ನವದೆಹಲಿ: ಪಶ್ಚಿಮ ಬಂಗಾಳದ ನಾಲ್ಕು ಕ್ಷೇತ್ರಗಳು ಸೇರಿ ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ.

ಜುಲೈ 10 ರಂದು ಉಪಚುನಾವಣೆಗೆ ದಿನಾಂಕ ನಿಗದಿ ಮಾಡಿದೆ.

ರುಪೌಲಿ (ಬಿಹಾರ), ರಾಯ್ಗಂಜ್, ರಣಘಾಟ್ ದಕ್ಷಿಣ, ಬಾಗ್ಡಾ ಮತ್ತು ಮಾಣಿಕ್ತಾಲಾ (ಪಶ್ಚಿಮ ಬಂಗಾಳ), ವಿಕ್ರವಂಡಿ (ತಮಿಳುನಾಡು), ಅಮರವಾರ (ಮಧ್ಯಪ್ರದೇಶ), ಬದರಿನಾಥ್ ಮತ್ತು ಮಂಗಳೌರ್ (ಉತ್ತರಾಖಂಡ), ಜಲಂಧರ್ ಪಶ್ಚಿಮ (ಪಂಜಾಬ್) ಮತ್ತು ಡೆಹ್ರಾ, ಹಮೀರ್ಪುರ ಮತ್ತು ನಲಗಢ (ಹಿಮಾಚಲ ಪ್ರದೇಶ) ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ನಡೆಯಲಿವೆ.

ಜೂನ್ 14ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಜೂನ್ 21ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜೂನ್ 24ರಂದು ಮತಯಂತ್ರಗಳ ಪರಿಶೀಲನೆ ನಡೆಯಲಿದ್ದು, 26ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ಜುಲೈ 13 ರಂದು ಮತಎಣಿಕೆ ನಡೆಯಲಿದ್ದು, ಜುಲೈ 15ರೊಳಗೆ ಉಪಚುನಾವಣೆ ಪೂರ್ಣಗೊಳಿಸಬೇಕು ಎಂದು ಚುನಾವಣಾ ಆಯೋಗ ಹೇಳಿದೆ.

ಹಾಲಿ ಸದಸ್ಯರು ಮೃತಪಟ್ಟರೆ ಅಥವಾ ರಾಜೀನಾಮೆಯಿಂದ ಅವರ ಸ್ಥಾನ ತೆರವಾದರೆ ಉಪಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.