ಚೆನ್ನೈ: ಕಾಟ್ಪಾಡಿ ಜಂಕ್ಷನ್ ಬಳಿ ಚೆನ್ನೈ ಹಾಗೂ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ 22 ಬೋಗಿಗಳುಳ್ಳ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಪ್ರತ್ಯೇಕಗೊಂಡ ಘಟನೆ ಶುಕ್ರವಾರ ನಡೆದಿದೆ.

ಈ ಘಟನೆಯು ಬೆಳಿಗ್ಗೆ 8.50ಕ್ಕೆ ವೆಲ್ಲೂರು ಜಿಲ್ಲೆಯ ತಿರುವಲಂ ನಿಲ್ದಾಣದಲ್ಲಿ ನಡೆದಿದೆ. ದಿಬ್ರುಗಡ – ಕನ್ಯಾಕುಮಾರಿ ವಿವೇಕ ಎಕ್ಸ್ಪ್ರೆಸ್ ರೈಲು ಕಾಟ್ಪಾಡಿ ರೈಲ್ವೆ ನಿಲ್ದಾಣದತ್ತ ಹೊರಟಿತ್ತು. ಬೋಗಿಗಳಿಂದ ಎಂಜಿನ್ ಪ್ರತ್ಯೇಕಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

‘ಪ್ರತ್ಯೇಕಗೊಂಡ ಎಂಜಿನ್ ಸುಮಾರು 500 ಮೀಟರ್ ಸಾಗಿತು. ಬೋಗಿ ಪ್ರತ್ಯೇಕಗೊಂಡಿದ್ದನ್ನು ಗಮನಿಸಿ ನಂತರ ನಿಲ್ಲಿಸಲಾಯಿತು. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಎಂಜಿನ್ – ಬೋಗಿ ಜೋಡಣಾ ಕೊಂಡಿ ಮುರಿದಿದ್ದೇ ಘಟನೆಗೆ ಕಾರಣ. ತನಿಖೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಿಂದಾಗಿ ಈ ಮಾರ್ಗದಲ್ಲಿ ಎರಡು ಗಂಟೆಗಳ ಕಾಲ ರೈಲು ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಯಿತು. ಕರ್ನಾಟಕ ಹಾಗೂ ತಮಿಳುನಾಡು ನಡುವೆ ಸಂಚರಿಸುವ ಬೃಂದಾವನ್ ಹಾಗೂ ಡಬ್ಬಲ್ ಡೆಕ್ಕರ್ ಎಕ್ಸ್ಪ್ರೆಸ್ಗಳೂ ವಿಳಂಬವಾಗಿ ಸಂಚರಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.