ಬೀಟ್ರೂಟ್ ಡೋಕ್ಲಾ

ಬೇಕಾಗುವ ಸಾಮಗ್ರಿಗಳು:- ಬಿಟ್ರೂಟ್ ಪ್ಯೂರಿ 1/2 ಕಪ್, ಚಿರೋಟಿ ರವೆ 1/2 ಕಪ್, ಮೊಸರು 1/2 ಕಪ್, ಹಸಿಮೆಣಸಿನ ಪೇಸ್ಟ್ 1/2 ಚಮಚ, _ಉಪ್ಪು ರುಚಿಗೆ ತಕ್ಕಷ್ಟು, ಇನೋ 1/2 ಚಮಚ, ಎಣ್ಣೆ 4 ಚಮಚ, ಸಾಸಿವೆ 1/2 ಚಮಚ, ಜೀರಿಗೆ 1/2 ಚಮಚ, ಕರಿಬೇವು 5 ಎಲೆ, ಇಂಗು ಚಿಟಿಕೆ

ವಿಧಾನ: ಒಂದು ಬೌಲ್ ನಲ್ಲಿ ಚಿರೋಟಿ ರವೆ, ಮೊಸರು, ಬಿಟ್ರೂಟ್ ಪ್ಯೂರಿ, ಹಸಿಮೆಣಸಿನ ಪೇಸ್ಟ್, ಉಪ್ಪು ಎಲ್ಲವನ್ನೂ ಸೇರಿಸಿ ಹತ್ತು ನಿಮಿಷ ಹಾಗೇ ಬಿಡಿ.ಇನೋ ಹಾಕಿ ಮೌಲ್ಡ್ ನಲ್ಲಿ ಮಿಶ್ರಣ ಬೆರೆಸಿ ಸ್ಟೀಮರ್ ನಲ್ಲಿ ಇಪ್ಪತ್ತು ನಿಮಿಷ ಬೇಯಿಸಿ.ಪ್ಯಾನ್ ನಲ್ಲಿ ಎಣ್ಣೆ, ಇಂಗು, ಸಾಸಿವೆ, ಕರಿಬೇವಿನ ಒಗ್ಗರಣೆ ಮಾಡಿಕೊಂಡು ಡೋಕ್ಲಾ ಮೇಲೆ ಸುರುವಿ..ಡಿಮೌಲ್ಡ್ ಮಾಡಿಕೊಂಡು ಬೇಕಾದ ಆಕಾರದಲ್ಲಿ ಕಟ್ ಮಾಡಿ ಗ್ರೀನ್ ಚಟ್ನಿಯೊಂದಿಗೆ ಸವ್೯ ಮಾಡಿ.

ಬೀಟ್ರೂಟ್ ಪುಟ್ಟು...

ಬೇಕಾಗುವ ಸಾಮಗ್ರಿಗಳು:- ಬೀಟ್ರೂಟ್ 1 ಉಪ್ಪು ರುಚಿಗೆ ತಕ್ಕಷ್ಟು ತೆಂಗಿನ ತುರಿ 1/4 ಕಪ್ ಪುಟ್ಟು ಮಿಕ್ಸ್ 1 ಕಪ್ ವಿಧಾನ:- ಬೀಟ್ರೂಟ್ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿ ಪ್ಯೂರಿ ತಯಾರಿಸಿಕೊಳ್ಳಿ. ಮಾರ್ಕೆಟ್ ನಿಂದ ತಂದ ಪುಟ್ಟು ಮಿಕ್ಸ್ ನ್ನ ಒಂದು ಬೌಲ್ ಗೆ ಹಾಕಿ ಅದಕ್ಕೆ ರುಬ್ಬಿದ ಬೀಟ್ರೂಟ್ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಹಾಕಿ.ಉಪ್ಪು ಹಾಕಿ ಚೆನ್ನಾಗಿ ಕಲಸಿ ಹದಿನೈದು ನಿಮಿಷಗಳ ಕಾಲ ಬಿಡಿ. ನಂತರ ಪುಟ್ಟು ಮಷಿನ್ ಅಲ್ಲಿ ಮೊದಲಿಗೆ ನಾಲ್ಕು ಚಮಚ ತೆಂಗಿನಕಾಯಿ ತುರಿ ನಂತರ ಕಲಸಿಟ್ಟ ಪುಟ್ಟು ಮಿಕ್ಸ್ ಆರು ಚಮಚ ಹಾಕಿ...ಪುನಃ ತೆಂಗಿನ ತುರಿಪುಟ್ಟು ಮಿಕ್ಸ್ ಒಂದರ ನಂತರ ಒಂದನ್ನು ಹಾಕಿ . ಹತ್ತು ನಿಮಿಷಗಳ ಕಾಲ ಬೇಯಿಸಿ. ಇವಾಗ ರುಚಿಕರವಾದ ಬೀಟ್ರೂಟ್ ಪುಟ್ಟು ರೆಡಿ.

ಬೀಟ್ರೂಟ್ ಪೂರಿ...

ಬೇಕಾಗುವ ಸಾಮಗ್ರಿಗಳು:- ಬೀಟ್ರೂಟ್ ತುರಿ 1/2 ಕಪ್ ಗೋಧಿ ಹಿಟ್ಟು 1ಕಪ್ ಚಿರೋಟಿ ರವೆ 1/2 ಕಪ್ ಉಪ್ಪು ರುಚಿಗೆ ತಕ್ಕಷ್ಟು ಖಾರದ ಪುಡಿ 1ಚಮಚಎಣ್ಣೆ ಕರಿಯಲು ಸಾಕಷ್ಟು ವಿಧಾನ:- ಸಿಪ್ಪೆ ತೆಗೆದು ಬೀಟ್ರೂಟನ್ನು ತುರಿದು ರುಬ್ಬಿಕೊಳ್ಳಿ... ನಂತರ ಬೀಟ್ರೂಟ್ ರಸಕ್ಕೆ ಗೋಧಿ ಹಿಟ್ಟು ಚಿರೋಟಿ ರವೆ ಉಪ್ಪು ಖಾರದ ಪುಡಿ ಸೇರಿಸಿಕೊಂಡು 2 ಚಮಚ ಬಿಸಿ ಎಣ್ಣೆ ಸುರುವಿ ಚೆನ್ನಾಗಿ ಮಿಶ್ರ ಮಾಡಿ... ಪೂರಿ ಹಿಟ್ಟಿನ ಹದಕ್ಕೆ ಕಲೆಸಿ 30 ನಿಮಿಷದ ಬಿಟ್ಟು ಕಾದ ಎಣ್ಣೆಯಲ್ಲಿ ಪೂರಿ ಕರಿದು ಸವಿಯಿರಿ.

ಬೀಟ್ರೂಟ್ ಮೈಸೂರು ಪಾಕ್...

ಬೇಕಾಗುವ ಸಾಮಗ್ರಿಗಳು: ಕಡಲೆ ಹಿಟ್ಟು 1 ಕಪ್ ಸಕ್ಕರೆ 1 ಕಪ್ ತುಪ್ಪ 3/4 ಕಪ್ ಬೀಟ್ರೂಟ್ ರಸ 1/4 ಕಪ್ ಏಲಕ್ಕಿ ಪುಡಿ 1/4 ಚಮಚ ಬಾದಾಮಿ 8-10 ನೀರು 3/4 ಬಟ್ಟಲು ವಿಧಾನ:*ಒಂದು ಪಾತ್ರೆಗೆ ಸಕ್ಕರೆ ಹಾಗೂ ನೀರನ್ನು ಹಾಕಿ ಒಂದೆಳೆ ಪಾಕ ಮಾಡಿಡಿ.ಒಂದು ದಪ್ಪ ತಳ ಇರುವ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಲು ಇಟ್ಟು ಅದಕ್ಕೆ ಕಡಲೆ ಹಿಟ್ಟನ್ನು ಹಾಕಿ ಗಂಟಿಲ್ಲದ ಹಾಗೆ ಕೈಯಾಡಿಸುತ್ತಾ ಇರಿ ಅದಕ್ಕೆ ಬೀಟರೂಟ್ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸಕ್ಕರೆ ಪಾಕ ಹಾಕಿ ಮಧ್ಯಮ ಉರಿಯಲ್ಲಿ ಕೈಯಾಡಿಸ್ತಾ ಇರಿ ಅದು ತಳ ಬಿಡುವ ಹಂತದಲ್ಲಿ ಅದಕ್ಕೆ ತುಪ್ಪದಲ್ಲಿ ಕರಿದ ಗೋಡಂಬಿ ತುಂಡು ಹಾಕಿ ಮಿಕ್ಸ್ ಮಾಡಿ ತುಪ್ಪ ಸವರಿದ ತಟ್ಟೆಗೆ ಹಾಕಿ ಹರಡಿ ಆರಿದ ನಂತರ ಬೇಕಾದ ಆಕಾರದಲ್ಲಿ ಕಟ್ ಮಾಡಿ.

ಬೀಟ್ರೂಟ್ ಮಸಾಲ ರೈಸ್...

ಬೇಕಾಗುವ ಸಾಮಗ್ರಿಗಳು.ಅನ್ನ - 2 ಕಪ್ ಬೀಟ್ರೂಟ್ ತುರಿ - 1 ಕಪ್ ಹೆಚ್ಚಿದ ಈರುಳ್ಳಿ- 1/2 ಕಪ್ಚಕ್ರ ಮೊಗ್ಗು - 2ಏಲಕ್ಕಿ- 3 ಪಲಾವ್ ಎಲೆ - 2ಚಕ್ಕೆ- 1 ತುಂಡುಲವಂಗ - 2 ಜೀರಿಗೆ-1 ಚಮಚ ಧನಿಯಾ ಪುಡಿ - 1 ಚಮಚಖಾರದ ಪುಡಿ- 1 ಚಮಚ ಗರಂ ಮಸಾಲ - 1 ಚಮಚ ವಿಧಾನ:ಮೊದಲಿಗೆ ಅನ್ನ ರೆಡಿ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಬಿಸಿಮಾಡಿ ಜೀರಿಗೆಯನ್ನು ಹಾಕಿ ನಂತರ ಎಲ್ಲ ಮಸಾಲೆ ಪದಾರ್ಥಗಳನ್ನು ಹಾಕಿ ಹುರಿದು ಕೊಳ್ಳಿ ನಂತರ ಈರುಳ್ಳಿ ಹಾಕಿ. ಹಸಿ ವಾಸನೆ ಹೋದ ನಂತರ ಬೀಟ್ರೂಟ್ ಹಾಕಿ ಹುರಿಯಿರಿ ಬೀಟ್ರೂಟ್ ಫ್ರೈ ಆದ ನಂತರ ಅನ್ನ ಹಾಕಿ ಗರಂ ಮಸಾಲ ಧನಿಯಾ ಪುಡಿ ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟುಉಪ್ಪು ಹಾಕಿ ಚೆನ್ನಾಗಿ ಬಿಸಿ ಮಾಡಿ ಸವಿಯಲು ನೀಡಿ.

ಬೀಟ್ರೂಟ್ ಮೊಮೊಸ್...

ಬೇಕಾಗುವ ಸಾಮಗ್ರಿಗಳು: -ಗೋದಿ ಹಿಟ್ಟು 1 ಕಪ್ ಬೀಟ್ರೂಟ್ 1 ವಿನೆಗರ್ 1 ಚಮಚ ಕ್ಯಾಬೇಜ್ 1 ಕಪ್ ಈರುಳ್ಳಿ 1ಹೆಚ್ಚಿದ ಕೊತ್ತಂಬರಿ ಸೊಪ್ಪು 1/4 ಕಪ್ ಹಸಿಮೆಣಸಿನ ಪೇಸ್ಟ್ 1 ಚಮಚ ಶುಂಠಿ ಪೇಸ್ಟ್ 1 ಚಮಚ ಉಪ್ಪು ರುಚಿಗೆ ತಕ್ಕಷ್ಟುಎಣ್ಣೆ 5 ಚಮಚ

ವಿಧಾನ:-ಮೊದಲು ಬೀಟ್ರೂಟ್ ಬೇಯಿಸಿ ಜಾಸ್ತಿ ನೀರು ಹಾಕದೇ ನುಣ್ಣಗೆ ರುಬ್ಬಿ ರಸ ತೆಗೆದಿಟ್ಟುಕೊಳ್ಳಿ.ಬೀಟ್ರೂಟ್ ಪ್ಯೂರಿಗೆ ವಿನೆಗರ್ ಬೆರೆಸಿ. ಗೋದಿ ಹಿಟ್ಟಿಗೆ ಬೀಟ್ರೂಟ್ ರಸ ಉಪ್ಪು ಬಿಸಿ ನೀರು ಹಾಕಿ ಹಿಟ್ಟು ಕಲೆಸಿಕೊಂಡು ಎಣ್ಣೆ ಸವರಿ ಸಣ್ಣ ಸಣ್ಣ ಉಂಡೆ ಮಾಡಿಟ್ಟುಕೊಳ್ಳಿ.. ಸ್ಟಪಿಂಗ್ ಗಾಗಿ ಹೆಚ್ಚಿದ ಕ್ಯಾಬೇಜ್ ಈರುಳ್ಳಿ ಪೀಸ್ ಕೊತ್ತಂಬರಿ ಸೊಪ್ಪು ಮೆಣಸಿನ ಪೇಸ್ಟ್ ಶುಂಠಿ ಪೇಸ್ಟ್ ಉಪ್ಪು ಎಲ್ಲ ಸೇರಿಸಿ .ತಯಾರಿಸಿದ ಗೋದಿ ಹಿಟ್ಟಿನ ಉಂಡೆಗಳನ್ನು ಸ್ವಲ್ಪ ಲಟ್ಟಿಸಿಕೊಂಡು ಸ್ಟಪಿಂಗ್ ಸೇರಿಸಿ ಇಷ್ಟವಾದ ಆಕಾರದಲ್ಲಿ ಮೊಮೊಸ್ ತಯಾರಿಸಿಕೊಳ್ಳಿ..ಸ್ಟೀಮರ್ ನಲ್ಲಿ ಹತ್ತು ನಿಮಿಷ ಬೇಯಿಸಿ. ಕೆಂಪನೆಯ ಮೊಮೊಸ್ ಗಳನ್ನು ಚಟ್ನಿ ಮತ್ತು ಸಾಸ್ ಜೊತೆಗೆ ಸವ್೯ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.