ಅಸನ್ಸೋಲ್ (ಪಶ್ಚಿಮ ಬಂಗಾಳ): ‘ಬೆಡ್ ಟೀ ಕೊಡುವುದನ್ನು ತಡ ಮಾಡಿದರು. ಹೀಗಾಗಿ ನಾನು ತಡವಾಗಿ ಎದ್ದೆ. ನನಗೇನೂ ಗೊತ್ತಿಲ್ಲ..,’ ಇದು ತಮ್ಮದೇ ಕ್ಷೇತ್ರದಲ್ಲಿ ಸಂಭವಿಸಿದ ಘರ್ಷಣೆ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ನಟಿ ಮೂನ್ ಮೂನ್ ಸೇನ್ ನೀಡಿದ ಉತ್ತರ.

ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಿಗೆ ಸೋಮವಾರ ನಾಲ್ಕನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಪ್ರತಿಷ್ಠಿತ ಅಸನ್ಸೋಲ್ ಕ್ಷೇತ್ರದಲ್ಲಿ ಟಿಎಂಸಿ ಕಾರ್ಯಕರ್ತರು ಮತ್ತು ಸಿಆರ್ಪಿಎಫ್ ಸಿಬ್ಬಂದಿ ನಡುವೆ ಘರ್ಷಣೆ ಸಂಭವಿಸಿದೆ. ಅಲ್ಲದೆ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಬುಲ್ ಸುಪ್ರಿಯೋ ಅವರ ಕಾರಿನ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ಮಾಡಿ ಜಖಂಗೊಳಿಸಿದ್ದಾರೆ.ಈ ಕುರಿತು ವರದಿಗಾರರು ಅದೇ ಕ್ಷೇತ್ರದ ಟಿಎಂಸಿ ಅಭ್ಯರ್ಥಿಯೂ ಆಗಿರುವ ಮೂನ್ ಮೂನ್ ಸೇನ್ ಅವರ ಪ್ರತಿಕ್ರಿಯೆ ಕೇಳಿದಾಗ ‘ ನನಗೇನೂ ಗೊತ್ತಾಗಿಲ್ಲ. ನಾನಿಂದು ತಡವಾಗಿ ಎಚ್ಚರಗೊಂಡೆ. ನನಗೆ ಮನೆಯಲ್ಲಿ ಬೆಡ್ ಟೀ ಅನ್ನು ತಡವಾಗಿ ಕೊಡಲಾಯಿತು. ಹೀಗಾಗಿ ಎದ್ದದ್ದು ತಡವಾಯಿತು. ನನಗೆ ನಿಜವಾಗಿಯೂ ಏನೂ ಗೊತ್ತಿಲ್ಲ. ಹೀಗಿರುವಾಗ ನಾನು ಏನು ಹೇಳಲಿ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಘರ್ಷಣೆ: ಬಿಜೆಪಿ ಅಭ್ಯರ್ಥಿ ಕಾರು ಜಖಂ

ನ್ನು ಬಬುಲ್ ಸುಪ್ರಿಯೋ ಅವರ ಕಾರಿನ ಮೇಲೆ ನಡೆದ ದಾಳಿಯ ಬಗ್ಗೆ ಕೇಳಿದಾಗ ‘ಅತನ ಹೆಸರೆತ್ತಬೇಡಿ. ನಾನು ಮುಂದೆ ಮಾತನಾಡುವುದಿಲ್ಲ,’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.