ಸಮತೋಲಿತ ಆಹಾರವೇ ಆರೋಗ್ಯದ ಗುಟ್ಟು ಎನ್ನುತ್ತಾರೆ ತಜ್ಞರು. ಆದರೆ ಇಂದಿನ ವೇಗದ ನಗರ ಜೀವನದಲ್ಲಿ ಪೌಷ್ಟಿಕ, ಸಮತೋಲಿತ ಆಹಾರ ಸೇವಿಸುವುದಕ್ಕೆಲ್ಲಿ ಪುರುಸೊತ್ತು. ಆಹಾರದ ಅಸಮತೋಲನದಿಂದ ಇಂದು ಕಾಯಿಲೆಗಳು ಹೆಚ್ಚುತ್ತಿರುವುದೂ ಸುಳ್ಳಲ್ಲ. ಅದರಲ್ಲೂ ಯುವಜನರು ಜಂಕ್ಫುಡ್ನಂತಹ ಕೊಬ್ಬಿನ ಆಹಾರಕ್ಕೆ ಜೋತುಬಿದ್ದು ಆರೋಗ್ಯ ಹಾಳುಮಾಡಿಕೊಳ್ಳುತ್ತಿರುವುದೂ ಇಲ್ಲದಿಲ್ಲ. ಕೆಲವೊಮ್ಮೆ ಅನಿವಾರ್ಯಕ್ಕೆ ಏನೋ ಒಂದಿಷ್ಟು ತಿಂದು ಇದ್ದುಬಿಡುವುದೂ ಆರೋಗ್ಯ ಹಾಳಾಗಲು ಕಾರಣವಾಗುತ್ತಿದೆ.

ಕಳೆದ ಜನಗಣತಿಯಪ್ರಕಾರ ಭಾರತದ ನಗರೀಕರಣ ಶೇ 31.2ರಷ್ಟು ಹೆಚ್ಚಿದ್ದು, ಪ್ರಸ್ಥುತ ಭಾರತೀಯ ನಗರಗಳಲ್ಲಿನ ಜನಸಂಖ್ಯೆ ಸುಮಾರು 600 ದಶಲಕ್ಷ ತಲುಪಿದೆ. ಭಾರತದಲ್ಲಿನ ವೃತ್ತಿನಿರತ ಬಹುಪಾಲು ಯುವಜನತೆ ಶಿಕ್ಷಣ, ಉದ್ಯೋಗ ಮುಂತಾದ ಉದ್ದೇಶಗಳಿಗಾಗಿ ನಗರಗಳಿಗೆ ವಲಸೆ ಹೋಗುವುದು ಅನಿವಾರ್ಯವಾಗಿದೆ. ಆದರೆ ಅವರು ಸೇವಿಸುವ ಆಹಾರ ಪೋಷಕಾಂಶ, ನೈರ್ಮಲ್ಯ, ಅಧಿಕೃತ ರುಚಿ ಮತ್ತು ಕೈಗೆಟುಕುವ ದರಗಳನ್ನು ಹೊಂದಿರುವುದು ಅಪರೂಪವಾಗಿದೆ. ಇದರಿಂದ ಕಾರ್ಯನಿರತ ಯುವಜನರ ಆರೋಗ್ಯ, ದೈಹಿಕ ದೃಢತೆ ಮತ್ತು ಉತ್ಪಾದಕತೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.

ಇದನ್ನು ಮನಗಂಡ ನ್ಯೂಟಿ ಸಂಸ್ಥೆಯು ಮನೆ ಶೈಲಿಯ ಸಿದ್ಧ ಆಹಾರ ಸಾದರಪಡಿಸುತ್ತಿದ್ದು, ಭಾರತದ ಮೊದಲ ‘ಫುಡ್ ಆ್ಯಸ್ ಎ ಸರ್ವೀಸ್ ಬ್ರ್ಯಾಂಡ್’ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ನಗರದ ಹಲವು ಮಳಿಗೆಗಳ ಮೂಲಕ ಮನೆಶೈಲಿಯ ಸಿದ್ಧ ಆಹಾರ ಪೂರೈಸುವಲ್ಲಿ ಮುಂಚೂಣಿಯಲ್ಲಿದೆ. ಈಗಾಗಲೇ ಬೆಂಗಳೂರಿನಲ್ಲಿ 163 ಮಳಿಗೆಗಳನ್ನು ಹೊಂದಿರುವ ನ್ಯೂಟಿ ಹಲವು ಆಹಾರ ಸಂಸ್ಥೆಗಳ ಜತೆಗೂಡಿ ಉನ್ನತ ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ ಸೇವೆ ಸಲ್ಲಿಸಲು ಮುಂದಾಗಿದೆ.

ಪ್ರಾದೇಶಿಕ ಅಡುಗೆ ತಯಾರಿ ವಿಧಾನ ಆಧರಿತವಾಗಿ ತಯಾರಿಸಿರುವ ನ್ಯೂಟಿ ಆಹಾರಗಳು ಬಿಸಿ ಮಾಡಿ ತಿನ್ನುವಂತಹವಾಗಿವೆ. ಯಾವುದೇ ಕೃತಕ ಸಂರಕ್ಷಕಗಳನ್ನು ಬಳಸದೇ ದೀರ್ಘಕಾಲ ಸುರಕ್ಷಿತವಾಗಿ ಮತ್ತು ಅದರ ರುಚಿ ಹಾಗೂ ಪೋಷಕಾಂಶ ಕೆಡದಂತೆ ಇಡಲು ತನ್ನದೇ ಆದ ಸ್ವಂಂತ ಎಚ್ಪಿಪಿ ಶೀಥಲೀಕರಣ ತಂತ್ರಜ್ಞಾನ ಹೊಂದಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿರುವ ಇತರ ಸಿದ್ಧ ಆಹಾರಗಳಿಗಿಂತ ಭಿನ್ನವಾಗಿದ್ದು, ಆರೋಗ್ಯದ ಬೆಳವಣಿಗೆಗೆ ಪೂರಕವಾಗಿದೆ.

ನೂರಕ್ಕೂ ಹೆಚ್ಚಿನ ಪ್ರತ್ಯೇಕ, ಅಧಿಕೃತವಾಗಿ ಆರಿಸಲಾದ ಆಹಾರಗಳನ್ನು ಈ ಸಂಸ್ಥೆ ತಯಾರಿಸಿದೆ. ಈ ಆಹಾರಗಳನ್ನು ನುರಿತ ಶೆಫ್ಗಳು, ಪೋಷಕಾಂಶ ತಜ್ಞರು, ಆಹಾರ ತಂತ್ರಜ್ಞಾನ ತಜ್ಞರ ಪರಿಣತ ಮೇಲ್ವಿಚಾರಣೆ ಅಡಿಯಲ್ಲಿ ಬೃಹತ್ ಪ್ರಮಾಣದ ಅಡುಗೆ ಮನೆಗಳಲ್ಲಿ ತಯಾರಿಸಲಾಗುತ್ತದೆ. ಈ ಆಹಾರಗಳು ದೊಡ್ಡ ವೈವಿಧ್ಯತೆಯ ಅಧಿಕೃತ, ರುಚಿಕರ, ಪೋಷಕಾಂಶಯುತ ಮತ್ತು ನೈರ್ಮಲ್ಯಯುತ ಪದಾರ್ಥಗಳನ್ನು ಸಾದರಪಡಿಸುತ್ತಿದ್ದು, ಇವು ಅನುಕೂಲಕರ, ತೃಪ್ತಿದಾಯಕ ಮತ್ತು ಕೈಗೆಟುಕುವ ಬೆಲೆ ಹೊಂದಿವೆ.

ಇವುಗಳ ಪ್ರಾರಂಭಿಕ ಬೆಲೆ ಕನಿಷ್ಠ ₹ 80ರಿಂದ ಗರಿಷ್ಠ ₹ 120 ಆಗಿದೆ.ಒಂದು ಬಿರಿಯಾನಿ ಬೆಲೆ ₹ 130 ಮತ್ತು ಅದಕ್ಕಿಂತ ಕಡಿಮೆ ಇರುತ್ತದೆ. ಹಾಗೆಯೇ ಸೀ ಫುಡ್ನ ಬೆಲೆ ₹ 130 ಆಗಿದೆ. ನ್ಯೂಟಿ ಭಾರತದಲ್ಲಿ ನಾನ್ ಥರ್ಮಲ್ ಎಚ್ಪಿಪಿ ತಂತ್ರಜ್ಞಾನವನ್ನು ಆಹಾರದಲ್ಲಿ ಬಳಸುವ ಮೊದಲ ಕಂಪನಿಯಾಗಿದ್ದು, ಇದು 5 ಲಕ್ಷಕ್ಕೂ ಹೆಚ್ಚಿನ ಹಾಗೂ ವಿಸ್ತೃತ ಬಾಳಿಕೆ ಇರುವ ಆಹಾರಗಳು ಮತ್ತು ಮೇಲೋಗರ ಹೊಂದಿರುವ ಸೇವೆ ಕೈಗೊಳ್ಳಲು ನೆರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.