ಇವಿಎಂ ಹಾಗೂ ಇದರ ಕಾರ್ಯವಿಧಾನವು ಸಂಪೂರ್ಣ ಪಾರದರ್ಶಕವಾಗಿದೆ ಎಂಬುದನ್ನು ಆಯೋಗವು ಖಚಿತ ಪಡಿಸಬೇಕು. ಇಲ್ಲವಾದಲ್ಲಿ ಈ ಯಂತ್ರದ ಬಳಕೆಯನ್ನು ನಿಷೇಧಿಸಬೇಕು. ಪ್ರಜಾಸತ್ತಾತ್ಮಕವಾದ ಎಲ್ಲ ಸಂಸ್ಥೆಗಳನ್ನು ಕೈವಶ ಮಾಡಿಕೊಂಡ ಈ ಹೊತ್ತಿನಲ್ಲಿ, ಸಾರ್ವಜನಿಕರಿಗೆ ಪಾರದರ್ಶಕವಾಗಿರುವ ಚುನಾವಣಾ ಪ್ರಕ್ರಿಯೆಯೊಂದೇ ಕೊನೆಯ ರಕ್ಷಣೆಯಾಗಿದೆ.
-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಈ ಚುನಾವಣೆಯ ಉದ್ದಕ್ಕೂ ಎಷ್ಟು ಇವಿಎಂಗಳು ದೋಷಪೂರಿತವಾಗಿದ್ದವು ಎಂಬುದನ್ನು ಮೊದಲು ಆಯೋಗ ಅಂಕಿ–ಅಂಶಗಳನ್ನು ಬಿಡುಗಡೆ ಮಾಡಬೇಕು. ಎಷ್ಟು ಇವಿಎಂಗಳು ತಪ್ಪು ಸಮಯ, ದಿನಾಂಕವನ್ನು ತೋರಿಸಿವೆ? ಎಷ್ಟು ಮತಗಳು ಇವಿಎಂನಲ್ಲಿ ದಾಖಲಾಗಿವೆ? ಎಷ್ಟು ಕಂಟ್ರೋಲ್ ಯೂನಿಟ್‌ಗಳನ್ನು ಹಾಗೂ ಬ್ಯಾಲೆಟ್ ಯೂನಿಟ್‌ಗಳನ್ನು ಬದಲಾಯಿಸಲಾಗಿದೆ? ಅಣಕು ಮತದಾನದ ವೇಳೆ ಎಷ್ಟು ಇವಿಎಂಗಳಲ್ಲಿ ದೋಷ ಕಂಡುಬಂದಿತ್ತು?
-ಗೌರವ್ ಗೊಗೊಯ್, ಕಾಂಗ್ರೆಸ್ ನಾಯಕ
ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ ಹಾಗೂ ಇತರ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ 80 ಕ್ಷೇತ್ರಗಳ ಮತ ಎಣಿಕೆಯನ್ನು ಸರಿಯಾಗಿ ನಡೆಸಿದರೆ, ಈ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಸೋಲಲಿದೆ. ಆಗ ಈಗಿನ ಬಿಜೆಪಿ ಸರ್ಕಾರವು ಅಧಿಕಾರ ಕಳೆದುಕೊಳ್ಳಲಿದೆ. ಇವಿಎಂ ಕುರಿತು ಎದ್ದಿರುವ ವಿಚಾರಗಳ ಕುರಿತು ಸುಪ್ರೀಂ ಕೋರ್ಟ್ ಹಾಗೂ ಚುನಾವಣಾ ಆಯೋಗವು ಕಠಿಣ ನಿರ್ಧಾರ ಕೈಗೊಳ್ಳಬೇಕು
-ಸಂಜಯ್ ಸಿಂಗ್, ಎಎಪಿ ನಾಯಕ
ತನಿಖೆ ಪೂರ್ಣಗೊಳ್ಳುವವರೆಗೂ ವಾಯ್ಕರ್ ಅವರು ಸಂಸದರಾಗಿ ಪ್ರಮಾಣವಚನ ಪಡೆಯುವುದನ್ನು ತಡೆಯಬೇಕು. ಇದೇ ನಿಜವಾದ ಪ್ರಜಾಪ್ರಭುತ್ವ.
-ಸಂಜಯ್ ರಾವುತ್, ಶಿವಸೇನಾ (ಉದ್ಧವ್ ಬಣ) ನಾಯಕ
ಒಂದು ವೇಳೆ ಇವಿಎಂ ಇಲ್ಲದೆ ನ್ಯಾಯಯುತವಾಗಿ ಚುನಾವಣೆಯನ್ನು ನಡೆಸಿದ್ದರೆ, ಬಿಜೆಪಿಯು 240 ಸ್ಥಾನಗಳನ್ನು ಅಲ್ಲ, 40 ಸ್ಥಾನಗಳನ್ನೂ ಗೆಲ್ಲುತ್ತಿರಲಿಲ್ಲ.
-ಆದಿತ್ಯ ಠಾಕ್ರೆ, ಶಿವಸೇನಾ (ಉದ್ಧವ್ ಬಣ) ನಾಯಕ
ಇವಿಎಂ ಹ್ಯಾಕ್ ಮಾಡಬಹುದಿದ್ದರೆ, ಕಾಂಗ್ರೆಸ್ ಇಷ್ಟು ಸ್ಥಾನ ಗೆಲ್ಲುತ್ತಿತ್ತೇ? ಸುಳ್ಳು ಸುದ್ದಿ ಹರಡುತ್ತಿರುವ ‘ಇಂಡಿಯಾ’ ನಾಯಕರು ಕ್ಷಮೆ ಕೇಳಬೇಕು
-ಸಂಜಯ್ ನಿರುಪಮ್, ಶಿವಸೇನಾ ನಾಯಕ
ನಮ್ಮ ಅಧಿಕಾರಿಗಳೊಬ್ಬರು ಬಳಸುತ್ತಿದ್ದ ಮೊಬೈಲ್‌ವೊಂದು ಅಕ್ರಮವಾಗಿ ಬೇರೊಬ್ಬರ ಕೈ ಸೇರಿದ್ದು ದುರದೃಷ್ಟಕರ. ಈ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ.
-ವಂದನಾ ಸೂರ್ಯವಂಶಿ, ಚುನಾವಣಾಧಿಕಾರಿ
ಒಟಿಪಿಯನ್ನು ಬಳಸಿಕೊಂಡು ಇವಿಎಂಗಳನ್ನು ತೆರೆಯಲಾಗಿದೆ ಎಂದು ನಮ್ಮ ಠಾಣೆಯ ಯಾವ ಅಧಿಕಾರಿಯೂ ಯಾರಿಗೂ ಮಾಹಿತಿ ನೀಡಿಲ್ಲ.
-ಠಾಣೆ ಅಧಿಕಾರಿಗಳು, ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವನರಾಯ್ ಠಾಣೆ