ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ–ಚೀನಾ ಗಡಿ | ನದಿಯಲ್ಲಿ ಸಿಲುಕಿದ ಯುದ್ಧ ಟ್ಯಾಂಕರ್‌; ಐವರು ಯೋಧರು ನೀರುಪಾಲು

Published 29 ಜೂನ್ 2024, 7:25 IST
Last Updated 29 ಜೂನ್ 2024, 7:25 IST
ಅಕ್ಷರ ಗಾತ್ರ

ನವದೆಹಲಿ/ಲೇಹ್‌: ಯುದ್ಧ ತಾಲೀಮು ನಡೆಸುತ್ತಿದ್ದ ಐವರು ಯೋಧರು ಶ್ಯೋಕ್‌ ನದಿಯಲ್ಲಿ ಕೊಚ್ಚಿಹೋದ ಘಟನೆ ಪೂರ್ವ ಲಡಾಖ್‌ನಲ್ಲಿ ನಡೆದಿದೆ. 

‘ಶುಕ್ರವಾರ ರಾತ್ರಿ ಮಿಲಿಟರಿ ತಾಲೀಮು ನಡೆಸುತ್ತಿದ್ದ ವೇಳೆ ನದಿಯ ನೀರಿನ ಮಟ್ಟ ದಿಢೀರ್‌ ಏರಿಕೆಯಾದ ಪರಿಣಾಮ ಯುದ್ಧ ಟ್ಯಾಂಕರ್‌ ನದಿಯಲ್ಲಿ ಸಿಲುಕಿ, ಅದರಲ್ಲಿದ್ದ ಐವರು ನೀರಿನಲ್ಲಿ ಕೊಚ್ಚಿಹೋದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ರಕ್ಷಣಾ ಪಡೆಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ನೀರಿನ ರಭಸ ವಿಪರೀತವಾಗಿದ್ದರಿಂದ ಸೈನಿಕರ ಜೀವ ಉಳಿಸಲು ಸಾಧ್ಯವಾಗಲಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

‘ಹಿಮಗಡ್ಡೆಗಳು ಕರಗುತ್ತಿರುವುದರಿಂದ ಶ್ಯೋಕ್‌ ನದಿಯ ನೀರಿನ ಮಟ್ಟ ಏರಿಕೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT