‘ಡಾನಾ’ ಕುರಿತು ಭಯಭೀತರಾಗಬೇಡಿ. ಒಡಿಶಾವು ಇಂಥ ಹಲವು ಚಂಡಮಾರುತ ಗಳನ್ನು ಈ ಹಿಂದೆ ಎದುರಿಸಿದೆ. ಈ ಚಂಡ ಮಾರುತಗಳನ್ನು ಜನರು ಧೈರ್ಯದಿಂದ ಎದುರಿಸಿದ್ದಾರೆ. ಈ ಬಾರಿಯೂ ನಾವೆಲ್ಲರೂ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳೋಣ. ನಮ್ಮನ್ನು ನಾವು ಸುರಕ್ಷಿತವಾಗಿ ಇರಿಸಿಕೊಳ್ಳುವುದರ ಜೊತೆಯಲ್ಲಿ ನಮ್ಮ ಪ್ರೀತಿಪಾತ್ರರ ರಕ್ಷಣೆಯನ್ನೂ ಮಾಡೋಣ. ಪರಿಹಾರ ಕಾರ್ಯಗಳಲ್ಲಿ ನಿರತವಾಗಿರುವ ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡಿ. ಹೆಚ್ಚಿನ ಅವಘಡಗಳಾಗದಂತೆ, ಹಾನಿಯಾಗದಂತೆ ನಾವೆಲ್ಲರೂ ಒಟ್ಟುಗೂಡಿ ‘ಡಾನಾ’ವನ್ನು ಎದುರಿಸೋಣ. ನಾವೆಲ್ಲರೂ ಹೀಗೆ ಒಗ್ಗೂಡಿ ಕೆಲಸ ಮಾಡಿದರೆ, ಇದು ಸಾಧ್ಯವಾಗಲಿದೆ ಎಂಬ ನಂಬಿಕೆ ನನಗಿದೆ.