ಹೊರಗಡೆ ಜಿಟಿಪಿಟಿ ಮಳೆ ಸುರಿಯುತ್ತಿದ್ದರೆ ಬಿಸಿ ಬಿಸಿ ಚಹಾ ಕುಡಿಯುವ ಆನಂದವೇ ಬೇರೆ. ಚಹಾವನ್ನು ಮಳೆಗಾಲದ ಥಂಡಿ ನಿವಾರಿಸುವ ರೋಗ ನಿರೋಧಕ ಶಕ್ತಿಯಾಗಿ ಬಳಸಬಹುದು. ಹೀಗೆ ಮನಸಿಗೆ ಹಿತವೆನಿಸುವ ಬಗೆ ಬಗೆಯ ಚಹಾ ರೆಸಿಪಿಗಳನ್ನು ವೇದಾವತಿ ಎಚ್.ಎಸ್. ಇಲ್ಲಿ ಪರಿಚಯಿಸಿದ್ದಾರೆ.

ಚಾಕೊಲೆಟ್ ಟೀ

ಬೇಕಾಗುವ ಸಾಮಗ್ರಿಗಳು: ಹಾಲು ಮುಕ್ಕಾಲು ಕಪ್, ನೀರು ಕಾಲು ಕಪ್, ಸಕ್ಕರೆ ಎರಡು ಚಮಚ. ಸಿಹಿ ಬೇಕಾಗಿರುವಷ್ಟು. ಟೀ ಪುಡಿ ಒಂದು ಚಮಚ, ಕೊಕೊ ಪುಡಿ ಅರ್ಧ ಚಮಚ.

ತಯಾರಿಸುವ ವಿಧಾನ: ಪಾತ್ರೆಯಲ್ಲಿ ಹಾಲು ಮತ್ತು ನೀರನ್ನು ಹಾಕಿ ಜೊತೆಗೆ ಟೀ ಪುಡಿ ಹಾಕಿ ಎರಡು ನಿಮಿಷ ಕುದಿಸಿ. ಸಕ್ಕರೆ ಹಾಕಿ. ನಂತರ ಕೊಕೊ ಪೌಡರ್ ಹಾಕಿ ಸಣ್ಣ ಉರಿಯಲ್ಲಿ ಎರಡು ನಿಮಿಷ ಕುದಿಸಿ. ಕುದಿ ಬಂದ ಟೀಯನ್ನು ಲೋಟಗಳಿಗೆ ಹಾಕಿ ಸರ್ವ್ ಮಾಡಿ. ಬಿಸಿ, ಬಿಸಿ ಹೊಗೆಯಾಡುವ ಚಾಕೊಲೆಟ್ ಟೀ ಸಿದ್ಧ.

ಹರ್ಬಲ್ ಗ್ರೀನ್ ಟೀ

ಬೇಕಾಗುವ ಸಾಮಗ್ರಿಗಳು: ನೀರು ಒಂದು ಕಪ್, ಕಾಳು ಮೆಣಸಿನ ಪುಡಿ ಒಂದು ಚಿಟಿಕೆ, ಏಲಕ್ಕೆ ಪುಡಿ ಒಂದು ಚಿಟಿಕೆ, ಪುದೀನಾ ಎಲೆ 15 ರಿಂದ 20, ತುಳಸಿ ಎಲೆ 15 ರಿಂದ 20, ನಿಂಬೆರಸ ಒಂದು ಚಮಚ, ಜೇನುತುಪ್ಪ ಅಥವಾ ಸಕ್ಕರೆ ಒಂದು ಚಮಚ.

ತಯಾರಿಸು ವಿಧಾನ: ಟೀ ತಯಾರಿಸುವ ಪಾತ್ರೆಯಲ್ಲಿ ಒಂದು ಕಪ್ ನೀರು ಹಾಕಿ. ಕುದಿ ಬಂದ ನಂತರ ಚಿಟಿಕೆ ಕಾಳು ಮೆಣಸಿನ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಪುದೀನಾ ಎಲೆ ಹಾಗೂ ತುಳಸಿ ಎಲೆಗಳನ್ನು ಹಾಕಿ. ಪ್ಲೇಟ್ ಮುಚ್ಚಿ. ಸಣ್ಣ ಉರಿಯಲ್ಲಿ ಎರಡು ನಿಮಿಷಗಳ ಕಾಲ ಕಾಯಿಸಿ. ನಂತರ ಒಲೆ ಮೇಲಿಂದ ಇಳಿಸಿ ನಿಂಬೆರಸ ಬೆರೆಸಿ. ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಜೇನುತುಪ್ಪ ಹಾಕಿ. ಬಳಿಕ ಕುದಿಸಿ, ಸೋಸಿದ ರಸವನ್ನು ಜೇನುತುಪ್ಪ ಹಾಕಿದ ಲೋಟಕ್ಕೆ ಹಾಕಿ ಮಿಶ್ರಣ ಮಾಡಿ. ಸರ್ವ್ ಮಾಡುವಾಗ ಗ್ರೀನ್ ಟೀ ಮೇಲೆ ಕಾಳು ಮೆಣಸು ಪುಡಿ ಉದುರಿಸಿ.

ಬೂಸ್ಟರ್ ಟೀ

ಬೇಕಾಗುವ ಸಾಮಗ್ರಿಗಳು: ನೀರು ಅರ್ಧ ಲೀಟರ್, ಸಕ್ಕರೆ ಎರಡು ಟೇಬಲ್ ಚಮಚ, ಶುಂಠಿ ಕಾಲು ಇಂಚು, ನಿಂಬೆರಸ ಒಂದು ಚಮಚ, ಟೀ ಪುಡಿ ಒಂದು ಚಮಚ. ಐದರಿಂದ ಆರು ಕಾಳು ಮೆಣಸು, ಲವಂಗ ಮೂರು.

ತಯಾರಿಸುವ ವಿಧಾನ: ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ ಅದರಲ್ಲಿ ಟೀ ಪುಡಿ ಹಾಕಿ ಕುದಿಸಿ. ನಂತರ ಅದಕ್ಕೆ ಸಕ್ಕರೆಯನ್ನು ಸೇರಿಸಿ. ಶುಂಠಿ, ಕಾಳಮೆಣಸು, ಲವಂಗವನ್ನು ತರಿ ತರಿಯಾಗಿ ಕುಟ್ಟಿ ಕುದಿಯುತ್ತಿರುವ ಟೀಗೆ ಸೇರಿಸಿ ಮೂರು ನಿಮಿಷಗಳ ಕಾಲ ಕುದಿಸಿ. ಚೆನ್ನಾಗಿ ಕುದಿಸಿದ ನಂತರ ಸೋಸಿಕೊಂಡು ಅದಕ್ಕೆ ನಿಂಬೆರಸ ಸೇರಿಸಿ. ಬಿಸಿ ಬಿಸಿ ಇರುವಾಗಲೇ ಕುಡಿಯಿರಿ. ಈ ಬೂಸ್ಟರ್ ಟೀ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಸಾಲ ಟೀ

ಬೇಕಾಗುವ ಸಾಮಗ್ರಿಗಳು: ಶುಂಠಿ ಒಂದು ತುಂಡು (1 ಇಂಚು), ಏಲಕ್ಕಿ ಎರಡು, ಲವಂಗ ನಾಲ್ಕು, ಕಾಳುಮೆಣಸು 10, ಟೀ ಪುಟಿ ಎರಡು ಟೇಬಲ್ ಚಮಚ, ನೀರು ಒಂದು ಕಪ್, ಹಾಲು ಎರಡು ಕಪ್, ಸಕ್ಕರೆ ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮಸಾಲ ಪದಾರ್ಥಗಳನ್ನು ಜಜ್ಜಿ ಪುಡಿ ಮಾಡಿಕೊಳ್ಳಿ. ಪಾತ್ರೆಯಲ್ಲಿ ನೀರನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಬಿಸಿಯಾದ ನೀರಿಗೆ ಜಜ್ಜಿಕೊಂಡ ಮಸಾಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಟೀ ಪುಡಿ ಹಾಕಿ. ನೀರು ಚೆನ್ನಾಗಿ ಕುದಿ ಬಂದ ಬಳಿಕ ಹಾಲು ಸಕ್ಕರೆಯನ್ನು ಸೇರಿಸಿ ಕುದಿಸಿ. ನಂತರ ಸೋಸಿ. ರುಚಿಯಾದ ಮಸಾಲ ಟೀ ಸಿದ್ಧವಾಯಿತು. ಪರಿಮಳವನ್ನು ಆಸ್ವಾದಿಸುತ್ತಾ, ರುಚಿಯನ್ನು ಆನಂದಿಸುತ್ತಾ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.