ಹೆಸರುಬೇಳೆ ಬತ್ತಾಸ್

ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ, ಮೆಣಸಿನಕಾಯಿ, ಶುಂಠಿ, ಓಂ ಕಾಳು, ಉಪ್ಪು, ಅಡಿಗೆ ಸೋಡಾ, ಎಣ್ಣೆ, ಅರಿಶಿನ, ಗರಮ್ ಮಾಸಾಲ ಮತ್ತು ಆಮ್ ಚೂರ್ ಪೌಡರ್.

ಮಾಡುವ ವಿಧಾನ: ಮೊದಲಿಗೆ ಒಂದುಗಂಟೆಗಳ ಕಾಲ ಒಂದು ಕಪ್ ಹೆಸರು ಬೇಳೆಯನ್ನು ನೆನೆಸಿಡಬೇಕು. ಬೇಳೆ ನೆಂದ ನಂತರ ನೆಂದ ಹೆಸರುಬೇಳೆ,ಮೂರರಿಂದ ನಾಲ್ಕು ಮೆನಸಿನಕಾಯಿ, ಒಂದು ಇಂಚಿನಷ್ಟು ಶುಂಠಿ ಸೇರಿಸಿ ರುಬ್ಬಿಕೊಳ್ಳಬೇಕು ನಂತರ ರುಬ್ಬಿಕೊಂಡ ಮಿಶ್ರಣವನ್ನು ಪಾತ್ರೆಗೆ ತೆಗೆದುಕೊಂಡು ಅದಕ್ಕೆ ಅರ್ದ ಕಪ್ ತುಪ್ಪ ,ಅರ್ದ ಕಪ್ ಗೋಧಿ ಹಿಟ್ಟು, ಕಾಲು ಕಪ್ ಚಿರೋಟಿ ರವೆ, ಅರಿಶಿನ ಅರ್ದ ಚಮಚ, ದನಿಯಾ ಪುಡಿ, ಗರಮ್ ಮಸಾಲಾ ಅರ್ದ ಚಮಚ, ಒಂದು ಚಮಚ ಓಂ ಕಾಳು ಎರಡು ಚಮಚ ಎಳ್ಳು ಮತ್ತು ರುಚಿಗೆ ತಕ್ಕಷ್ಟು ಉಪ್ಪ ಹಾಕಿ ಎಲ್ಲವನ್ನು ಮಿಶ್ರಣ ಮಾಡಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಬೇಕು ನಂತರ ಚಪಾತಿ ಲಟ್ಟಿಸಿ ಅದಕ್ಕೆ ಸ್ವಲ್ಪ ತುಪ್ಪ ಸವರಿ ಸುರುಳಿ ಮಾಡಿಕೊಂಡು ಸಣ್ಣ ಸಣ್ಣದಾಗಿ ಕತ್ತರಿಸಿಕೊಂಡು ಬೆರಳಿಂದ ಒತ್ತಿ ಬತ್ತಾಸ ತರ ಮಾಡಿಕೊಳ್ಳಬೇಕು ನಂತರ ಎಣ್ಣೆಯಲ್ಲಿ ಕರೆದರೆ ಹೆಸರುಬೇಳೆ ಬತ್ತಾಸ್ ತಿನ್ನಲು ರೆಡಿ...

ಅವಲಕ್ಕಿ ಚಕ್ಕುಲಿ

ಬೇಕಾಗುವ ಸಾಮಗ್ರಿಗಳು: ಅವಲಕ್ಕಿ, ಹುರಿಗಡಲೆ ಹಿಟ್ಟು, ಎಳ್ಳು, ಅಕ್ಕಿಹಿಟ್ಟು ,ತುಪ್ಪ, ಓಂ ಕಾಳು, ಸೋಡಾಪುಡಿ, ಉಪ್ಪು, ಅಚ್ಚ ಖಾರಾದಪುಡಿ ಮತ್ತು ಎಣ್ಣೆ.

ಮಾಡುವ ವಿಧಾನ: ಒಂದು ಕಪ್ ಅವಲಕ್ಕಿಯನ್ನು ನುಣ್ಣಗೆ ಪುಡಿಮಾಡಿಕೊಂಡು ಒಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಬೇಕು ನಂತರ ಅದಕ್ಕೆ ಅರ್ಧ ಕಪ್ ಹುರಿಗಡಲೆ ಹಿಟ್ಟು, ಅರ್ಧ ಕಪ್ ಅಕ್ಕಿ ಹಿಟ್ಟು, ಒಂದು ಚಮಚ ಓಂ ಕಾಳು, ಎರಡು ಚಮಚ ಹುರಿದ ಎಳ್ಳು, ಒಂದು ಚಮಚ ಅಚ್ಚ ಖಾರದ ಪುಡಿ ಸ್ವಲ್ಪ ಅರಿಶಿನ,ಚಿಟಿಗೆ ಸೋಡಾಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನು ಮಿಕ್ಸ್ ಮಾಡಿಕೊಳ್ಳಿ ನಂತರ ಕಾಲು ಕಪ್ ತುಪ್ಪವನ್ನು ಕಾಯಿಸಿ ತಯಾರಿಸಿದ ಹಿಟ್ಟಿಗೆ ಹಾಕಿ ಮತ್ತಮ್ಮೆ ಮಿಕ್ಸ್ ಮಾಡಿಕೊಳ್ಳಬೇಕು. ಒಂದು ಲೋಟ ನೀರನ್ನು ಕುದಿಯುವಂತೆ ಕಾಯಿಸಿ ಮಾಡಿಟ್ಟ ಮಿಶ್ರಣಕ್ಕೆ ಸೇರಿಸಿ ಹದವಾಗಿ ನಾದಿ ಅರ್ಧಗಂಟೆ ನೆನೆಯಲಿಡಬೇಕು.

ನಂತರ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಹದಕ್ಕೆ ನಾದಿ ಚಕ್ಕಲಿ ಮಾಡುವ ಒತ್ತು ಪಾತ್ರೆಗೆ ಹಾಕಿ ಚಕ್ಕಲಿ ತಯಾರಿಸಿಕೊಂಡು ಎಣ್ಣೆಯಲ್ಲಿ ಕರಿದರೆ ಅವಲಕ್ಕಿ ಚಕ್ಕುಲಿ ತಿನ್ನಲು ಸಿದ್ಧ.

ಡ್ರೈ ಫ್ರೂಟ್ಸ್ ಕರ್ಚಿಕಾಯಿ

ಬೇಕಾಗುವ ಸಾಮಗ್ರಿಗಳು: ಬದಾಮಿವಾಲ್ನಟ್ ಗೋಡಂಬಿ ದ್ರಾಕ್ಷಿ ಪಿಸ್ತಾ ಕೊಬ್ಬರಿ ಕರ್ಜೂರ ಚಿರೋಟಿ ರವೆ ಉಪ್ಪು ಎಣ್ಣೆ ತುಪ್ಪ ತುರಿದ ಕೊಬ್ಬರಿ ಗಸಗಸೆ ಏಲಕ್ಕಿ

ಮಾಡುವ ವಿಧಾನ: ತಲಾ ಅರ್ಧ ಕಪ್ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ , ವಾಲ್ನಟ್ಸ್,ತುರಿದ ಕೊಬ್ಬರಿಯನ್ನು ತೆಗೆದುಕೊಂಡು ತುಪ್ಪದಲ್ಲಿ ಹುರಿದುಕೊಂಡು ತರಿತರಿಯಾಗಿ ರುಬ್ಬಿಕೊಳ್ಳಬೇಕು ಹಾಗೆ ಒಂದು ಕಪ್ ಕರ್ಜೂರವನ್ನು ನುಣ್ಣಗೆ ರುಬ್ಬಿ. ನಂತರ ರುಬ್ಬಿದ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಮಿಶ್ರಣ ಮಾಡಿ ಅದಕ್ಕೆ ತುರಿದು ಹುರಿದ ಕೊಬ್ಬರಿ, ಹುರಿದ ಗಸಗಸೆ, ಏಲಕ್ಕಿ ಪುಡಿ ಹಾಕಿ ಎಲ್ಲವನ್ನು ಮಿಶ್ರಣ ಮಾಡಿ ಹೂರಣ ತಯಾರಿಸಿಕೊಳ್ಳಿ.

ಇನ್ನೊಂದು ಪಾತ್ರೆಯಲ್ಲಿ ಒಂದು ಕಪ್ ಚಿರೋಟಿ ರವೆ, ಅರ್ಧ ಕಪ್ ಗೋಧಿ ಹಿಟ್ಟು ಹಾಕಿ ನಂತರ ಅದಕ್ಕೆ ಎರಡು ಟೇಬಲ್ ಸ್ಪೂನ್ ಕಾದ ಎಣ್ಣೆ, ಸ್ವಲ್ಪ ಉಪ್ಪು ,ಚಿಟಿಕೆ ಸೋಡಾಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಅದಕ್ಕೆ ಬೇಕಾದಷ್ಟು ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ನಾದಿಕೊಂಡು ಅರ್ಧ ಗಂಟೆ ನೆನೆಯಲು ಬಿಡಿ.

ನಂತರ ನಾದಿಟ್ಟ ಹಿಟ್ಟಿನಲ್ಲಿ ಚಿಕ್ಕ ಚಿಕ್ಕ ಉರುಳೆಗಳನ್ನು ಮಾಡಿಕೊಂಡು ಪೂರಿಯಂತೆ ಲಟ್ಟಿಸಿ ಕರ್ಚಿಕಾಯಿ ಮಾಡುವ ಮೋಲ್ಡ್ ಗೆ ಹಾಕಿ ಮಾಡಿಟ್ಟ ಡ್ರೈ ಪ್ರೂಟ್ಸ್ ಹೂರಣವನ್ನು ತುಂಬಿ ಕರ್ಚಿಕಾಯನ್ನು ತಯಾರಿಸಿಕೊಳ್ಳಿ. ನಂತರ ಕಾದ ಎಣ್ಣೆಯಲ್ಲಿ ಒಂದಾದಾಗಿ ಹಾಕಿ ಕರಿದರೆ ಡ್ರೈ ಫ್ರೂಟ್ಸ್ ಕರ್ಚಿಕಾಯಿ ತಿನ್ನಲು ತಯಾರಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.