ಚಂಬಾ: ಹಿಮಾಚಲ ಪ್ರದೇಶದಲ್ಲಿ ಚಾರಣ ನಡೆಸಿದ್ದ ಹತ್ತು ಮಂದಿ ವಿದೇಶಿಯರು ಸೇರಿ 16 ಜನರೊಂದಿಗೆ ಸಂಪರ್ಕ ಕಡಿತಗೊಂಡಿದೆ. ಚಂಬಾದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಚಾರಣಿಗರೊಂದಿಗೆ ಸಂಪರ್ಕ ಸಾಧ್ಯವಾಗಿಲ್ಲ.

ಪವರ್ತರೋಹಣ ತಜ್ಞರು, ಪೊಲೀಸರು ಹಾಗೂ ಸ್ಥಳೀಯರ ತಂಡ ಪರ್ವತ ಪ್ರದೇಶದಲ್ಲಿ ಹುಡುಕುವ ಕಾರ್ಯ ಮುಂದುವರಿಸಿದ್ದಾರೆ.

ಕೆಳ ದಿನಗಳ ಹಿಂದೆ ಐಐಟಿ ರೂರ್ಕಿಯ 45 ವಿದ್ಯಾರ್ಥಿಗಳು, ಭಾರತೀಯ ಮೂಲದ ಐವರು ಅಮೆರಿಕ ಪ್ರಜೆಗಳು ಹಾಗೂ ಇಬ್ಬರು ಜರ್ಮನಿಯ ಚಾರಣಿಗರನ್ನು ಹಿಮಾಚಲದ ಹಿಮಾವೃತ ಪ್ರದೇಶಗಳಿಂದ ರಕ್ಷಿಸಲಾಗಿತ್ತು. ಗಡಿ ಪ್ರದೇಶಗಳ ರಸ್ತೆಗಳ ನಿರ್ವಹಣೆ ವಹಿಸಿರುವ ಸಂಸ್ಥೆ(ಬಿಆರ್ಒ) ಹಾಗೂ ಜಿಲ್ಲಾಡಳಿತ ಜಂಟಿ ಕಾರ್ಯಾಚರಣೆ ನಡೆಸಿತ್ತು.

ಸೆಪ್ಟೆಂಬರ್ ಮಧ್ಯದಿಂದ ರಾಜ್ಯದಲ್ಲಿ ಅಧಿಕ ಮಳೆ ಮತ್ತು ಹಿಮ ಸುರಿಯುತ್ತಿದ್ದು, ಬಹುತೇಕ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಭಾರತೀಯ ವಾಯುಪಡೆ ಮತ್ತು ಬಿಆರ್ಒ ಸಿಬ್ಬಂದಿ ನಿರಂತರ ಶ್ರಮದಿಂದ ಹಿಮಾವೃತ ಪ್ರದೇಶಗಳಲ್ಲಿ ಸಿಲುಕಿದ್ದ ಅನೇಕರನ್ನು ರಕ್ಷಿಸಿ ಸ್ಥಳಾಂತರಿಸಲಾಗಿದೆ. ಇನ್ನೂ ಕೆಲ ಭಾಗಗಳಲ್ಲಿ ವಾಯುಪಡೆ ಹೆಲಿಕಾಪ್ಟರ್ಗಳ ಮೂಲಕ ಆಹಾರ ಮತ್ತು ಅಗತ್ಯ ಪದಾರ್ಥಗಳನ್ನು ತಲುಪಿಸಿದೆ. ಇದೀಗ ಚಂಡೀಗಢ–ಮನಾಲಿ ಸೇರಿದಂತೆ ಹಿಮಾಚಲದ 600 ರಸ್ತೆಗಳು ಸಂಚಾರಕ್ಕೆ ಮುಕ್ತಗೊಳಿಸಿರುವುದಾಗಿ ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.