ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ ನಡೆಯುತ್ತಿದೆ. ಪದಕ ಗೆಲ್ಲುತ್ತಿರುವ ಕ್ರೀಡಾಪಟುಗಳನ್ನು ಇಡೀ ಜಗತ್ತೇ ಅಭಿನಂದಿಸುತ್ತಿದೆ. ಆದರೆ, ಕ್ರೀಡೆಯ ವಾತಾವರಣವನ್ನು ರೂಪಿಸಬೇಕಿರುವ ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಯುನೆಸ್ಕೊ ಅಧ್ಯಯನವೊಂದರ ಪ್ರಕಾರ, ಜಾಗತಿಕ ಮಟ್ಟದಲ್ಲಿ ಬಹುತೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಕನಿಷ್ಠ ಚಟುವಟಿಕೆಗಳೂ ನಡೆಯುತ್ತಿಲ್ಲ. ಈ ವಿಚಾರದಲ್ಲಿ ಹಣದ ಕೊರತೆ, ತರಬೇತಿ ಪಡೆದ ಶಿಕ್ಷಕರ ಕೊರತೆ, ಸ್ಥಳದ ಕೊರತೆ, ಲಿಂಗ ತಾರತಮ್ಯ, ಅಂಗವಿಕಲರು ಎಂಬ ತಾರತಮ್ಯ ಪ್ರಮುಖ ಸಮಸ್ಯೆಗಳಾಗಿವೆ ಎಂದು ವರದಿ ತಿಳಿಸಿದೆ.

ಆಟ ಎನ್ನುವುದು ಶಿಕ್ಷಣದ ಬಹು ಬಹುಮುಖ್ಯ ಭಾಗ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಆಟ ಸಹಕಾರಿ. ಅದು ಮಕ್ಕಳ ಮೂಲಭೂತ ಹಕ್ಕು ಎಂದೇ ಪರಿಗಣಿಸಲಾಗಿದೆ. ಆದರೆ, ಬಹುತೇಕ ಶಾಲೆಗಳಲ್ಲಿ ಪಾಠಕ್ಕೆ ನೀಡುವ ಮಹತ್ವವನ್ನು ಆಟಕ್ಕೆ ನೀಡುವುದೇ ಇಲ್ಲ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ಬಿಡುಗಡೆ ಮಾಡಿರುವ ಜಾಗತಿಕ ಮಟ್ಟದ ‘ಗುಣಾತ್ಮಕ ದೈಹಿಕ ಶಿಕ್ಷಣ’ದ (ಕ್ಯುಪಿಇ) ಬಗೆಗಿನ ಮೊದಲ ವಸ್ತುಸ್ಥಿತಿ ವರದಿಯಲ್ಲಿ ವ್ಯಕ್ತವಾಗಿರುವ ಪ್ರಮುಖ ಅಂಶ ಇದು.

ಯುನೆಸ್ಕೊ ಸಾಂಪ್ರದಾಯಿಕ ದೈಹಿಕ ಶಿಕ್ಷಣಕ್ಕಿಂತ ಭಿನ್ನವಾಗಿ, ವೇಗ, ವೈವಿಧ್ಯ, ಒಳಗೊಳ್ಳುವಿಕೆ ಮತ್ತು ಮೌಲ್ಯದ ಅಂಶಗಳನ್ನು ಸೇರಿಸಿ ‘ಗುಣಾತ್ಮಕ ದೈಹಿಕ ಶಿಕ್ಷಣ’ ಎನ್ನುವ ಪರಿಕಲ್ಪನೆಯನ್ನು ರೂಪಿಸಿದೆ.

‘ಗ್ಲೋಬಲ್ ಸ್ಟೇಟ್ ಆಫ್ ಪ್ಲೇ’ ಎನ್ನುವ ವರದಿಯನ್ನು ಯುನೆಸ್ಕೊದ ಶೈಕ್ಷಣಿಕ ತಂಡವು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಆಟದಲ್ಲಿಯೂ ಲಿಂಗ ತಾರತಮ್ಯ ಅನುಸರಿಸಲಾಗುತ್ತಿದ್ದು, ವಿಶ್ವದ ಶೇ 82.7 ದೇಶಗಳು ಮಾತ್ರ ದೈಹಿಕ ಶಿಕ್ಷಣವನ್ನು ಬಾಲಕಿಯರಿಗೆ ಕಡ್ಡಾಯಗೊಳಿಸಿವೆ. ಕೇವಲ ಶೇ 7ರಷ್ಟು ಶಾಲೆಗಳು ಬಾಲಕರಿಗೆ ಮತ್ತು ಬಾಲಕಿಯರಿಗೆ ದೈಹಿಕ ಶಿಕ್ಷಣಕ್ಕಾಗಿ ಸಮಾನ ಸಮಯವನ್ನು ನಿಗದಿಪಡಿಸಿವೆ.

ಜಗತ್ತಿನ ಮೂರನೇ ಎರಡರಷ್ಟು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಶೇ 50ರಷ್ಟು ಪ್ರಾಥಮಿಕ ಶಾಲೆಗಳಲ್ಲಿ ವಾರಕ್ಕೆ ಅಗತ್ಯ ಪ್ರಮಾಣದಲ್ಲಿಯೂ ದೈಹಿಕ ಶಿಕ್ಷಣ ತರಗತಿಗಳು ನಡೆಯುತ್ತಿಲ್ಲ. ಯುನೆಸ್ಕೋ ಶೈಕ್ಷಣಿಕ ತಂಡದ ಸದಸ್ಯರೊಬ್ಬರು ಹೇಳುವ ಪ್ರಕಾರ, ಬಹುತೇಕ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಿಗೆ ದೈಹಿಕ ಶಿಕ್ಷಣದ ವಿಶೇಷ ತರಬೇತಿಯೇ ಇಲ್ಲ.

ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಅದರ ಪಾಲನೆಯ ನಡುವೆ ದೊಡ್ಡ ಮಟ್ಟದ ವ್ಯತ್ಯಾಸವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಿದರ್ಶನಕ್ಕೆ, ಶೇ 54.5ರಷ್ಟು ಶಾಲೆಗಳು ಬಾಲಕಿಯರಿಗೆ ಮತ್ತು ಬಾಲಕರಿಗೆ ಸಮಾನ ದೈಹಿಕ ಶಿಕ್ಷಣದ ಅವಕಾಶ ನೀಡುವ ಬಗ್ಗೆ ನಿಯಮ, ಕಾರ್ಯತಂತ್ರ, ಮಾರ್ಗಸೂಚಿ ರೂಪಿಸಲಾಗಿದೆ. ಆದರೆ, ಕೇವಲ ಶೇ 7.1ರಷ್ಟು ಶಾಲೆಗಳಲ್ಲಿ ಮಾತ್ರ ಇದು ಅನುಷ್ಠಾನಕ್ಕೆ ಬಂದಿದೆ.

ಜಾಗತಿಕ ಮಟ್ಟದಲ್ಲಿ ಶೇ 58.3 ದೇಶಗಳು, ಮುಖ್ಯವಾಹಿನಿಯ ಇತರ ಮಕ್ಕಳ ಜತೆಗೆ ಅಂಗವಿಕಲ ಮಕ್ಕಳನ್ನೂ ಆಟದಲ್ಲಿ ಸೇರಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿವೆ. ಆದರೆ, ಶೇ 30ರಷ್ಟು ಶಾಲೆಗಳಲ್ಲಿ ಮಾತ್ರ ಇತರೆ ಮಕ್ಕಳ ಜತೆ ಅಂಗವಿಕಲ ಮಕ್ಕಳು ಆಟದಲ್ಲಿ ಬೆರೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಉತ್ತಮ, ಮಧ್ಯಮ ಅಥವಾ ಕಳಪೆ ಅಂಕಗಳ ಮೂಲಕ ಸರ್ಕಾರಗಳು ತಮ್ಮ ದೇಶದ ದೈಹಿಕ ಶಿಕ್ಷಣದ ಗುಣಮಟ್ಟವನ್ನು ಅಳೆಯಲು ಮತ್ತು ಅದನ್ನು ಉತ್ತಮಪಡಿಸುವ ಮಾರ್ಗಗಳನ್ನು ಕಂಡುಕೊಳ್ಳಲು ವರದಿಯು 10 ಮಾನದಂಡಗಳನ್ನು ನೀಡಿದೆ.

ಬಾಲಕ, ಬಾಲಕಿಯರ ಸಮಗ್ರ ಬೆಳವಣಿಗೆಗೆ ಆಟಗಳು ಅಗತ್ಯ. ಆದರೆ, ಹಣಕಾಸಿನ ಸಮಸ್ಯೆ ಮತ್ತು ಸಮಯದ ಸಮಸ್ಯೆಯಿಂದ ಶಿಕ್ಷಕರಿಗೆ ಸೂಕ್ತ ತರಬೇತಿ ಸಿಗುತ್ತಿಲ್ಲ. ವಿದ್ಯಾರ್ಥಿಗಳ ಅಗತ್ಯ ಮತ್ತು ಪರಿಣಾಮಕಾರಿ ಕಲಿಕೆಯ ಕಾರಣಕ್ಕೆ ದೈಹಿಕ ಶಿಕ್ಷಣವು ಹೊಸದೃಷ್ಟಿ ಪಡೆಯಬೇಕಿದ್ದು, ಪಠ್ಯಕ್ರಮದ ಪರಿಷ್ಕರಣೆ ಆಗಬೇಕಿದೆ ಎಂದು ವರದಿ ಸೂಚಿಸಿದೆ.

ಉತ್ತಮ ವಿದ್ಯಾರ್ಹತೆಯ ಜತೆಗೆ ತರಬೇತಿ ಪಡೆದ ಶಿಕ್ಷಕರ ಅಗತ್ಯವಿದ್ದು, ಅವರಿಗೆ ವೃತ್ತಿಪರ ಬೆಳವಣಿಗೆಯ ನಿರಂತರ ಅವಕಾಶಗಳು ಲಭ್ಯವಾಗಬೇಕು ಎಂದೂ ಉಲ್ಲೇಖಿಸಲಾಗಿದೆ. ಈ ಉದ್ದೇಶಕ್ಕಾಗಿ ಹೆಚ್ಚು ಹಣ ಮೀಸಲಿಡುವಂತೆ ದೇಶಗಳಿಗೆ ಯುನೆಸ್ಕೊ ಕರೆ ನೀಡಿದೆ.

117 ರಾಷ್ಟ್ರಗಳಲ್ಲಿ ಸಮೀಕ್ಷೆ

ಯುನೆಸ್ಕೊ, ಜಾಗತಿಕ ದೈಹಿಕ ಶಿಕ್ಷಣ ಸಮೀಕ್ಷೆಯ ಅಡಿಯಲ್ಲಿ ಸಚಿವಾಲಯ ಮಟ್ಟದ ಸಮೀಕ್ಷೆ, ಶಾಲಾ ಮಟ್ಟದ ಸಮೀಕ್ಷೆ ಮತ್ತು ಕೋವಿಡ್–19 ದತ್ತಾಂಶಗಳ ಸಮೀಕ್ಷೆ ನಡೆಸಿದ್ದು, ಅದರ ವರದಿಗಳನ್ನು ವಿಶ್ಲೇಷಣೆಗೆ ಒಳಪಡಿಸಿ ‘ಗ್ಲೋಬಲ್ ಸ್ಟೇಟ್ ಆಫ್ ಪ್ಲೇ’ ವರದಿ ಸಿದ್ಧಪಡಿಸಿದೆ.

ಅಂತರರಾಷ್ಟ್ರೀಯ ಮಟ್ಟದ ಈ ಸಮೀಕ್ಷೆಗಳಲ್ಲಿ 117 ರಾಷ್ಟ್ರಗಳು ಮತ್ತು 2,525 ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಲಾಗಿದೆ. 117 ದೇಶಗಳನ್ನು ಏಳು ವಲಯಗಳನ್ನಾಗಿ ವಿಂಗಡಿಸಲಾಗಿದೆ (ಕೇಂದ್ರ ಮತ್ತು ದಕ್ಷಿಣ ಏಷ್ಯಾ, ಪೂರ್ವ ಮತ್ತು ಆಗ್ನೇಯ ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕ, ಲ್ಯಾಟಿನ್ ಅಮೆರಿಕ ಮತ್ತು ಕೆರೀಬಿಯನ್, ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ, ಒಸಿಯಾನಿಯಾ (ಆಸ್ಟ್ರೇಲಿಯಾ ಸೇರಿದಂತೆ ಪೆಸಿಫಿಕ್ ಸಾಗರ ಪ್ರದೇಶದ ರಾಷ್ಟ್ರಗಳು), ಸಹರಾ ಆಫ್ರಿಕಾ (ಆಫ್ರಿಕಾ ಖಂಡದ ದಕ್ಷಿಣ ಸಹರಾ ಭಾಗದ ದೇಶಗಳು). ಸರ್ಕಾರದ ನೀತಿಗಳು, ಸಂಪನ್ಮೂಲಗಳ ಹಂಚಿಕೆ, ಶಿಕ್ಷಕರಿಗೆ ತರಬೇತಿ, ಪಠ್ಯಕ್ರಮ ವಿನ್ಯಾಸ ಸೇರಿದಂತೆ 10 ನಿರ್ದಿಷ್ಟ ಮಾನದಂಡಗಳ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದೆ.

ಶಿಫಾರಸುಗಳು

*ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ರಾಷ್ಟ್ರವೂ ಪರಿಣಾಮಕಾರಿ ನೀತಿಗಳನ್ನು ಜಾರಿಗೊಳಿಸಬೇಕು

*ಅನುದಾನ ಕೊರತೆಯಿಂದ ಹಲವು ರಾಷ್ಟ್ರಗಳಲ್ಲಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳಿಲ್ಲ. ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ಹೆಚ್ಚು ಅನುದಾನ ಮೀಸಲಿಡಬೇಕು

*ಅರ್ಹ ಮತ್ತು ತಜ್ಞ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಅವರ ಕೌಶಲಾಭಿವೃದ್ಧಿಗೆ ತರಬೇತಿಗಳನ್ನು ನೀಡಬೇಕು

*ದೈಹಿಕ ಶಿಕ್ಷಣದಲ್ಲಿ ಬಾಲಕರಂತೆ ಬಾಲಕಿಯರಿಗೆ, ಅಂಗವಿಕಲರಿಗೆ ಸಮಾನ ಅವಕಾಶ ನೀಡಬೇಕು

*ದೈಹಿಕ ಶಿಕ್ಷಣ ಪಠ್ಯಕ್ರಮವನ್ನು ಇನ್ನಷ್ಟು ಸುಧಾರಿಸಲು ಕ್ರಮ ಕೈಗೊಳ್ಳಬೇಕು. ಅಧ್ಯಯನ, ಸಂಶೋಧನೆ ಆಧಾರಿತ ಪಠ್ಯಕ್ರಮ ಅಳವಡಿಸಬೇಕು

ಭಾರತದ್ದೂ ಅದೇ ಕಥೆ

ಭಾರತದಲ್ಲಿ ಸಮಗ್ರ ಶಿಕ್ಷಣ ಅಭಿಯಾನದ ಶಾಲೆಗಳಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ನಿಯಮಕ್ಕೆ ತಕ್ಕಂತೆ ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ಇಲ್ಲ. ‘ಪ್ರಥಮ್’ ಸಂಸ್ಥೆಯ ‘ಶಿಕ್ಷಣ ಸ್ಥಿತಿಗತಿ ವಾರ್ಷಿಕ ವರದಿ’ಯ (ಎಎಸ್ಇಆರ್) ಪ್ರಕಾರ, ದೇಶದ ಪ್ರಾಥಮಿಕ ಮಟ್ಟದ
ಶೇ 74.5ರಷ್ಟು ಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಮಟ್ಟದ ಶೇ 79.2ರಷ್ಟು ಶಾಲೆಗಳಲ್ಲಿ ಮಾತ್ರ ದೈಹಿಕ ಶಿಕ್ಷಣಕ್ಕಾಗಿ ಸಮಯ ನಿಗದಿಗೊಳಿಸಲಾಗಿದೆ. ಪ್ರಾಥಮಿಕ ಮಟ್ಟದ ಶೇ 4.3ರಷ್ಟು ಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಮಟ್ಟದ ಶೇ 31.3ರಷ್ಟು ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕಾಗಿ ಪ್ರತ್ಯೇಕ ಶಿಕ್ಷಕರಿದ್ದಾರೆ. ಪ್ರಾಥಮಿಕ ಮಟ್ಟದ ಶೇ 66.6 ಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಮಟ್ಟದ ಶೇ 71.8ರಷ್ಟು ಶಾಲೆಗಳಲ್ಲಿ ಮಾತ್ರ ಆಟದ ಮೈದಾನ ಇದೆ ಎಂದು (2022ರ ಮಾಹಿತಿ) ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.