ನವದೆಹಲಿ: ಇಲ್ಲಿನ ಕರ್ತವ್ಯಪಥದಲ್ಲಿ ಜ. 26ರಂದು ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡ ಮಹಿಳೆಯರ ಸಬಲೀಕರಣ ಕುರಿತ ಒಡಿಶಾದ ಸ್ತಬ್ಧಚಿತ್ರಕ್ಕೆ ನಿರ್ಣಾಯಕರ ಮೊದಲ ಬಹುಮಾನ ದೊರೆತಿದೆ. ಧೋರ್ಡೊ ಪ್ರವಾಸೋದ್ಯಮ ಗ್ರಾಮ ಕುರಿತ ಗುಜರಾತ್‌ನ ಸ್ತಬ್ಧಚಿತ್ರಕ್ಕೆ ಜನರ ಮೆಚ್ಚುಗೆಯ ಬಹುಮಾನ ಲಭಿಸಿದೆ.

ಸಂಸ್ಕೃತಿ ಸಚಿವಾಲಯ ಸಿದ್ಧಪಡಿಸಿದ್ದ ‘ಪ್ರಜಾಪ್ರಭುತ್ವ ತಾಯಿ ಭಾರತ’ ಎಂಬ ಸ್ತಬ್ಧಚಿತ್ರ ಎಲ್ಲಾ ಸ್ತಬ್ಧಚಿತ್ರಗಳಲ್ಲೇ ಅತ್ಯುತ್ತಮ ಎಂದೆನಿಸಿಕೊಂಡು ಬಹುಮಾನ ಪಡೆದಿದೆ. ಗೃಹ ಸಚಿವಾಲಯದ ‘ವಿಶೇಷ ಗ್ರಾಮಗಳು’ ಎಂಬ ಸ್ತಬ್ಧಚಿತ್ರಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.

ಒಟ್ಟು 16 ಸ್ತಬ್ಧಚಿತ್ರಗಳು ಈ ಬಾರಿ ಗಣರಾಜ್ಯೋತ್ಸವದಲ್ಲಿ ಪ್ರದರ್ಶನಗೊಂಡವು. ಅರುಣಾಚಲ ಪ್ರದೇಶ, ಹರಿಯಾಣ, ಮಣಿಪುರ, ಮಧ್ಯಪ್ರದೇಶ, ಒಡಿಶಾ, ಛತ್ತೀಸಗಢ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ಲಡಾಖ್, ತಮಿಳುನಾಡು, ಗುಜರಾತ್, ಮೇಘಾಲಯ, ಜಾರ್ಖಂಡ್, ಉತ್ತರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸ್ತಬ್ಧಚಿತ್ರಗಳು ಕರ್ತವ್ಯಪಥದಲ್ಲಿ ಪ್ರದರ್ಶನಗೊಂಡವು.

ದೆಹಲಿಯ ಕಂಟೋನ್ಮೆಂಟ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಲಿದೆ.
.75ನೇ ಗಣರಾಜ್ಯೋತ್ಸವ ಪರೇಡ್: ಸಂಸ್ಕೃತಿ ಸಚಿವಾಲಯದ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.