೆವು ಮತ್ತು ಕೆಲವು ಕೋಚಿಂಗ್ ಕೇಂದ್ರಗಳನ್ನು ಮುಚ್ಚಿಸಿದ್ದೆವು’ ಎಂದು ದೆಹಲಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಅನೇಕ ಬಾರಿ ವಿದ್ಯಾರ್ಥಿಗಳು ಕೇಂದ್ರಗಳ ಅವ್ಯವಸ್ಥೆ ಬಗ್ಗೆ ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ.

ಈಗ ದೆಹಲಿಯ ಮತ್ತೊಂದು ಕೋಚಿಂಗ್ ಕೇಂದ್ರದಲ್ಲಿ ನೆಲಮಾಳಿಗೆಗೆ ನೀರು ನುಗ್ಗಿ, ಅವಘಡ ನಡೆದಿದೆ. ಘಟನೆಯ ನಂತರ ಎಚ್ಚೆತ್ತಿರುವ ಅಧಿಕಾರಿಗಳು, ನೆಲಮಾಳಿಗೆಗಳಲ್ಲಿ ಕಾರ್ಯಾಚರಿಸುತ್ತಿದ್ದ 13 ಅನಧಿಕೃತ ಕೋಚಿಂಗ್ ಕೇಂದ್ರಗಳನ್ನು ಮುಚ್ಚಿಸಿದ್ದಾರೆ. ಆದರೆ, ಘಟನೆ ನಡೆದಿರುವ ರೀತಿ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಲ್ಲಿ ಕಳವಳ ಉಂಟುಮಾಡಿದೆ.

ಇಲ್ಲಿ ಗಮನಿಸಬೇಕಾದ ವಿಚಾರ ಏನೆಂದರೆ, ತಿಂಗಳ ಹಿಂದೆಯೂ ಈಗ ಅವಘಡ ನಡೆದಿರುವ ಕೇಂದ್ರ ಸೇರಿದಂತೆ ಹಲವು ಕೇಂದ್ರಗಳ ಬಗ್ಗೆ ಅಭ್ಯರ್ಥಿಯೊಬ್ಬರು ದೆಹಲಿ ಮಹಾನಗರ ಪಾಲಿಕೆಗೆ ದೂರು ನೀಡಿದ್ದರು. ಆಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರೆ, ಅನಾಹುತ ನಡೆಯುತ್ತಿರಲಿಲ್ಲ. ಮೇ ತಿಂಗಳಲ್ಲಿ ಗುಜರಾತ್ನ ಸೂರತ್ ನಗರದ ಕೋಚಿಂಗ್ ಕೇಂದ್ರವೊಂದರಲ್ಲಿ ಬೆಂಕಿ ಹತ್ತಿಕೊಂಡು, 22 ವಿದ್ಯಾರ್ಥಿಗಳು ಸುಟ್ಟು ಕರಕಲಾಗಿದ್ದರು. ರಾಜಸ್ಥಾನದ ಕೋಟಾದಲ್ಲಿ ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆಯುವ
ವರು ಒತ್ತಡ, ವೈಫಲ್ಯ ಮುಂತಾದ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ವರದಿಯಾಗುತ್ತಲೇ ಇವೆ. ದೆಹಲಿಯ ಘಟನೆಯ ಬಳಿಕ ಯುಪಿಎಸ್ಸಿ ಆಕಾಂಕ್ಷಿಯೊಬ್ಬರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರ ಬರೆದು, ‘ಕೋಚಿಂಗ್ ಕೇಂದ್ರಗಳು ನರಕ ಆಗಿವೆ’ ಎಂದು ಹೇಳಿದ್ದಾರೆ.

ನೆಲಮಾಳಿಗೆ ಹೇಗಿರಬೇಕು?

*ನೆಲಮಾಳಿಗೆಯ ಎತ್ತರವು ಮಾಳಿಗೆಯ ನೆಲದಿಂದ ಚಾವಣಿವರೆಗೆ ಕನಿಷ್ಠ
2.5 ಮೀಟರ್ ಇರಬೇಕು

*ಗಾಳಿ ಬೆಳಕಿನ ವ್ಯವಸ್ಥೆ ಉತ್ತಮವಾಗಿರಬೇಕು. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಬೈ–ಲಾ (ಉಪ ನಿಯಮಗಳ) ಅನುಸಾರ ಇರಬೇಕು

*ನೆಲಮಟ್ಟದಿಂದ ನೆಲಮಾಳಿಗೆಯ ಚಾವಣಿಯವರೆಗಿನ ಎತ್ತರ ಕನಿಷ್ಠ
0.9 ಮೀಟರ್, ಗರಿಷ್ಠ 1.2 ಮೀಟರ್ ಇರಬೇಕು

*ಚರಂಡಿಯ ನೀರು ನುಗ್ಗದಂತೆ ಎಲ್ಲ ವ್ಯವಸ್ಥೆ ಮಾಡಬೇಕು

*ನೆಲಮಾಳಿಗೆಯ ಗೋಡೆ ಮತ್ತು ನೆಲ ನೀರು ನಿರೋಧಕವಾಗಿರಬೇಕು ಸುತ್ತಲಿನ ಮಣ್ಣು ಮತ್ತು ತೇವಾಂಶವನ್ನು ಆಧರಿಸಿ ನೆಲಮಾಳಿಗೆಯ ವಿನ್ಯಾಸ ಮಾಡಬೇಕು

*ಕಟ್ಟಡದ ಮುಖ್ಯ ಮತ್ತು ಪರ್ಯಾಯ ಮೆಟ್ಟಿಲುಗಳು ನೆಲಮಾಳಿಗೆಯೊಂದಿಗೆ ಸಂಪರ್ಕ ಹೊಂದಿರಬೇಕು

*ನೆಲಮಾಳಿಗೆಯನ್ನು ಕಚೇರಿ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದರೆ, ಹೊರ ಹೋಗಲು (ಎಕ್ಸಿಟ್ ವೇ) ಮತ್ತು ಒಳ ಹೋಗಲು ಅಗತ್ಯ ಸಂಖ್ಯೆಯ ಬಾಗಿಲುಗಳು ಇರಬೇಕು. ಈ ಬಾಗಿಲುಗಳನ್ನು ಸಂಪರ್ಕಿಸುವ ದೂರ 15 ಮೀಟರ್ಗಿಂತ ಹೆಚ್ಚಿರಬಾರದು

*ನೆಲಮಾಳಿಗೆಯನ್ನು ವಿಭಜಿಸುವಂತಿಲ್ಲ. ಒಂದು ವೇಳೆ ಪ್ರಾಧಿಕಾರವು ವಿಭಜನೆಗೆ ಅನುಮತಿ ನೀಡಿದರೆ, ಒಂದು ವಿಭಾಗವು 500 ಚದರ ಅಡಿಗಿಂತ ಕಡಿಮೆ ಇರುವಂತಿಲ್ಲ

*ಅಡುಗೆ ಕೋಣೆ, ಸ್ನಾನಗೃಹ, ಶೌಚಾಲಯಕ್ಕೆ ಅವಕಾಶ ನೀಡುವಂತಿಲ್ಲ. ಅನುಮತಿ ನೀಡಬೇಕಾದರೆ ಕೊಳಚೆ ನೀರು ಹರಿದು ಹೋಗುವಂತಿರಬೇಕು ಮತ್ತು ನೆರೆ ಪರಿಸ್ಥಿತಿ ನಿರ್ಮಾಣವಾಗದಂತೆ ಇರಬೇಕು

*ಬೆಂಕಿ ಆಕಸ್ಮಿಕ ಅಥವಾ ಇತರೆ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ನೆಲಮಾಳಿಗೆಯಲ್ಲಿರುವವರು ಸುರಕ್ಷಿತವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಹೊರಹೋಗುವ ಬಾಗಿಲುಗಳು ಇರಬೇಕು. ಅವುಗಳು ತಡೆ ರಹಿತವಾಗಿರಬೇಕು ಮತ್ತು ಸಾರ್ವಜನಿಕರ ಬಳಕೆಗೆ ಸಿಗದಂತಿರಬೇಕು

ಕೇಂದ್ರ ಸರ್ಕಾರದ ಮಾರ್ಗಸೂಚಿ ಹೇಳುವುದೇನು?

*ನೋಂದಣಿ ಮಾಡಿದ ಮಕ್ಕಳಿಗೆ/ಅಭ್ಯರ್ಥಿಗಳಿಗೆ ಅನುಗುಣವಾಗಿ ಕೋಚಿಂಗ್ ಕೇಂದ್ರಗಳು ಮೂಲಸೌಕರ್ಯಗಳನ್ನು ಹೊಂದಿರಬೇಕು. ತರಗತಿಯಲ್ಲಿ ಪ್ರತಿ ವಿದ್ಯಾರ್ಥಿಗೆ ಕನಿಷ್ಠ ಒಂದು ಚದರ ಮೀಟರ್ನಷ್ಟು ಸ್ಥಳ ಮೀಸಲಿಡಬೇಕು

*ಕಟ್ಟಡವು ಅಗ್ನಿ ಸುರಕ್ಷತೆ, ಕಟ್ಟಡ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಸಂಬಂಧಿಸಿದ ಪ್ರಾಧಿಕಾರದಿಂದ ಅಗ್ನಿ ಮತ್ತು ಕಟ್ಟಡ ಸುರಕ್ಷತೆಗೆ ಸಂಬಂಧಿಸಿದಂತೆ ಪ್ರಮಾಣಪತ್ರಗಳನ್ನು ಪಡೆದಿರಬೇಕು

*ಪ್ರಥಮ ಚಿಕಿತ್ಸಾ ವ್ಯವಸ್ಥೆ ಮತ್ತು ವೈದ್ಯಕೀಯ ನೆರವು/ಚಿಕಿತ್ಸಾ ಸೌಲಭ್ಯ ಹೊಂದಿರಬೇಕು. ತುರ್ತು ಸೇವೆಗಳಿಗಾಗಿ ಆಸ್ಪತ್ರೆಗಳು, ವೈದ್ಯರು, ಪೊಲೀಸ್ ಸಹಾಯವಾಣಿ, ಅಗ್ನಿಶಾಮಕ ಸೇವೆಗಳ ಸಹಾಯವಾಣಿ, ಮಹಿಳಾ ಸಹಾಯವಾಣಿಯಂತಹ ವಿವರಗಳನ್ನು ಪ್ರದರ್ಶಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ನೀಡಬೇಕು

*ಕಟ್ಟಡವು ಸಂಪೂರ್ಣವಾಗಿ ವಿದ್ಯುತ್ ಸೌಲಭ್ಯ ಹೊಂದಿರಬೇಕು. ಕಟ್ಟಡ ಮತ್ತು ತರಗತಿಗಳಲ್ಲಿ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಇರಬೇಕು

*ವಿದ್ಯಾರ್ಥಿಗಳು, ಸಿಬ್ಬಂದಿಗೆ ಶುದ್ಧ ಮತ್ತು ಸುರಕ್ಷಿತವಾದ ಕುಡಿಯುವ ನೀರಿನ ವ್ಯವಸ್ಥೆ ಲಭ್ಯ ಇರುವಂತೆ ನೋಡಿಕೊಳ್ಳಬೇಕು

*ಅಗತ್ಯವಿರುವ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಮತ್ತು ಭದ್ರತಾ ವ್ಯವಸ್ಥೆ ಇರಬೇಕು

*ದೂರು ಪೆಟ್ಟಿಗೆ ಇರಬೇಕು. ವಿದ್ಯಾರ್ಥಿಗಳು ನೀಡುವ ದೂರು/ಕುಂದುಕೊರತೆಗಳನ್ನು ಪರಿಹರಿಸಲು ಸಮಿತಿಯನ್ನು ಹೊಂದಿರಬೇಕು

*ಕೇಂದ್ರದ ಆವರಣದಲ್ಲಿ ಮಹಿಳೆ ಮತ್ತು ಪುರುಷರಿಗೆಪ್ರತ್ಯೇಕ ಶೌಚಾಲಯಗಳಿರಬೇಕು

ನೆಲಮಾಳಿಗೆ ಬಳಕೆಯ ನಿಯಮಗಳು...

ನಿವೇಶನ ಅಥವಾ ಭೂಮಿಯ ಬಳಕೆಗೆ ಸಂಬಂಧಿಸಿದಂತೆ ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆದು, ಮಾಸ್ಟರ್ ಪ್ಲಾನ್ನಂತೆ ವಾಣಿಜ್ಯ ಕಟ್ಟಡದ ನೆಲಮಾಳಿಗೆಯನ್ನು ದೆಹಲಿಯಲ್ಲಿ ವಸತಿ ಉದ್ದೇಶಕ್ಕೆ ಬಿಟ್ಟು ಈ ಕೆಳಕಂಡ ಉದ್ದೇಶಕ್ಕೆ ಬಳಸಬಹುದು.

*ಮನೆಬಳಕೆಯ ವಸ್ತುಗಳು ಅಥವಾ ದಹನಶೀಲವಲ್ಲದ ವಸ್ತುಗಳ ಸಂಗ್ರಹ

*ಡಾರ್ಕ್ ಕೊಠಡಿ, ಸ್ಟ್ರಾಂಗ್ ರೂಂ, ಬ್ಯಾಂಕ್ ಸೆಲ್ಲಾರ್ಗಳು

*ಹವಾನಿಯಂತ್ರಿತ ವ್ಯವಸ್ಥೆಯ ಸಲಕರಣೆಗಳು ಮತ್ತು ಇತರ ಸೇವೆಗಳು ಹಾಗೂ ಕಟ್ಟಡಗಳಿಗೆ ಬಳಸುವ ಯಂತ್ರಗಳ ಅಳವಡಿಕೆಗೆ

*ವಾಹನ ನಿಲುಗಡೆ ಮತ್ತು ಗ್ಯಾರೇಜ್ಗಳು

*ಗ್ರಂಥಾಲಯಗಳ ಪುಸ್ತಕ ಸಂಗ್ರಹ ಕೋಣೆಗಳು

*ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುವ ಕಚೇರಿ ಅಥವಾ ವಾಣಿಜ್ಯ ಉದ್ದೇಶಗಳಿಗೆ

ಆಧಾರ: ಪಿಟಿಐ, ದೆಹಲಿ ಅಗ್ನಿಶಾಮಕ ಸೇವೆಗಳ ಇಲಾಖೆ, ದೆಹಲಿ ಕಟ್ಟಡಗಳ ಉಪನಿಯಮಗಳು, ಕೋಚಿಂಗ್ ಸೆಂಟರ್ಗಳ ನಿಯಂತ್ರಣ ಮಾರ್ಗಸೂಚಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.