ನವದೆಹಲಿ: ದೇಶದ ಹೊರಗಿನವರು, ಯಾವುದೇ ಹುದ್ದೆಯಲ್ಲಿದ್ದವರಾದರೂ ನಮ್ಮ ಪ್ರಧಾನಿಯವರ ಬಗ್ಗೆ ಮಾತನಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಎನ್ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ.

ಮಾಲ್ದೀವ್ಸ್ನ ಕೆಲವು ಉಪ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಜಾಲತಾಣಗಳಲ್ಲಿ ಆಡಿರುವ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ ಶರದ್, ‘ನರೇಂದ್ರ ಮೋದಿ ಅವರು ನಮ್ಮ ದೇಶದ ಪ್ರಧಾನಿ. ಹೊರ ದೇಶದವರು ನಮ್ಮ ಪ್ರಧಾನಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ನಾವು ಸಹಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

ಯಾರೇ ಆದರೂ ಪ್ರಧಾನಿ ಹುದ್ದೆಯನ್ನು ಗೌರವಿಸಬೇಕು ಎಂದು ಶರದ್ ಪವಾರ್ ಕಿವಿಮಾತು ಹೇಳಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದ ಸಭೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದು ಪೂರ್ವಭಾವಿ ಸಭೆಯಾಗಿದ್ದು, ಈ ಸಭೆಯಲ್ಲಿ ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ಕುರಿತು ಚರ್ಚೆ ನಡೆಯಲಿದೆ. ಪ್ರಾಬಲ್ಯವಿಲ್ಲದ ರಾಜ್ಯಗಳಲ್ಲಿ ಮೈತ್ರಿಕೂಟದ ಎಲ್ಲ ಪಕ್ಷದವರು ಒಟ್ಟಾಗಿ ಕೆಲಸ ಮಾಡಬೇಕಿದೆ. ಜತೆಗೆ ಕಾಂಗ್ರೆಸ್ ‘ಇಂಡಿಯಾ’ ಮೈತ್ರಿಕೂಟವನ್ನು ತೊರೆಯಲು ಪ್ರಯತ್ನಿಸುತ್ತಿದೆ ಎಂದು ನಾನು ಭಾವಿಸುವುದಿಲ್ಲ’ ಎಂದು ಹೇಳಿದ್ದಾರೆ.
.ಮಾಲ್ದೀವ್ಸ್: ಕಳವಳ ತಿಳಿಸಿದ ಭಾರತ.ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಮಾಲ್ಡೀವ್ಸ್ನ ಮೂವರು ಸಚಿವರ ಅಮಾನತು.ಮಾಲ್ಡೀವ್ಸ್ ಅನ್ನು ಭಾರತ ಗುರಿಯಾಗಿಸಿಕೊಂಡಿದೆ: ಮಾಲ್ಡೀವ್ಸ್ ಸಚಿವರು.ಬೆರಗುಗೊಳಿಸುವ ಲಕ್ಷದ್ವೀಪದಲ್ಲಿ ಮೋದಿಯನ್ನು ನೋಡಲು ತುಂಬಾ ಖುಷಿಯಾಗಿದೆ: ಸಲ್ಮಾನ್.ಮಂತ್ರಾಕ್ಷತೆಗೆ ಮಂತ್ರ-ಗೋತ್ರ ತಿಳಿಯದ ಸಿಎಂ ಅಕ್ಕಿ ಕೊಡುತ್ತಾರೆಯೇ: ಪ್ರತಾಪ ಲೇವಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.